filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ರಾಜ್ಯ ಸರಕಾರದ ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಜಗಳೂರು ಸುದ್ದಿ:ರಾಜ್ಯ ಸರಕಾರದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶನಿವಾರ ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಹೊಸಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ,ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಛೇರಿವರೆಗೂ ಎತ್ತಿನಬಂಡಿಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರ ಮುಖಾಂತರ ರಾಜ್ಯಪಾಲರಿಗೆ ಲಿಖಿತ ಮನವಿ ಸಲ್ಲಿಸಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಆಡಳಿತರೂಢ ರಾಜ್ಯ ಸರಕಾರ ಪೆಟ್ರೋಲ್ ಪ್ರತಿ ಲೀಟರ್ ಗೆ ₹3.7 ಮತ್ತು ಡೀಸೆಲ್ ಪ್ರತಿ ಲೀಟರ್ ಗೆ ₹3.9 ರಷ್ಟು ಬೆಲೆ ಏರಿಕೆಯನ್ನು ಏಕಪಕ್ಷೀಯ ನಿರ್ಧಾರಕೈಗೊಂಡಿದೆ.ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲಾಗದೆ ಆರ್ಥಿಕ ಸಂಪನ್ಮೂಲದಲ್ಲಿ ಇಳಿಮುಖ ಅನುಭವಿಸುತ್ತಿದೆ.ಸರ್ಕಾರಿ ಆಸ್ತಿ ನೊಂದಣಿಶುಲ್ಕ,ಬಿತ್ತನೆಬೀಜ ದರ,ಅಗತ್ಯ ವಸ್ತುಗಳ,ಹಾಗೂ ತೈಲ ಬೆಲೆ ಏರಿಕೆಯೊಂದಿಗೆ ಜನವಿರೋಧಿ ನೀತಿಯೊಂದಿಗೆ ಜನಸಾಮಾನ್ಯರ ಬದುಕಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ದಿ ಕಾಮಗಾರಿಗಳು ಮರೀಚಿಕೆಯಾಗುತ್ತಿವೆ.ಕೂಡಲೇ ತೈಲ ಬೆಲೆ ಇಳಿಕೆಮಾಡಬೇಕು ಇಲ್ಲವಾದರೆ ಬಿಜೆಪಿ ನೇತೃತ್ವದಲ್ಲಿ ಉಗ್ರಹೋರಾಟನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನಾನು ಬಿಜೆಪಿ ಆಡಳಿತಾವಧಿಯಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷನಾಗಿ ಕಳಂಕರಹಿತ ಆಡಳಿತ ನಡೆಸಿರುವೆ.ಆದರೆ ಕಾಂಗ್ರೆಸ್ ನೇತೃತ್ವದ ಆಡಳಿತ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ.ಆಡಳಿತಕ್ಕೆ ಬಂದು ಒಂದೇ ವರ್ಷದಲ್ಲಿ ವಾಲ್ಮೀಕಿ ನಿಗಮ ಮಂಡಳಿಯಲ್ಲಿ ₹187 ಕೋಟಿ ಹಣ ಭ್ರಷ್ಟಾಚಾರ ಕೂಪದಲ್ಲಿ ಬಿದ್ದಿದೆ.ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಮಾಜಿ ಜಿ.ಪಂ ಸದಸ್ಯ ಎಸ್.ಕೆ.ಮಂಜುನಾಥ್,ಮುಖಂಡರಾದ ಎ.ಎಂ.ಮರುಳಾರಾಧ್ಯ,ಜೆ.ವಿ.ನಾಗರಾಜ್,ಬಿಸ್ತುವಳ್ಳಿ ಬಾಬು,ಬಿದರಕೆರೆ ರವಿಕುಮಾರ್,ಬಾಲೇನಹಳ್ಳಿ ಕೆಂಚನಗೌಡ,ಗಡಿಮಾಕುಂಟೆ ಸಿದ್ದೇಶ್,ಶಿವಕುಮಾರ್ ಸ್ವಾಮಿ,ಕಲ್ಲೇಶಪ್ಪ,ಸೂರಲಿಂಗಪ್ಪ,ಓಬಳೇಶ್,ಪೂಜಾರ್ ಸಿದ್ದಪ್ಪ,,ರುದ್ರಮುನಿ,ಬಾಲರಾಜ್,ಪ.ಪಂ‌ಸದಸ್ಯರಾದ ತಿಪ್ಪೇಸ್ವಾಮಿ,ರೇವಣ್ಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!