ಜಗಳೂರು ತಾಲೂಕು ಜಗಳೂರು ವಲಯದ ರಾಮಾಲಯ ರಸ್ತೆ ಕಾರ್ಯಕ್ಷೇತ್ರದ ಶ್ರೀ ಶಾರದ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕರಿಬಸಪ್ಪ ವಕೀಲರು ಮತ್ತು ಜನಜಾಗೃತಿ ವೇದಿಕೆ ಸದಸ್ಯರು ತಾಲೂಕಿನ ಮಾನ್ಯ ಗೌರವಾನ್ವಿತ ಯೋಜನ ಅಧಿಕಾರಿಗಳಾದ ಗಣೇಶ್ ಸರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀಮತಿ ಭಾರತಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ರವರು ಪೌಷ್ಟಿಕ ಆಹಾರ ಸೇವನೆ ಮಾಡಿ ಆರೋಗ್ಯವಂತ ಕುಟುಂಬ ನಿರ್ಮಾಣ ಮಾಡುವಲ್ಲಿ ಮಹಿಳೆಯರು ಹೆಚ್ಚು ಜಾಗರೂಕತೆ ವಹಿಸಿಕೊಳ್ಳಬೇಕೆಂದರು.
ಮಹಿಳೆಯರು ಮಕ್ಕಳು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡಬೇಕು, ಮಕ್ಕಳಿಗೆ ಜಂಕ್ ಫುಡ್ ಗಳನ್ನು ನೀಡಬಾರದು, ತರಕಾರಿ ಸೊಪ್ಪುಗಳು ಬೇಳೆ ಕಾಳು, ಹಣ್ಣುಗಳುಲ್ಲಿರುವ ಪೌಷ್ಟಿಕತೆಯ ಕುರಿತು ಮಾಹಿತಿ ತಿಳಿಸಿ ಸಾಂಪ್ರದಾಯಿಕ ಅಡುಗೆಗಳ ಮಹತ್ವ ಹಾಗೂ ಸದಸ್ಯರು ತಯಾರಿಸಿದ ಪೌಷ್ಟಿಕ ಆಹಾರಗಳಲ್ಲಿರುವ ಪೌಷ್ಟಿಕಾಂಶ ಗಳ ಕುರಿತು ಮಾಹಿತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕಲ್ಲಮ್ಮ ವಲಯದ ಮೇಲ್ವಿಚಾರಕರಾದ ಮಂಜುನಾಥ್ ಸರ್ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಶ್ರೀಮತಿ ಸುಧಾ ಸೇವಾ ಪ್ರತಿನಿಧಿ ಶ್ರೀ ಮತಿ ಅಂಬಿಕಾ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು .