Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜೂನ್ 27

ದೂರದೃಷ್ಟಿಯ ಆಡಳಿತಗಾರ ಕೆಂಪೆಗೌಡರ ಆದರ್ಶಗಳು ಪೀಳಿಗೆಗೆ ಪಸರಿಸಲಿ:ಶಾಸಕ.ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ:ಜಾತ್ಯಾತೀತವಾಗಿ ಎಲ್ಲಾವರ್ಗದವರ ಏಳ್ಗೆಯ ದೂರದೃಷ್ಠಿಯಿಂದ ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡ ಅವರ ಆದರ್ಶಗಳು ಪೀಳಿಗೆಯಿಂದ ಪೀಳಿಗೆಗೆ ಪಸರಿಸಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರವರ 515 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರದಿಂದ ಮಹಾನೀಯರ ಜಯಂತಿಗಳನ್ನು ಆಚರಣೆಮಾಡುತ್ತಿರುವುದು ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಮಕ್ಕಳ ಜೀವನದಲ್ಲಿ ಪ್ರೇರಣೆಯಾಗುವ ಸದುದ್ದೇಶದಿಂದ ಎಂದು ತಿಳಿಸಿದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೆಗೌಡ ಅವರ ಹೆಸರು ಇಟ್ಟಿರುವುದು ಸಂತಸದ ಸಂಗತಿ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ತಾಲೂಕು ಕಛೇರಿಯಿಂದ ಅಂಬೇಡ್ಕರ್ ವೃತ್ತ,ಮಹಾತ್ಮಗಾಂಧಿ ವೃತ್ತದ ಮೂಲಕ ಡೊಳ್ಳುಕುಣಿತ,ವಾಧ್ಯವೃಂದದ ಮೂಲಕ ಶಾಲಾವಿದ್ಯಾರ್ಥಿಗಳು ಮೆರವಣಿಗೆ ನಡೆಸಲಾಯಿತು.

ಶಿಕ್ಷಣ ಇಲಾಖೆ ಬಿ ಆರ್ ಸಿ ಆಂಜನೇಯ ಕಾರ್ಯಕ್ರಮದಲ್ಲಿ ಉಪಾನ್ಯಾಸ ನೀಡಿದರು ನಾಡ ಪ್ರಭು ಕೇಂಪೆಗೌಡರು ಬಾಲ್ಯದಲ್ಲಿಯೆ ನಗರ ಅಭಿವೃದ್ಧಿ ಕನಸು ಕಂಡಿದ್ದರು ವಿಜನಗರ ಸಾಮ್ರಾಜ್ಯಕ್ಕೆ ಅವರ ತಂದೆ ಜೊತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಕೃಷ್ಣ ದೇವರಾಯನ ರಾಜ ಸಾಮಂತ ಆಳ್ವಿಕೆಯಿಂದ ಪ್ರಭಾವಿತರಾಗಿ ಅವರ ಆದರ್ಶದಂತೆ ಬೆಂಗಳೂರಿನ ಯಲಂಕ ಸಾಮ್ರಾಜ್ಯದ ಅಧಿಪತಿಯಾಗಿ ನಾಡಿನ ಪ್ರಖ್ಯಾತ ರಾಜನಾಗಿ ಆಡಳಿತ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ .ಸಿಲಿಖಾನ್ ಸಿಟಿಯ ಈಗಿನ ಕಾಟನ್ ಪೇಟೆ ಉಪ್ಪಾರ ಪೇಟೆ . ಹಲವು ಕೆರೆ ಕಟ್ಟೆಗಳು ಸಹ ಕೆಂಪೆಗೌಡರ ದೂರ ದೃಷ್ಠಿ ಅಭಿವೃದ್ಧಿಗೆ ಸಾಕ್ಷಿಯಾಗಿವೆ ಎಂದು ಸ್ಮರಿಸಿದರು.

ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಸಯ್ಯದ್ ಕಲೀಂ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಮಹಿಳಾ ಕಾಂಗ್ರೆಸ್ ನ ಕಲ್ಪನಾ, ಶಿಲ್ಪಾ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಬಿ.ಮಹೇಶ್ವರಪ್ಪ,ಉಲ್ಲಾ,ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ತಾ.ಪಂ ಪ್ರಭಾರಿ ಇಓ ಮಿಥುನ್ ಕಿಮಾವತ್,ಬಿಇಓ ಹಾಲಮೂರ್ತಿ,ಬಿಆರ್ ಸು ಡಿಡಿ ಹಾಲಪ್ಪ,ಸಿಡಿಪಿಓ ಬಿರೇಂದ್ರಕುಮಾರ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!