ಕಿಸ್ಕೆಂದೆಯಲ್ಲಿಯೆ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಅವ್ಯವಸ್ಥೆ ಅಗರ
ಜಗಳೂರು ಪಟ್ಟಣದಲ್ಲಿರುವ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಮೂಲಸೌಕರ್ಯಗಳಿಂದ ಮರಿಚಿಕೆಯಾಗಿದೆ .ಸುಮಾರು ಎರಡು ಮೂರು ವರ್ಷಗಳಿಂದ ಇಕ್ಕಟಿನ ಸ್ಥಳದಲ್ಲಿಯೆ ಹಾಸ್ಟೆಲ್ ವಿಧ್ಯಾರ್ಥಿಗಳು ವಾಸಿಸುವುದೆ ಒಂದು ದುಸ್ತರವಾಗಿದೆ.ಸರಿಯಾದ ರೀತಿ ಶೌಚಾಲಯಗಳಿಲ್ಲ ಸ್ನಾನದ ಗೃಹದ ಬಾಗಿಲುಗಳು ಅರಕಲು ಮುರಕಲು ಬಾಗಿಲುಗಳಲ್ಲಿ ಅವರ ನಿತ್ಯ ಕರ್ಮಗಳು ಮಾಡಿಕೊಳ್ಳುವುದೆ ಬೇಸರದ ಸಂಗತಿ ಎಂದು ವಿಧ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ಸುಮಾರು 10 ಕೊಠಡಿಗಳಿವೆ ಒಂದು ಒಂದು ಕೊಠಡಿಯಲ್ಲಿ ನಾಲ್ಕು ನಾಲ್ಕು ವಿಧ್ಯಾರ್ಥಿಗಳು ಪುಸ್ತಕ ಹಿಡಿದು ಓದಿಕೊಂಡು ಅಬ್ಯಾಸ ಮಾಡಿ ನಿದ್ರಿಸುವುದೇ ಒಂದು ದುಸ್ತರ. .ಸರ್ಕಾರದ ಒಡೆತನದ ಹಾಸ್ಟೆಲ್ ಗೆ ಖಾಸಗಿ ಬಿಲ್ಡಿಂಗ್ ತಿಂಗಳಿಗೆ 17 ಸಾವಿರ ಬಾಡಿಗೆ ನೀಡುತ್ತಿದ್ದು ಒಟ್ಟು 46 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ತಂಗಿದ್ದು ಪದವಿ ವಿದ್ಯಾರ್ಥಿಗಳು ಹಾಗೂ ಐಟಿಐ.ಬಿ ಇ ಎಡ್ ವಿಧ್ಯಾರ್ಥಿಗಳಿದ್ದು ವಿಧ್ಯಾರ್ಥಿಗಳಿಗೆ ಸ್ಥಳಾವಕಾಶ ಸಾಕಾಗುತ್ತಿಲ್ಲ ಈ ಒಂದು ಕಟ್ಟಡ ಸಂಪೂರ್ಣ ಶಿಥಿಲಗೊಂಡು ಅಲ್ಲ ಅಲ್ಲಿ ಮಣ್ಣು ಸೋರಿಕೆಯಾಗುತ್ತಿದೆ ಅಡುಗೆ ಕೋಣೆ ಸಹ ಯೋಗ್ಯವಾಗಿರುವುದಿಲ್ಲ ಜಗಳೂರು ತಾಲ್ಲೂಕು ಬರಪೀಡಿತ ಪ್ರದೇಶದಲ್ಲಿ ಬಡವರ್ಗದ ಹಿಂದೂಳಿದ ಅಲ್ಪಸಂಖ್ಯಾತ ವಿಧ್ಯಾರ್ಥಿಗಳೆ ಹೆಚ್ಚಾಗಿದ್ದಾರೆ. ಸರ್ಕಾರದಿಂದ ಒಬ್ಬ ವಿದ್ಯಾರ್ಥಿಗೆ ಊಟ ವಸತಿ ಭತ್ಯಗೆ 1850 ರೂಗಳು ನೀಡುತ್ತಿದ್ದರು ಸಹ ಇಲ್ಲಿನ ನಿಲಯ ಪಾಲಕರು ಸರಿಯಾದ ರೀತಿ ಮೆನು ಚಾರ್ಟ್ ಪಾಲಿಸದೆ ಚಾರ್ಟ್ ಪ್ರಕಾರ ಆಹಾರ ಪೂರೈಕೆ ಮಾಡುತ್ತಿಲ್ಲ” . 5 ವರ್ಷ ಆದರೂ ಬೆಡ್ ಶೀಟ್ ಹಾಗೂ ತಲೆದಿಂಬು ಕೊಟ್ಟಿಲ್ಲ. ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿಧ್ಯಾರ್ಥಿಗಳು ಆರೋಪಿಸಿದ್ದಾರೆ.. ಒಟ್ಟಾರೆ
ವಿದ್ಯಾರ್ಥಿಗಳಿಗೆ ಸರಿಯಾದ ರೀತಿ ಮೂಲ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರಲಿದೆ .ದೇವರು ಕೊಟ್ಟರು ಪೂಜಾರಿ ವರ ಕೊಡದೆಯಿರುವ ಗಾದೆಯಂತೆ ವಿದ್ಯಾರ್ಥಿಗಳ ಹಕ್ಕಿನ ಸೌಲಭ್ಯಗಳು ಸೋರಿಕೆಯಾಗುತ್ತಿದ್ದರು ಮೇಲಾಧಿಕಾರಿಗಳು ಜಾಣಕುರುಡರಂತೆ ಮೌನಕ್ಕೆ ಜಾರಿದ್ದಾರೆ. ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ಇತ್ತಿಚೆಗೆ ಹಾಸ್ಟೆಲ್ ಕಟ್ಟಡದ ಹಿಂಬದಿಯ ಕಾಂಪೌಂಡ್ ಮುಂಗಾರು ಮಳೆಗೆ ಬಿದ್ದು ಹಾಸ್ಟೆಲ್ ಒಳಗೆ ದನಕರುಗಳು ನುಗ್ಗಿದ್ದುಂಟು ಇಷ್ಟೇಲ್ಲ ಅದರು ತಲೆ ಕೆಡಿಸಿಕೊಳ್ಳದ ಇಲ್ಲಿನ ವಾರ್ಡನ್ ತಿಪ್ಪೇಸ್ವಾಮಿ ಮಾತ್ರ ಜಾಣಕುರುಡರಂತೆ ವರ್ತಿಸಿ ಉದ್ದಟತನ ತೋರಿಸುವುದೆ ಇವರ ಮತ್ತೊಂದು ಮುಖವಾಡವಾಗಿದೆ.
ನಮ್ಮ ಮುಂದಿನ ಭವಿಷ್ಯದ ಕನುಸಗಳು ಈಗಿನ ವಿಧ್ಯಾರ್ಥಿಗಳೆ ಮುಂದಿನ ಪ್ರಜೆಗಳು ಎಂದು ಸಭೆ ಸಮಾರಂಭಗಳಲ್ಲಿ ಭಾಷಣ ಬಿಗಿಯುವ ಶಾಸಕರೆ ಉಸ್ತುವಾರಿ ಸಚಿವರೆ ಕಿಸ್ಕೆಂದೆಯಲ್ಲಿ ಹಕ್ಕಿ ಗೂಡಿನಂತ ರೂಂಗಳಲ್ಲಿ ತಂಗಿರುವ ಅಲ್ಪಸಂಖ್ಯಾತರ ವಸತಿ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಕ್ಕಿನ ಸೌಲಭ್ಯಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಶುಕ್ರದೆಸೆನ್ಯೂಸ್ ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.
.