Logo
22 .2024
ಶುಕ್ರದೆಸೆ ನ್ಯೂಸ್, ಉಡುಪಿ : ಜಿಲ್ಲೆಯ ಬೈಂದೂರು ಉಪ ವಲಯ ಅರಣ್ಯ ಅಧಿಕಾರಿಯೋರ್ವ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೈಂದೂರು ವಲಯದ ಉಪವಲಯ ಅರಣ್ಯಧಿಕಾರಿ ಬಂಗಾರಪ್ಪ ಎಂಬಾತ ಲೋಕಾಯುಕ್ತ ಕೈಗೆ ತಗ್ಲಾಕೊಂಡಿದ್ದಾರೆ. ಅಧಿಕಾರಿಯು ಮರ ತೆರವುಗೊಳಿಸುವ ಅನುಮತಿಗಾಗಿ ಲಂಚ ಸ್ವೀಕರಿಸುತ್ತಿದ್ದ ಎನ್ನಲಾಗಿದೆ.
ದಾಳಿ ವೇಳೆ ಇನ್ನೋರ್ವ ಆರೋಪಿ ಅರಣ್ಯ ವೀಕ್ಷಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.
ಶಿರೂರಿನ ಮಹಮ್ಮದ್ ಅನ್ವರ್ ಹಸನ್ ಎಂಬವರು ತನ್ನ ಪಟ್ಟ ಸ್ಥಳದಲ್ಲಿರುವ ಹಲಸಿನ ಮರವನ್ನು ತೆರವುಗೊಳಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಉಪವಲಯ ಅರಣ್ಯಾಧಿಕಾರಿ ಅನುಮತಿ ನೀಡಬೇಕಾದರೆ 4000 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಅನ್ವರ್, ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಬಂಧಿಸಿದರು ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ.ಎ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿವೈಎಸ್ಪಿ ಪ್ರಕಾಶ್ ಕೆ ಸಿ, ಪೊಲೀಸ್ ನಿರೀಕ್ಷಕ ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.