ಅಪ್ಪನೆಂದರೆ ಆಲದ ಮರ,
ಅಪ್ಪನೆಂದರೆ ವಿಶಾಲ ಆಕಾಶ..
ಅವ್ವ ನಮಗೆಲ್ಲ ಜೀವ, ನೀಡಿ
ನಮ್ಮನ್ನು ಸಾಕಿ ಸಲಹಿದರೆ …
ಹೊರಗಿನ ಬದುಕಿನ
ಪ್ರಪಂಚವನ್ನು ತೋರಿಸುವ
ಆಕಾಶವೇ ಸರಿ….
ತಾನು, ಅಕ್ಷರ ಕಲಿಯದೇ
ಇದ್ದರೂ, ನಮ್ಮ್ನನ್ನು
ಯಾರಿಗೂ ಕಡಿಮೆ ಇಲ್ಲದ
ನಗರ, ಪಟ್ಟಣ ಗಳ
ಸಿರಿವಂತ ಜನರ ಮಕ್ಕಳು
ಓದುವ ಸ್ಕೂಲ್ ಗೇ
ಶೇಂಗಾ ಮಾರಿದ ಹಣದ
ಪಟ್ಟಿ ನಮ್ಮ ಮಾವನ ಕೈಯಲ್ಲಿ
ಕೊಟ್ಟು ಪದ್ವಿ, ಜೀವನ ಶಿಕ್ಷಣ
ಕೊಡಿಸಿದ…. ಅಪ್ಪ….
ನನಗೆ, ರೋಲ್ ಮಾಡೆಲ್.
ಯಾವ್ ಸಿನಿಮಾ ನಟ ಅಲ್ಲ
ಹೊಲದಲಿ ಬೇವರಿಲಿಸಿ
ದುಡಿವ ಯಾವುದೇ ಕೃಷಿ ಪದವೀಧರ,
ಕೃಷಿ ಅಧಿಕಾರಿಗಿಂತ
ಈ ಬದುಕು ಪ್ರಕೃತಿ ಕಲಿಸಿದ
ಜಾವರಿ ಕೃಷಿ ಪದವೀಧರ.
ಬೇಕು, ಬೇಡಗಳನ್ನು ಪೂರೈಸುವ
ತಾನು ಹರಿದ ಬಟ್ಟೆ ಹುಟ್ಟರು
ಅರೆ ಹೊಟ್ಟೆಯಲ್ಲಿದ್ದರೂ
ಮಕ್ಕಳಿಗೆ.. ಅವ್ವ ನಿಗೆ
ಕೇಳಿದ್ದು ತಂದುಕೊಡುವ
ತ್ಯಾಗಮಯಿ...ಈ ಅಪ್ಪ..
ನನ್ನಪ್ಪ,.,...ಸಣ್ಣಪ್ಪಳ ಬಸಪ್ಪ
ಬಸವನಂಗೆ... ದುಡಿದು, ಮೈ ಹಣ್ಣಾಗಿ
ಕಡೆಗೆ.. ತಾ, ಉತ್ತಿ, ಊಳಿದ ಮಣ್ಣಾಲಿ,
ಅಂಗಾತ... ಮಲಿಗಿ ಬಿಟ್ಟ..ಅಪ್ಪ.
ನಿಮ್ಮ ಅಪ್ಪನೂ.. ತ್ಯಾಗಮಹಿ
ಯಾಕಾಗಬರ್ದಲ್ಲವೇ....!!??