ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆ . ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣೆ ಅಧಿಕಾರಿ ಎಸ್ ರವಿ ತಿಳಿಸಿದ್ದಾರೆ. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು

ಶುಕ್ರದೆಸೆ ನ್ಯೂಸ್ : ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023ರ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 29ರ ಬುಧವಾರ ರಿಂದಲೇ ತಾಲ್ಲೂಕಿನಾದ್ಯಂತ ಕಟ್ಟು ನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ತಾಲ್ಲೂಕು ಆಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು 31 ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದ್ದು.5 ಬಾಗಗಳಲ್ಲಿ ಚೆಕ್ ಪೋಸ್ಟ್ ಗಳುನ್ನು ತೆರೆಯಲಾಗಿದೆ .ಬಿದರಕೆರೆ ಮುಸ್ಟೂರು.ಗಡಿಮಾಕುಂಟೆ.ಮುಗ್ಗಿದರಾಗಿಹಳ್ಳಿ.ಕುರೇಮಾಗನಹಳ್ಳಿ.ಸೇರಿದಂತೆ ಪ್ಲೇಯಿಂಗ್ ಸ್ಕ್ವಾಡ್ ನೇಮಿಸಿ ಆಕ್ರಮವಾಗಿ ಸಾಗಿಸುವಂತ ಹಣ ಹೆಂಡ ಇನ್ನಿತರೆ ಕಾನೂನು ಬಾಹಿರ ಸಾಗಣೆ ಚಟುವಟಿಕೆ ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ತಾಲ್ಲೂಕದ್ಯಂತ ‌ಸಾರ್ವಜನಿಕ ಸಭೆ ಸಮಾರಂಭಗಳಿಗೆ ಪರವಾನಿಗೆ ತೆಗೆದುಕೊಳ್ಳಬೆಕು

ಈಗಾಗಲೇ ಚುನಾವಣಾ ವೇಳೆಪಟ್ಟಿ ,ದಿನಾಂಕ 13-04-2023ರ ಗುರುವಾರ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭ ಗೊಳ್ಳಲಿದೆ. ದಿನಾಂಕ 20-04-2023 ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ದಿನಾಂಕ.21-04-2023 ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ದಿ.24-04-2024 ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ದಿ.10-05-2023 ಬುಧವಾರ ಮತದಾನದ ಜರುಗಲಿದೆ. ದಿ.13-05-2023 ಶನಿವಾರ ಮತ ಎಣಿಕೆ ನಡೆಯಲಿದೆ ಹಾಗೂ 15-05-2023 ಸೋಮವಾರ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಜಗಳೂರು ವಿಧಾನ ಸಭಾ ಕ್ಷೇತ್ರ ಒಟ್ಟು ಮತದಾರರ ಸಂಖ್ಯೆ 1.89.209 ಪುರುಷರು, 95.928 ಮಹಿಳೆಯರು .ಹೆಣ್ಣು 93.269, ಇತರೆ, 12 .ಸೇವಾಮತದಾರರು‌ 71 .

ಕ್ಷೇತ್ರದಲ್ಲಿ 262 ಮತಗಟ್ಟೆಗಳಿವೆ. ಆನ್ಲೈನ್ ಮೂಲಕ ಮತಗಟ್ಟೆಯಲ್ಲಿ ನಡೆಯುವ ಪ್ರತಿ ಚಲನವಲನ ವೀಕ್ಷಣೆ ಮಾಡಬಹುದು.ವೆಬ್ ಕ್ಯಾಸ್ಟಿಂಗ್ ಮೂಲಕ ಚಿತ್ರೀಕರಣದ ವ್ಯವಸ್ಥೆ ಮಾಡಲಾಗುವುದು.

ಒಟ್ಟಾರೆಯಾಗಿ ಸುಗಮ, ಸುವ್ಯವಸ್ಥಿತ ಚುನಾವಣೆಗಾಗಿ ಸರ್ವ ರೀತಿಯಲ್ಲಿ ಚುನಾವಣೆ ನಡೆಸಲು ಸನ್ನದ್ಧವಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಜಿ ಸಂತೋಷಕುಮಾರ್ ಮಾತನಾಡಿ ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, ವಿಕಲಚೇತ ನರು, ಕೊರೊನಾ ಪೀಡಿತರು ಇಚ್ಚೆ ಪಟ್ಟಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಇದೆ. ಚುನಾವಣೆಗೆ ಮೂರು ದಿನಗಳ ಮುಂಚೆ ಸಂಬಂಧಿಸಿದಂತ ಬೂತ್ ಏಜೆಂಟರು, ಅಧಿಕಾರಿಗಲಳೊಂದಿಗೆ ಮನೆಗೆ ತೆರಳಿ ಗುಪ್ತವಾಗಿ ಮತದಾನ ಪ್ರಕ್ರಿಯೆ ನಡೆಸಲಾಗುವುದು. ಅಂಚೆ ಮತಗಳೊಂದಿಗೆ ಅಂತಹ ಮತಗಳ ಎಣಿಕೆ ಮಾಡಲಾಗುವುದು ಎಂದು ತಿಳಿಸಿದರು.

ಮತದಾರರ ಹೆಸರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಇರಬೇಕು. ಅಂತಹವರು ಚುನಾವಣಾ ಆಯೋಗ ನಿಗದಿ ಪಡಿಸಿದ ಗುರುತಿನ ಚೀಟಿಗಳ ಹಾಜರುಪಡಿಸಿ ಮತದಾನ ಮಾಡಬಹುದು. ಈ ಬಾರಿ ಆಯೋಗ ಇತರೆ 11 ಪರ್ಯಾಯ ಗುರುತಿನ ಚೀಟಿಗೂ ಅವಕಾಶ ಮಾಡಿಕೊಟ್ಟಿದೆ. ಪರ್ಯಾಯ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನಕ್ಕೆ ಅವಕಾಶ ಇಲ್ಲ. ಪಟ್ಟಿಯಲ್ಲಿ ಹೆಸರು ಇರ ಬೇಕು. ಮತದಾರರು ವೆಬ್ಸೈಟ್ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನ ಖಾತರಿ ಪಡಿಸಿಕೊಳ್ಳಬೇಕು ಎಂದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಧರ್ಮ, ಭಾಷೆ, ಜಾತಿ ಆಧರಿಸಿ ಮತ ಯಾಚನೆ ಮಾಡುವಂತಿಲ್ಲ. ಯಾರದ್ದೇ ಖಾಸಗಿ ಜೀವನ ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡು ವಂತಿಲ್ಲ. ದೇವಸ್ಥಾನ, ಚರ್ಚ್, ಪ್ರಾರ್ಥನಾ ಮಂದಿರ ದಲ್ಲೂ ಪ್ರಚಾರ ಕಾರ್ಯಕ್ಕೆ ಅವಕಾಶ ಇಲ್ಲ. ಮತಗಟ್ಟೆಗಳಿಗೆ ಅಭ್ಯರ್ಥಿಗೆ ಮಾತ್ರವೇ ಅವಕಾಶ ಇರುತ್ತದೆ. ಇತರರಿಗೆ ಇರುವುದಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರುಗಳಿಗೆ ಜಾಗೃತಿ ಮೂಡಿಸಿದರು.ಚುನಾವಣ ವೆಚ್ಚ 40.ಲಕ್ಷ ರೂ ಮಾತ್ರ ಖರ್ಚಾ ಮಾಡಬಹುದಾಗಿದೆ. ರಾಜಕೀಯ ಪಕ್ಷದ ಅಭ್ಯರ್ಥಿಗಳು ಹಾಗೂ ಚುನಾವಣೆ ನೀತಿ ನಿಯಮಗಳನ್ನು ತಪ್ಪದೆ ಪಾಲಿಸಿ ಸಹಕರಿಸುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಷಂಷೀರ್ ಆಹಮದ್.ಬಿ ಜೆ ಪಿ ಪಕ್ಷದ ಮಾಜಿ ತಾಲ್ಲೂಕು ಅಧ್ಯಕ್ಷ ಡಿ ವಿ ನಾಗಪ್ಪ. .ಎಎಪಿ. ಪಕ್ಷದ ಮುಖಂಡ ಇಬ್ರಾಹಿಂ. ಕಮುನಿಷ್ಟ ಪಕ್ಷದ ಮುಖಂಡ ಮಹಮದ್ ಭಾಷ. ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಸೇರಿದಂತೆ ಪ್ರಿಟಿಂಗ್ ಪ್ರೆಸ್ ಮಾಲಿಕರುಗಳು ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!