ಇಂಗ್ಲೀಷ್ ಪ್ರಾಧ್ಯಾಪಕ ಜೆ.ಎ. ಸೀತಾರಾಮ್ ನಿಧನ:ಜಗಳೂರಿನಲ್ಲಿ ಭಾವಪೂರ್ಣ ಶ್ರದ್ದಾಂಜಲಿ
ಜಗಳೂರು ಸುದ್ದಿ:ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಹೋ.ಚಿ.ಬೋರಯ್ಯ ಸ್ಮಾರಕ ಪ.ಜಾತಿ,ಪ.ಪಂಗಡ ಪ್ರಥಮದರ್ಜೆ ಕಾಲೇಜಿನ ವೃತ್ತಿನಿರತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಜೆ.ಎ.ಸೀತಾರಾಮ್ ಅವರ ಅಕಾಲಿಕ ನಿಧನ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ,ಮೌನಾಚರಣೆಯೊಂದಿಗೆ ಭಾವಪೂರ್ಣ ಶ್ರದ್ದಾಂಜಲಿ ನೆರವೇರಿಸಲಾಯಿತು.
ಪ್ರಭಾರಿ ಪ್ರಾಂಶುಪಾಲ,ದೈಹಿಕ ನಿರ್ದೇಶಕ ಓ.ಮಧು ಮಾತನಾಡಿ,’ಪ್ರಾಧ್ಯಾಪಕರಾಗಿ ಸೇವಾನಿರತರಾಗಿದ್ದ ಸೀತಾರಾಮ್ ಅವರು ಸಹುದ್ಯೋಗಿಗಳ ಜೊತೆ ಸಹೃದಯದಿಂದ ವರ್ತಿಸುತ್ತಾ ಉತ್ತಮ ಬಾಂಧವ್ಯ ಬೆಸೆದಿದ್ದರು.ಅಲ್ಲದೆ ಬರದನಾಡಿನ ಬಡಮಕ್ಕಳಿಗೆ ಇಂಗ್ಲೀಷ್ ಭಾಷೆಯಲ್ಲಿ ನುರಿತ ಭೋದನೆಯೊಂದಿಗೆ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಕೀರ್ತಿ ಸಲ್ಲುತ್ತದೆ.ಇಂತಹ ಅನುಭವಿ ಆಂಗ್ಲಭಾಷೆಯ ಜ್ಞಾನಪಂಡಿತರ ಅಗಲಿಕೆ ಕಾಲೇಜಿಗೆ ತುಂಬಲಾರದ ನಷ್ಟ ದುಖಃಕರಸಂಗತಿ’ ಎಂದು ಶೋಕ ವ್ಯಕ್ತಪಡಿಸಿದರು.
ಉಪನ್ಯಾಸಕ ತಿಮ್ಲಾಪುರ ಪ್ರಸಾದ್ ಮಾತನಾಡಿ,’ಪ್ರಾಧ್ಯಾಪಕ ಸೀತಾರಾಮ್ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಠಿಕೋನ ಹೊಂದಿದ್ದರು.ಅತಿಥಿ ಉಪನ್ಯಾಸಕರಿಗೆ ಸಲಹೆ ಸೂಚನೆ ನೀಡುತ್ತಿದ್ದರು.ಕಿರಿಯರೊಂದಿಗೆ ಉತ್ತಮ ಒಡನಾಟ,ಸದಾ ಹಸನ್ಮುಖಿಯಾಗಿದ್ದ ಅವರು ಕಳೆದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಾ ಇಂದು ಮೃತರಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕ ವರ್ಗ,ಆಡಳಿತ ಮಂಡಳಿಗೆ ನೋವು ತಂದಿದೆ’ ಎಂದು ಹೇಳಿದರು.
ಪತ್ರಕರ್ತ ಶುಕ್ರದೆಸೆನ್ಯೂಸ್ ಪತ್ರಿಕೆ ಸಂಪಾದಕ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,’ಪ್ರಾಧ್ಯಾಪಕ ಸೀತಾರಾಮ್ ಅವರು ವಿಚಾರವಾದಿಯಾಗಿದ್ದರು.ಅಲ್ಲದೆ ತಾಲೂಕಿನ ಪ್ರಗತಿಪರ ಸಂಘಟನೆ ಮಾಧ್ಯಮದವರ ಒಡನಾಡಿಯಾಗಿದ್ದರು.ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆ,ವಿಚಾರಗೋಷ್ಠಿ ಸೇರಿದಂತೆ ಕೌಶಲ್ಯಾಧಾರಿತ ಶಿಕ್ಷಣ ಪೂರೈಕೆಗೆ ಒತ್ತುನೀಡುತ್ತಿದ್ದರು’ ಎಂದು ಸ್ಮರಿಸಿದರು.
ಸಂದರ್ಭದಲ್ಲಿ ಉಪನ್ಯಾಸಕರಾದ ಸುರೇಶ್,ಮಂಜುನಾಥ್,ಅಶೋಕಕುಮಾರ್,ಮಹೇಶ್,ಬಾಬು,ಮಾದಿಹಳ್ಳಿ ಮಂಜುನಾಥ್,,ಮುಖಂಡರಾದ ಮರೇನಹಳ್ಳಿ ನಾಗರಾಜ್,ಗುರುರಾಜ್,ಧನ್ಯಕುಮಾರ್ ಎಚ್.ಎಂ.ಹೊಳೆ, ಮಹಾಂತೇಶ್ ಬ್ರಹ್ಮ,ಮಾರುತಿ ತಮಲೇಹಳ್ಳಿ,ಅಂಜಿನಪ್ಪ,ವಿಜಯ್ ಕೆಂಚೋಳ್,ಸೇರಿದಂತೆ ವಿದ್ಯಾರ್ಥಿಗಳು ಇದ್ದರು.