ಜಗಳೂರಿಗೆ ಆಗಮಿಸಿದ ಅಶ್ವಮೇಧ ಬಸ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದ:ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ರಾಜ್ಯದ ವಿನೂತನ ಬಸ್ ಗಳಲ್ಲೊಂದಾಗಿರುವ ಅಶ್ವಮೇಧ ಬಸ್ ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ಮಹಿಳೆಯರ ಉಚಿತ ಪ್ರಯಾಣ ಸಿಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಕೆಎಸ್ ಆರ್ ಟಿಸಿ ಮಿನಿ ಬಸ್ ನಿಲ್ದಾಣದ ಬಳಿ ಅಶ್ವಮೇಧ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಶಾಸಕರು ಮಾತನಾಡಿದರು.
‘ಜಗಳೂರು ಪಟ್ಟಣದಿಂದ ಬೆಳಿಗ್ಗೆ 5.25 ಕ್ಕೆ ಚಿತ್ರದುರ್ಗ ಮಾರ್ಗವಾಗಿ ಕಛೇರಿ ಸಮಯಕ್ಕೆ ಬೆಂಗಳೂರು ತಲುಪಲು ಪ್ರಯಾಣಿಕರಿಗೆ ಅತ್ಯಂತ ಸಹಕಾರಿಯಾಗಿದೆ. ಸರ್ಕಾರದಿಂದ ವಿನೂತನ ಅಶ್ವಮೇಧ ಬಸ್ ಸೌಲಭ್ಯ ನಮ್ಮಂತಹ ಬರಪೀಡಿತ ಹಿಂದೂಳಿದ ತಾಲ್ಲೂಕು ಕೇಂದ್ರದ ಜನತೆಗೆ ಅನುಕೂಲವಾಗಿದ್ದು ಇದುವರೆಗೂ ಬೆಳಿಗಿನ ಜಾವ ಪಟ್ಟಣದಿಂದ ಬೆಂಗಳೂರಿಗೆ ಬಸ್ ಗಳಿಲ್ಲದೆ ಪ್ರಯಾಣಿಕರು ಪರಿತಪ್ಪಿಸುವಂತಾಗಿತ್ತು ಇದೀಗ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
‘ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಗೊಂಡ ನಂತರ ತಾಲೂಕಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಸೌಲಭ್ಯಕ್ಕೆ ಅಧಿಕ ಬೇಡಿಕೆಯಿದೆ.ಶೀಘ್ರದಲ್ಲಿ ಕೆಎಸ್ ಆರ್ ಟಿಸಿ ಅಧಿಕಾರಿಗಳ ಜೊತೆ ಡಿಪೋ ಸ್ಥಾಪನೆ ಕುರಿತು ಚರ್ಚಿಸಿ ಅಧಿವೇಶನದಲ್ಲಿ ಸಾರಿಗೆ ಸಚಿವರಿಗೆ ಮನವಿ ಮಾಡುವ ಮೂಲಕ ಪಟ್ಟಣದಲ್ಲಿ ಕೆಎಸ್ ಆರ್ ಟಿಸಿ ಡಿಪೋ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು.ಡಿಪೋ ಸ್ಥಾಪನೆಯಾದರೆ ಗ್ರಾಮೀಣ ಭಾಗವನ್ನೊಳಗೊಂಡಂತೆ ವಿದ್ಯಾರ್ಥಿಗಳಿಗೆ,ಮಹಿಳೆಯರಿಗೆ,ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಖಾಸಗಿ ಬಸ್ ಗಳನ್ನೇ ಅವಲಂಬಿಸಿರುವ ಮಾಲಿಕರಿಗೆ ಹಾಗೂ ಕಾರ್ಮಿಕರಿಗೆ ನಾನು ವಿರೋಧಿಯಲ್ಲ.ಸರ್ಕಾರದ ಸಾರಿಗೆ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿಯಾಗಿದೆ’ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,’ರಾತ್ರಿ ವೇಳೆ ದಾವಣಗೆರೆಯಿಂದ ಜಗಳೂರಿಗೆ ಬಸ್ ಗಳಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು.ಹಂತಹಂತವಾಗಿ ಶಾಸಕರ ಸಹಕಾರದಿಂದ ಸರ್ಕಾರಿ ಬಸ್ ಸಂಚಾರ ಕಲ್ಪಿಸಲಾಗುವುದು.ರಾಜ್ಯದ ಕೆಲವೇ ವಿನೂತನ ಬಸ್ ಗಳಲ್ಲಿ ಅಶ್ವಮೇಧ ಬಸ್ ಕೂಡ ವಿಶೇಷ ಸೌಕರ್ಯ ಹೊಂದಿದ್ದು.ಇಂತಹ ಬಸ್ ಜಗಳೂರಿಗೆ ಆಗಮಿಸಿರುವುದು ಸಂತಸದ ಸಂಗತಿ’ ಎಂದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ ಎಸ್.ಸುರೇಶ್ ಗೌಡ್ರು. ಬ್ಲಾಕ್ ಕಾಂಗೈ ಅಧ್ಯಕ್ಷ ಷಂಷೀರ್ ಅಹಮ್ಮದ್ . ,ಡಿಟಿಓ ಫಕೃದ್ದೀನ್ ಮಾಜಿ.ಅಧ್ಯಕ್ಷ,ತಿಪ್ಪೇಸ್ವಾಮಿಗೌಡ, ,ಸಿ.ತಿಪ್ಪೇಸ್ವಾಮಿ,ಬಿ.ಮಹೇಶ್ವರಪ್ಪ,ಸಾವಿತ್ರಮ್ಮ,ಕೊರಟಕೆರೆ ಗುರುಸಿದ್ದನಗೌಡ,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಲುಕ್ಮಾನ್ ,ಸೇರಿದಂತೆ ಇದ್ದರು.