ಡೆಂಗ್ಯೂ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ:ಶಾಸಕ ಬಿ.ದೇವೇಂದ್ರಪ್ಪ ತಾಕೀತು.
ಜಗಳೂರು ಸುದ್ದಿ:ಡೆಂಗ್ಯೂ ಜ್ವರ ಹರಡದಂತೆ ಎಚ್ಚರವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹೊರರೋಗಿಗಳ ವಾರ್ಡ್ ಗಳನ್ನು,ಲ್ಯಾಬೋರೇಟರಿ,ಸೇರಿದಂತೆ,ವಿವಿಧ ಪರೀಕ್ಷಾ ಕೋಠಡಿಗಳನ್ನು ವೀಕ್ಷಿಸಿ ಸ್ವಚ್ಚತೆ ಕಾಪಾಡಲು ಸೂಚಿಸಿದರು.
‘ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.ತಾಲೂಕಿನಲ್ಲಿ ಡೆಂಗ್ಯೂ ಜ್ವರದ ಭೀತಿಯಲ್ಲಿ ಸಾರ್ವಜನಿಕರು ಆತಂಕಗೊಂಡಿದ್ದು.ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು,ಪ್ರತಿ ಪಿಎಚ್ ಸಿ ಹಾಗೂ ಉಪಕೇಂದ್ರಗಳಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು.ನಿರ್ಲಕ್ಷ್ಯವಹಿಸಿದರೆ ನಿರ್ದಾಕ್ಷೀಣ್ಯವಾಗಿ ಕ್ರಮಗೈಗೊಳ್ಳಬೇಕು ತಾಲೂಕಿನಲ್ಲಿ ಬಡಕೂಲಿಕಾರ್ಮಿಕರು,ವಯೋವೃದ್ದರಿಗೆ,ಮಹಿಳೆಯರಿಗೆ ಉತ್ತಮ ಚಿಕಿತ್ಸೆ ಸೇವೆಗೈಯಬೇಕು’ ಎಂದು ಎಚ್ಚರಿಕೆ ನೀಡಿದರು.
ಸಿಬ್ಬಂದಿಗಳ ಗೈರು ಕಂಡ ಶಾಸಕ ಗರಂ : ಆರೋಗ್ಯ ಇಲಾಖೆಯ ಸಿಬ್ಬಂದಿಗಳು ರಾಜಕೀಯದಲ್ಲಿ ತೊಡಗಿಕೊಂಡಿರುವ ದೂರುಗಳು ಜಿಲ್ಲಾ ಮಂತ್ರಿಗಳ ಗಮನಕ್ಕಿದೆ ಅಂತಹವರನ್ನು ಕೂಡಲೇ ಅವರ ಕಾರ್ಯವ್ಯಾಪ್ತಿ ಸ್ಥಳಗಳಿಗೆ ಹಾಜರಾಗಲು ನೋಟಿಸ್ ಜಾರಿಮಾಡಿ, ಇಲ್ಲವಾದರೆ ಜಾಗಖಾಲಿ ಮಾಡಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಶ್ವನಾಥ್ ಗೆ ಖಡಕ್ ಎಚ್ಚರಿಕೆ ನೀಡಿದರು.ರೌಡಿಸಂ ನನ್ನ ಅತ್ರ ನಡೆಯುವುದಿಲ್ಲ ಹೆಲ್ತ್ ಇನ್ಸ್‌ಪೆಕ್ಟರ್ ರೊಬ್ಬರ ಗೈರು ಹಾಜುರಾತಿ ಪರಿಶೀಲಿಸಿ ತಾಲ್ಲೂಕು ವೈದ್ಯಾಧಿಕಾರಿ ವಿಶ್ವನಾಥರವರಿಗೆ ತರಾಟೆ ತೆಗೆದುಕೊಂಡರು.
ಪಟ್ಟಣದಲ್ಲಿನ ಲ್ಯಾಬ್ ಗಳಲ್ಲಿ ಸ್ವಚ್ಛತ ಕಾಪಾಡಬೇಕು ಹಾಗೂ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ನೋಟಿಸ್ ಜಾರಿಮಾಡಿ ಎಂದರು.
ಆಡಳಿತಾಧಿಕಾರಿಗಳಿಗೆ ತರಾಟೆ:ಜನೌಷಧ ಕೇಂದ್ರ ಬಾಗಿಲು ಮುಚ್ಚಿರುವುದನ್ನು ಕಂಡು ಸರ್ಕಾರಿ ಆಸ್ಪತ್ರೆ ವ್ಯಾಪ್ತಿ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಔಷಧಿ ವಿತರಣೆ ಮಾಡಲಿ ಇಲ್ಲವಾದರೆ ಸಂಪೂರ್ಣವಾಗಿ ಬಾಗಿಲು ಮುಚ್ಚಲು ತಿಳಿಸಿರಿ.ಅಲ್ಲದೆ ಮಳಿಗೆ ಮೇಲೆ ಸಂಪರ್ಕಿಸುವ ಸಮಯವನ್ನು ಬರೆಸಬೇಕು.ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಒದಗಿಸಲು ಏಜೆನ್ಸಿಯವರಿಗೆ ತಿಳಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಷಣ್ಮುಖಪ್ಪ ಅವರಿಗೆ ತರಾಟೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಶ್ವನಾಥ್ ಮಾತನಾಡಿ,’ತಾಲೂಕಿನಲ್ಲಿ 12 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.ಜಿಲ್ಲೆಯಲ್ಲಿಯೇ ಅತಿ ಕಡಿಮೆ ಪ್ರಕರಣಗಳು ಕಂಡು ಬಂದಿವೆ.ಸರ್ಕಾರದ ಆದೇಶದಂತೆ ಆಶಾ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಮನೆಗೆ ತೆರಳಿ ಲಾರ್ವ ಸಮೀಕ್ಷೆ ಮಾಡಲಾಗುತ್ತಿದೆ’ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ,ಸಿ.ಲಕ್ಷ್ಮಣ,ಆಜಾಮುಲ್ಲಾ,ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಷಣ್ಮುಖಪ್ಪ,,ಡಾ.ಮಂಜುನಾಥ್, ಡಾ.ಸಂಜಯ್ ಸೇರಿದಂತೆ ವೈದ್ಯರುಗಳು ಹಾಜರಿದ್ದರು.