filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಶತಸಿದ್ದ ₹20 ಕೋಟಿ‌ ಅನುದಾನ ಮಂಜೂರು:ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ.

ಜಗಳೂರು ಸುದ್ದಿ
:ಪಟ್ಟಣದ ಮುಖ್ಯ ರಸ್ತೆ ಆಗಲೀಕರಣಕ್ಕಾಗಿ ಈಗಾಗಲೇ ಸರ್ಕಾರದಿಂದ ₹20 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ.ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಿ ರಸ್ತೆ ಆಗಲಿಕರಣ ಮಾಡಿ ನಗರದಲ್ಲಿ ಸುಗಮ ಸಂಚಾರಕ್ಕಾಗಿ ನಾಗರೀಕರು ಸಹಕರಿಸುವಂತೆ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ದಾವಣಗೆರೆ ಗ್ರಾಮಾಂತರ ಉಪವಿಭಾಗ ಹಾಗೂ ಪೊಲೀಸ್ ಠಾಣೆವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಣೆ ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

‘ಪಟ್ಟಣದ ಅಭಿವೃದ್ದಿಗೆ ಸಾರ್ವಜನಿಕರು,ವ್ಯಾಪಾರಸ್ಥರು ಸಹಕರಿಸಬೇಕು.ಬೀದಿಬದಿ ವ್ಯಾಪಾರಿಗಳನ್ನಾಗಲಿ ಅಥವಾ ಅಂಗಡಿ ಮಾಲೀಕರನ್ನಾಗಲಿ ಒಕ್ಕಲೆಬ್ಬಿಸುವ ಉದ್ದೇಶವಲ್ಲ.ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕರ ಹಿತ ಕಾಯುತ್ತೇನೆ.ಕೊಟ್ಟ ಭರವಸೆ ಹುಸಿಯಾಗದಂತೆ ನಡೆದುಕೊಳ್ಳುತ್ತೇನೆ’ ಯಾವ ಮುಲಾಜಿಲ್ಲದೆ ರಸ್ತೆ ಆಗಲಿಕರಣ ಮಾಡಿ ಪಟ್ಟಣದ ಸೌಂದರ್ಯವನ್ನ ಹೆಚ್ಚಿಸೊಣ ಎಂದು ಭರವಸೆ ನೀಡಿದರು.

‘ಕೆಲ ಪೊಲಿ ಹುಡುಗರು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಬೈಕ್ ಗಳನ್ನು ಸೀಜ್ ಮಾಡಬೇಕು.ಸಾರ್ವಜನಿಕರು ಹೆಲ್ಮೆಟ್ ಧರಿಸಿ ಪೊಲೀಸ್ ಇಲಾಖೆಯ ಸುರಕ್ಷಿತ ನಿಯಮಗಳನ್ನು ತಪ್ಪದೆ ಪಾಲಿಸಬೇಕು.ಅಪಘಾತ ಸಂದರ್ಭದಲ್ಲಿ ಬೈಕ್ ಸವಾರರು ಸಾವಿನಿಂದ ರಕ್ಷಣೆಮಾಡಿಕೊಳ್ಳಿ’ ಎಂದರು.

‘ನನ್ನ ಆಡಳಿತಾವಧಿಯಲ್ಲಿ ವಿಂಡ್ ಫ್ಯಾನ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ.ಉದ್ಗಟ್ಟ ವಸತಿ ಶಾಲೆ ಪಕ್ಕದಲ್ಲಿ ಶಾಲಾ ಮಕ್ಕಳಿಗೆ ದುಷ್ಪರಿಣಾಮ ಬೀರುತ್ತಿರುವ ವಿಂಡ್ ಫ್ಯಾನ್ ತೆರವುಗೊಳಿಸಲು ಸೂಚಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾಪ್ರಶಾಂತ್ ಮಾತನಾಡಿ,’ದೇಶದಲ್ಲಿ ಪ್ರತಿಗಂಟೆಗೆ‌ ಸಂಭವಿಸುವ 52 ಜನರ ಸಾವಿನ ಪ್ರಮಾಣದಲ್ಲಿ 19 ಜನ ಹೆಲ್ಮೆಟ್ ಧರಿಸದೆ ಸಾವನ್ನಪ್ಪುತ್ತಿದ್ದಾರೆ.ಪ್ರತಿ ವರ್ಷಕ್ಕೆ 52000 ಜನರು ಹೆಲ್ಮೆಟ್ ಧರಿಸದೆ ಸಾವನ್ನಪ್ಪುವ ಮಾಹಿತಿ ಲಭ್ಯವಾಗಿದೆ.ದೇಹದ ಸೂಕ್ಷ್ಮ ಹಾಗೂ ಮುಖ್ಯ ಅಂಗ ತಲೆ ಭಾಗವಾಗಿದ್ದು ಪ್ರತಿಯೊಬ್ಬ ದ್ವಿಚಕ್ರವಾಹನ ಸವಾರನು ಜೀವರಕ್ಷಣೆಗಾಗಿ ಗುಣಾತ್ಮಕ ಹೆಲ್ಮೆಟ್ ಧರಿಸಬೇಕು ಅಂತೆಯೇ ಸಾರ್ವಜನಿಕರಿಗೆ ದಂಡವಿಧಿಸುವ ಪೊಲೀಸ್ ಸಿಬ್ಬಂದಿಗಳು ಮೊದಲು ಹೆಲ್ಮಟ್ ಧರಿಸಿ ಮಾದರಿಯಾಗಬೇಕು’ ಎಂದು ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಿ ಸಲಹೆ ನೀಡಿದರು.

ದಾವಣಗೆರೆ ಗ್ರಾಮಾಂತರ ವಿಭಾಗದ ಡಿ.ವೈ.ಎಸ್ ಪಿ ಬಸವರಾಜ್ ಮಾತನಾಡಿ,’ಯುವಕರು ಡ್ರಗ್ಸ್ ತೆಗೆದುಕೊಳ್ಳುವ ಮಾಹಿತಿಯನ್ನು 112 ರ ಮೂಲಕ ಮಾಹಿತಿ ಕೊಡಿ ಪರೀಕ್ಷೆಗೊಳಪಡಿಸಿ ಸಾಬೀತಾದರೆ ನಿರ್ದಾಕ್ಷೀಣ್ಯವಾಗಿ ಪ್ರಕರಣ ದಾಖಲಿಸಲಾಗುವುದು.ಚುಚ್ವುಮದ್ದು,ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಆರೋಗ್ಯ ಇಲಾಖೆಗೆ ಚರ್ಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ನಿಯಂತ್ರಿಸಲಾಗುವುದು’ ಎಂದರು.

ಇದೇ ವೇಳೆ ಪೊಲೀಸ್ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಿಸಿದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ದಾವಣಗೆರೆ ಎಸ್ ಪಿ.ಉಮಾ ಪ್ರಶಾಂತ , ಪಿ.ಐ ಶ್ರೀನಿವಾಸರಾವ್.,ಡಿ.ವೈ.ಎಸ್ ಪಿ ಬಸವರಾಜ್ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಸಂದರ್ಭದಲ್ಲಿ ಪಿಐ ಶ್ರೀನಿವಾಸ್ ರಾವ್,ಪಿಎಸ್ ಐ ಸಾಗರ್,ಎಎಸ್ಐ ಗಳಾದ ಚಂದ್ರಶೇಖರ್,ಶಿವಪ್ರಸಾದ್,ಸಿಬ್ಬಂದಿಗಳಾದ ನಾಗಭೂಷಣ್,ಬಸವರಾಜ್,ಮಾರುತಿ,ಪಾಲಾಕ್ಷಿ,ಉಮಾಪತಿ,.ವೆಂಕಟೇಶ್.ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!