ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ.

ಜಗಳೂರು ಸುದ್ದಿ:ಕರ್ನಾಟಕ ನಾಮಕರಣಗೊಂಡು 50 ವರ್ಷ ಪೂರೈಸಿದ ಸುವರ್ಣ ಮಹೋತ್ಸವ ನಿಮಿತ್ತ ರಾಜ್ಯಧ್ಯಂತ ಸಂಚರಿಸಲಿರುವ ತಾಯಿ ಭುವನೇಶ್ವರಿ ರಥಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣಕ್ಕೆ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಸಂಭ್ರಮ 50 ರ ಜ್ಯೋತಿ ರಥಯಾತ್ರೆಗೆ ತಾಲೂಕು ಆಡಳಿತದಿಂದ ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು .ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಹಶೀಲ್ದಾರ ಸೈಯದ್ ಖಲೀಂ ಉಲಾರವರು ವಿವಿಧ ವಾದ್ಯಗೋಷ್ಠಿಗಳೊಂದಿಗೆ ರಥಯಾತ್ರಗೆ ಚಾಲನೆ ನೀಡಿದರು. .ನಂತರ ಮಹಾತ್ಮಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾದ್ಯವೃಂದ,ಕಲಾತಂಡಗಳ ಮೂಲಕ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

ರಥಯಾತ್ರೆ ಕುರಿತು ತಾಲ್ಲೂಕು ತಹಶೀಲ್ದಾರ ಮಾತನಾಡಿದರು ,ಕರ್ನಾಟಕ ನಾಮಕರಣಗೊಂಡು 50 ನೇ ವರ್ಷದ ಸಂಭ್ರಮದ ಅಂಗವಾಗಿ ರಾಜ್ಯದ ಐತಿಹಾಸಿಕ ಸ್ಥಳ ಹಂಪಿಯಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಚಾಲನೆಗೊಂಡು ಇದೀಗ ಕರ್ನಾಟಕ ಮೂಲೆ ಮೂಲೆಗೆ ರಥಯಾತ್ರೆ.ಕೈಗೊಂಡಿರುವ ಜ್ಯೋತಿ ರಥಯಾತ್ರೆಗೆ ರಾಜ್ಯದ ಪ್ರತಿಯೊಬ್ಬ ಕನ್ನಡಿಗರು ಗೌರವಿಸಿ ನಾಡ ನುಡಿ ಅಭಿಮಾನ ಮೆರೆಯಬೇಕಿದೆ.ಕರ್ನಾಟಕದ ಇತಿಹಾಸ ಮುಂದಿನ ಪೀಳಿಗೆಗೆ ಪಸರಿಸಬೇಕಿದೆ ಎಂದು ತಿಳಿಸಿದರು.

ತಾಪಂ ಇಓ ಕೆ.ಟಿ ಕರಿಬಸಪ್ಪ ಮಾತನಾಡಿ,ಕನ್ನಡ ಭಾಷೆ,ನೆಲ,ಜಲ ಸಂಸ್ಕೃತಿ,ಪ್ರಾಕೃತಿಕ ಸೊಬಗು ದೇಶಕ್ಕೆ ಮಾದರಿಯಾಗಿದೆ.ವಿದ್ಯಾರ್ಥಿ ಯುವ ಸಮೂಹ ಕನ್ನಡ ಭಾಷೆ ಉಳಿವಿಗಾಗಿ ಸಂಕಲ್ಪ ಗೈಯಬೇಕಿದೆ ಎಂದು ಹೇಳಿದರು.

ಸಂದರ್ಭದಲ್ಲಿ ತಹಶೀಲ್ದಾರ್ ಗ್ರೇಡ್ -2 ಮಂಜಾನಂದ,ಬಿಇಓ ಹಾಲಮೂರ್ತಿ, ಸಿಡಿಪಿಓ ಬೀರೇಂದ್ರಕುಮಾರ್,ಪ.ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಎಇಇಗಳಾದ ನಾಗರಾಜ್,ಶಿವಮೂರ್ತಿ,ಸುರೇಶ್ ರೆಡ್ಡಿ,ಆರ್.ಐ ಧನಂಜಯ್,ಕಸಾಪ ತಾಲೂಕು ಅಧ್ಯಕ್ಷೆ ಸುಜಾತ,ಕಸಾಪ.ಬಿಳಿಚೋಡು ಹೋಬಳಿ ಘಟಕದ ಅಧ್ಯಕ್ಷ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ,ಕಸಾಪ.ಪದಾಧಿಕಾರಿಗಳಾದ ಓಬಣ್ಣ,ಬಡಪ್ಪ,ಗೀತಾಮಂಜು.ರೈತ ಸಂಘದ ಮಹಿಳ ಅದ್ಯಕ್ಷರಾದ.ಚೌಡಮ್ಮ..ಗೀತಕ್ಕ ಹರಿಹರ ,ಪತ್ರಕರ್ತರಾದ ಎಚ್.ಆರ್.ಬಸವರಾಜ್,ಮಾರಪ್ಪ,ಮಾದಿಹಳ್ಳಿಮಂಜುನಾಥ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!