ಜುಲೈ 2_2024
ವಚನ ಸಾಹಿತ್ಯ ಸಂಪಾದಕ ಫ. ಗು. ಹಳಕಟ್ಟಿಯವರ ಜಯಂತಿ ಆಚರಣೆ ಮರೆತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು .
ಸರ್ಕಾರಿ ಜಯಂತಿಯನ್ನೆ ಮರೆತು ಸರ್ಕಾರಿ ನೀಯಮವನ್ನೆ ಗಾಳಿಗೆ ತೂರಿದ ಅಧಿಕಾರಿಗಳಿಗೆ ತಾಲೂಕಿನಲ್ಲಿ ಹೇಳುವವರಿಲ್ಲ ಕೇಳವವರಿಲ್ಲ
ಜಗಳೂರು ಪಟ್ಟಣದಲ್ಲಿನ ಕೃಷ್ಣ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರ ನಾಯಕನ ಜಯಂತಿಗೆ ಕಿಮ್ಮತ್ತಿಲ್ಲ ಇಲ್ಲಿನ ಸಹಾಯಕ ನಿರ್ದೇಶಕ ಮಂಜುನಾಥ ಅವರು ಮತ್ತು ಅವರ ಸಿಬ್ಬಂದಿಗಳು ರಾಷ್ಟ್ರ ನಾಯಕರಿಗೆ ಕನಿಷ್ಠ ಗೌರವ ಸಲ್ಲಿಸದೆ ದಿವ್ಯ ನಿರ್ಲಕ್ಷ್ಯ ಧೊರಣೆ ಅನುಸರಿಸಿ ಇಂದು ಆಚರಿಸಬೇಕಿದ್ದ ವಚನ ವಿದ್ವಾಂಸ ಹಳ್ಳಕಟ್ಟಿಯವರ ಜಯಂತಿ ಮಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಬೇಕಾದ ಅಧಿಕಾರಿಗಳು ಸರ್ಕಾರಿ ಆದೇಶವನ್ನೆ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ .ಇಲ್ಲಿನ ಅಧಿಕಾರಿಗಳ ನಡೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಹಶೀಲ್ದಾರ ಸೈಯದ್ ಖಲೀಂ ಉಲ್ ರವರು ಸಹ ಇಂತ ಅಧಿಕಾರಿಗಳ ನಡೆಯನ್ನ ಗಮನಹರಿಸಿ ರಾಷ್ಟ್ರ ನಾಯಕರಿಗೆ ಗೌರವ ಸೂಚಿಸದೆ ಅವಮಾನ ಮಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರವರ ವಿರುದ್ದ ಶಿಸ್ತು ಕ್ರಮಕೈಗೊಳ್ಳುವಂತೆ ಎಂದು ಸಾರ್ಜನಿಕರು ಆಗ್ರಹಿಸಿದ್ದಾರೆ.
ಇಂದು ಜಗಳೂರು ತಾಲೂಕಿಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ನಾಗರಾಜ್ ರವರು ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿದ್ದರು ಸಹ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಕ್ಯಾರೆ ಎನ್ನದೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ