filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;

ಹೊಸಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ರೂಪಾ ಗುರುಮೂರ್ತಿ ಅವಿರೋಧ ಆಯ್ಕೆಯಾಗಿದ್ದಾರೆ.

Published 29 ಜುಲೈ
Last Updated ಜುಲೈ 2024
ತಾಲ್ಲೂಕಿನ: ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಲಕ್ಕಂಪುರದ ರೂಪಾ ಗುರುಮೂರ್ತಿರವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಸಿದ್ದವೀರಪ್ಪ ರವರ ರಾಜೀನಾಮೆಯಿಂದ ಅದ್ಯಕ್ಷ ಸ್ಥಾನ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಸಾಮಾನ್ಯ ಮೀಸಲು ಕ್ಷೇತ್ರದಿಂದ ರೂಪಾ ಗುರುಮೂರ್ತಿ. ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಬೇರೆ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣೆ ಅಧಿಕಾರಿ ಪಂಚಾಯಿತ್ ರಾಜ್.ಇಂಜಿನಿಯರ್ ಉಪಾವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ರೂಪಾ ಅವರಿಗೆ ಅಧಿಕಾರ ಅಸ್ತಂತರ ಘೋಷಣೆ ಮಾಡಿದರು.

ಮಾಜಿ ಅಧ್ಯಕ್ಷ ಸಿದ್ದವೀರಪ್ಪ ಉಪಾಧ್ಯಕ್ಷೆ ನಿಂಗಮ್ಮ . ಸೇರಿದಂತೆ 11 ಮಂದಿ ಸದಸ್ಯರು ಹಾಜರಿದ್ದರು. .

ನೂತನ ಅಧ್ಯಕ್ಷೆ ರೂಪಾ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಪಂ ವ್ಯಾಪ್ತಿಯ ಪ್ರತಿ ಹಳ್ಳಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾಧಿಕಾರಿ ಶಿವಮೂರ್ತಿ ಮಾತನಾಡಿ, ಸದಸ್ಯರು ಮತ್ತು ಅಧ್ಯಕ್ಷರು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿ ಗುಮಾಸ್ತರಾದ ಮುಸ್ಟೂರಪ್ಪ. ಪಂಚಾಯತ್ ರಾಜ್ ಇಲಾಖೆ ದಾದಪಿರ್., ಮಾಜಿ ತಾಪಂ ಅದ್ಯಕ್ಷ ಯು ಜಿ ಶಿವಕುಮಾರ್.ಮಾಜಿ ಅದ್ಯಕ್ಷ ಸಿದ್ದವೀರಪ್ಪ. ಮುಖಂಡ ಸತ್ಯಮೂರ್ತಿ.ಗ್ರಾಪಂ ಸದಸ್ಯರಾದ ಕೊಟ್ರಮ.ಸುನಿತಾ ಸತ್ಯಮೂರ್ತಿ‌ ಲಕ್ಷೀ‌ ಸದಸ್ಯರಾದ..ಪಿ ಎಸ್ ರಾಘವೇಂದ್ರ. ಚೌಡಮ್ಮ.ನೇತ್ರಾವತಿ. ವಿಜಯಮ್ಮ.ಬಸವರಾಜಪ್ಪ.ಕಾಶಿನಾಥ.ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!