ಪಿಂಜಾರ ನದಾಪ್ ಸಂಘದ ವಿವಿಧ ಬೇಡಿಕೆಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಬೃಹತ್ ಚಳವಳಿ ನಡೆಸಲಾಗುವುದು.ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಬಂಗ್ಲೆ ಪರ್ವೀಜ್ ಕರೆ ನೀಡಿದ್ದಾರೆ.
ಜಗಳೂರು.ಸುದ್ದಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಿಂಜಾರ್ ನದಾಪ್ ಸೇವಾ ಸಂಘದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜಗಳೂರು ತಾಲ್ಲೂಕು ಕೇಂದ್ರದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳ ಸೌಲಭ್ಯಗಳು ಸರಿಯಾದ ರೀತಿ ಸಿಗುತ್ತಿಲ್ಲ. ನಮ್ಮ ಸಮಾಜ ತಾಲೂಕಿನಲ್ಲಿ ಅಲ್ಪಸಂಖ್ಯಾತ ಸಮಾಜವಾಗಿದ್ದು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ.ಶೈಕ್ಷಣಿಕವಾಗಿ ಹಿಂದೂಳಿದಿದೆ.
ನಮ್ಮ ಸಮುದಾಯಗಳ ಪಾಲಿಗೆ ರಾಜ್ಯದಲ್ಲಿ ಪಿಂಜಾರ್ ನದಾಪ್ ಅಭಿವೃದ್ಧಿ ನಿಗಮವಿದ್ದರು ಸಹ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಸರ್ಕಾರ ನಮ್ಮಂತ ಬರಪೀಡಿತ ಪ್ರದೇಶದ ಬಡ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡುವಂತೆ ಬರುವ ದಿ ಜುಲೈ.22 ಸೋಮವಾರದಂದು ತಹಶೀಲ್ದಾರ್ ರವರ ಮೂಲಕ ಮಾನ್ಯಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು .ಆದ್ದರಿಂದ ಸಮಾಜದ ಮುಖಂಡರುಗಳು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ.
ಸಂಘದ ಕಾರ್ಯಧರ್ಶಿ ಹೆಚ್ ಡಿ. ಶಾರುಕ್ ಮಾತನಾಡಿ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಆದರೆ ನಿಗಮಕ್ಕೆ ಸರ್ಕಾರ ಅನುದಾನ ನೀಡದೆ ಖಾಲಿ ಡಬ್ಬದಂತೆ ಆಗಿರುವ ನಿಗಮ ಮಂಡಳಿ ನಾಮಕಾವ್ಯವಸ್ಥೆಯಾಗಿದೆ. ಸರ್ಕಾರ ಬಡ ಹಿಂದೂಳಿದ ಅಲ್ಪಸಂಖ್ಯಾತ ಸಮಾಜವನ್ನ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ನೀಡಲು ಮುಂದಾಗುವಂತೆ ಮನವಿ ಮಾಡಿಕೊಂಡರು .ಸರ್ಕಾರದ ಗಮನ ಸೆಳೆಯಲು ಸಮಾಜದ ಬಾಂಧವರು ಈ ಒಂದು ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನದಾಪ್ ಪಿಂಜಾರ್ ಸಂಘದ ಉಪಾದ್ಯಕ್ಷ ಆಶ್ರಪ್ ಆಲಿ.ಖಾಜಾಂಚಿ ಇಬ್ರಾಹಿಂ.ಜಿಲ್ಲಾ ಸದಸ್ಯ ಶೌಕತ್ ಆಲಿ.ಸಂಘಟನೆ ಕಾರ್ಯಧರ್ಶಿ ದಾನಿ.ಸದಸ್ಯರಾದ ಶಭಿರ್.ಮಸೀದಿ ಅಧ್ಯಕ್ಷ ಹೈದರಾಲಿ.ಮುನ್ನ ಸೇರಿದಂತೆ ಮುಂತಾದವರು ಹಾಜರಿದ್ದರು.