5 ಕೋಟಿ ರೂಗಳಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಸ್ವಚತೆ ಕಾರ್ಯಕ್ಕೆ ಚಾಲನೆ ನೀಡಿ ಶಾಸಕ ಬಿ ದೇವೇಂದ್ರಪ್ಪ ಪಪಂ ಅಧಿಕಾರಿಗಳಿಗೆ ತರಾಟೆ
ಬೆಳ್ಳಂ ಬೆಳಿಗ್ಗೆ ಸಿಟಿ ರೌಂಡ್ಸ್ ಹಳೆ ಬಸ್ ನಿಲ್ದಾಣದಿಂದ ಮಹಾತ್ಮ ಗಾಂಧಿ ಬಸ್ ನಿಲ್ದಾಣದವರೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ ಶಾಸಕರು ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ಸವಿದರು.
ಜಗಳೂರು ಪಟ್ಟಣದ ಮಹಾತ್ಮಗಾಂಧಿ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣಗಳಲ್ಲಿ ಭಾನುವಾರ ಸ್ವಚತೆ ಕಾರ್ಯಕ್ಕೆ ಶಾಸಕರು ಚಾಲನೆ ನೀಡಿ ನಂತರ ಮಾತನಾಡಿದರು ಜಗಳೂರು ನಗರ ದಿನೆ ದಿನೆ ಬೆಳೆಯುತ್ತಿದ್ದು ಪಟ್ಟಣದ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಸಚಿವರಾದ ಜಮಿರ್ ಆಹಮದ್ ರವರು 5 ಕೊಟಿ ಅನುದಾನ ಮಂಜೂರು ಕಲ್ಪಿಸಿದ್ದು ಶೀಘ್ರವಾಗಿ ಅವಶ್ಯಕತೆಗೆ ತಕ್ಕಂತೆ ಪ್ರತಿಯೊಂದು ವಾರ್ಡಗಳಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಪಟ್ಟಣದಲ್ಲಿ ಕಳೆದ ನಗರೋತ್ಥನ ಯೋಜನೆಡಿಯಲ್ಲಿ ಸರಿಯಾದ ರೀತಿ ಕಾಮಗಾರಿ ನಡೆದಿಲ್ಲ ಎಂಬ ಕೂಗು ಸಾರ್ವಜನಿಕ ವಲಯದಲ್ಲಿದೆ ಒಂದು ವೇಳೆ ಲೋಪವಾಗಿದ್ದರೆ ಅಂತವರ ವಿರುದ್ದ ದೂರು ನೀಡಿ ಕ್ರಮಕೈಗೋಳ್ಳಲಾಗುವುದು ಎಂದರು . ಪಪಂ ಮುಖ್ಯಾಧಿಕಾರಿ ಮತ್ತು ಪಟ್ಟಣದ 18 ವಾರ್ಡಿನ ಸದಸ್ಯರು ಸಹ ಸಮನ್ವಯತೆಯಿಂದ ಕೆಲಸ ಮಾಡಿ ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುವಂತೆ ಕರೆ ನೀಡಿದರು.
ನಗರ ಸ್ವಚವಾಗಿದ್ದರೆ ಜನರ ಆರೋಗ್ಯ ಉತ್ತಮವಾಗಿರುತ್ತದೆ ಅದ್ದರಿಂದ ಶೌಚಾಲಯಗಳ ಸುತ್ತ ಮುತ್ತ ಮತ್ತು ನಗರದ ಪ್ರಮುಖ ಬೀದಿಗಳಲ್ಲಿ ಸ್ವಚತೆಗೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣದ ಭುವನೇಶ್ವರಿ ವೃತ್ತದಲ್ಲಿನ ಶೌಚಾಲಯವನ್ನ ಪುನರ್ ಸ್ಥಾಪಿಸುವುದರಿಂದ ನಾಗರೀಕರಿಗೆ ಅನೂಕೂಲವಾಗಲಿದೆ .ಈ ಶೌಚಾಲಯಕ್ಕೆ ಅಡ್ಡಲಾಗಿ ನಿರ್ಮಿಸಿರುವ ಗೂಡ ಅಂಗಡಿಗಳುನ್ನು ನಿರ್ದಾಕ್ಷಿಣ್ಯವಾಗಿ ತೆರವುಗೋಳಿಸಿ ಎಂದು ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ರವರಿಗೆ ತರಾಟೆ ತೆಗೆದುಕೊಂಡರು. ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಕಟ್ಟಡವನ್ನ ತೆರವುಗೋಳಿಸಿ ಎಂದು ಪಪಂ ಸದಸ್ಯ ರವಿಕುಮಾರ್ ಪಟ್ಟು ಹಿಡಿದರು .ಶಾಸಕರು ಸದಸ್ಯರನ್ನ ಸಮಾಧಾನಪಡಿಸಿ ವಯಕ್ತಿಕವಾಗಿ ಪಪಂ ಸದಸ್ಯರಲ್ಲಿ ಬಿನ್ನಭಿಪ್ರಾಯಗಳು ಎನೇ ಇರಲಿ ಜನರು ನಿಮ್ಮನ್ನು ಆಯ್ಕೆ ಮಾಡಿದ ಜನತೆಗೆ ಋಣ ತೀರಿಸಲು ನಗರದ ಅಭಿವೃದ್ಧಿಗೆ ಕೈಜೋಡಿಸುವಂತೆ ಸೂಚನೆ ನೀಡಿದರು.
ಜೋಗಪ್ಪನ ಗುಡಿ ಬಳಿಯಿದ್ದ ಜನರು ಅಂದು ಕೆರೆ ತುಂಬಿದ ಹಿನ್ನೆಲೆಯಲ್ಲಿ ಸುಮಾರು ಎರಡು ವರ್ಷಗಳಿಂದ.ಸ್ಥಳಾಂತರಗೊಂಡು ಪಪಂ ಮಳಿಗೆಗಳಲ್ಲಿ ವಾಸಿಸುವಂತಾಗಿದೆ ಇದುವರೆಗೂ
ನಮಗೆ ನಿವೇಶನ ರಹಿತರಿಗೆ ನಿವೇಶನ ಒದಗಿಸಿರುವುದಿಲ್ಲ ಎಂದು ನಿವಾಸಿಗಳು ಶಾಸಕರ ಬಳಿ ತಮ್ಮ ಅಳಲುನ್ನು ತೋಡಿಕೊಂಡರು.
ನಿರಾಶ್ರಿತರಿಗಾಗಿ ಸೂಕ್ತ ಸ್ಥಳವಕಾಶ ಹುಡುಕಲಾಗುವುದು
ಮರೆನಹಳ್ಳಿ ರಸ್ತೆಯಲ್ಲಿರುವ ಜಾಗದಲ್ಲಿ ಬೃಹತ್ತಾದ ಗುಂಡಿಗಳಿವೆ ಅವುಗಳನ್ನು ಮುಚ್ಚಿ ಕೊಡುವಂತೆ ಮುಖ್ಯಾಧಿಕಾರಿಗೆ ತಾಕೀತು ಮಾಡಿ ನಿವಾಸಿಗಳಿಗೆ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಆಹಮದ್. ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಮಹೇಶ್. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್.ಪಪಂ ಸದಸ್ಯರಾಸ ರಮೇಶ್ ರೆಡ್ಡಿ.ರವಿಕುಮಾರ್.ದೇವರಾಜ್.ಬೊರ್ ಮಂಜಣ್ಣ…ಮುಖಂಡ ಗೌರಿಪುರದ ಶಿವಣ್ಣ.ಕಾಂತರಾಜ್.ಪಟೇಲರು.ಮುಖಂಡ ಹಟ್ಟಿ ತಿಪ್ಪಣ್ಣ.ಪಪಂ ಆರೋಗ್ಯ ಅಧಿಕಾರಿ ಪ್ರಶಾಂತ್ ಸೇರಿದಂತೆ ಹಾಜರಿದ್ದರು.