ತಾಲ್ಲೂಕಿನ ಸಂತೆಮುದ್ದಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 50 ವರ್ಷ ಜಿ ನಾಗಮ್ಮ ನ ಕೊಲೆ ನಡೆದಿರುವ ಘಟನೆ ಜರುಗಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಗೌರಿಪುರ ಗ್ರಾಮದ ನಿವಾಸಿ ಶಿಕ್ಷಕಿ ಜಿ.ನಾಗಮ್ಮ ಎಂದಿನಂತೆ ಕರ್ತವ್ಯಕ್ಕೆ ಹೋಗಿ ಸಂಜೆ ಮನೆಗೆ ಬಂದು ತನ್ನ ಮನೆ ಕೆಲಸ ಎಲ್ಲಾ ಮುಗಿಸಿಕೊಂಡು ಊಟ ಮಾಡಿ ರಾತ್ರಿ ಮಲಗಿರುವ ಸಮಯದಲ್ಲಿ ತನ್ನ ಪತಿಯಿಂದಲೆ ಕೊಲೆಯಾಗಿರುವ ಘಟನೆ ಗೌರಿಪುರ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ .ಪತಿ ಸತ್ಯಪ್ಪ ತನ್ನ ಪತ್ನಿ ಶಿಕ್ಷಕಿ ಜಿ ನಾಗಮ್ಮ ಆಕ್ರಮ ಸಂಬಂಧ ಹೊಂದಿರುತ್ತಾಳೆ ಎಂದು ಅನುಮಾನಗೊಂಡು ಮಲಗಿರುವ ಹಾಸಿಗೆಯಲ್ಲಿ ಇಂದು ಬೆಳಗಿನಜಾವ ಕೊಲೆ ಮಾಡಿ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.. ಇದೀಗ ವ್ಯಕ್ತಿಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಶಿಕ್ಷಕಿ ನಾಗಮ್ಮ ಮತ್ತು ಸತ್ಯಪ್ಪ ಇವರು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು.. ದಂಪತಿ ನಡುವೆ ಇತ್ತೀಚೆಗೆ ಆಗ ಅಗ ಜಗಳ ಶುರುವಾಗಿತ್ತು. ಪತ್ನಿ ಆಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಹಿನ್ನೆಲೆಯಲ್ಲಿ ಪತಿ ಪತ್ನಿಯನ್ನ ಕೊಲೆಗೈದಿದ್ದಾನೆ ಎಂಬ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ .ಸ್ಥಳಕ್ಕೆ ಆಡಿಷನಲ್ ಎಸ್ ಪಿ. ಮಂಜುನಾಥ ಡಿ.ವೈ ಎಸ್ ಪಿ ಬಸವರಾಜ್. ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆಗೀಡಾದ ಶಿಕ್ಷಕಿ ನಾಗಮ್ಮನ ಪತಿಯೆ ಡೆತ್ ನೋಟ ಬರೆದು ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ …
ನಾನು ನನ್ನ ಹೆಂಡತಿಯನ್ನು ಕೈಯಾರೆ ಮಾರಕಸ್ತ್ರಗಳಿಂದ ಕೊಲೆಗೈದಿದ್ದೆನೆ ನನ್ನ ಹೆಂಡತಿ ಅನ್ಯ ವ್ಯಕ್ತಿ ಬಳಿ ಆಕ್ರಮ ಸಂಬಂಧ ಹೊಂದಿರುವುದರಿಂದ ನಾನು ಕೊಲೆ ಮಾಡಿರುವೆ ಎಂದು ಸಂಬಂಧಿಸಿದ ಕ್ಷೇತ್ರ ಶಿಕ್ಷಣ ಇಲಾಖೆ ಬಿ.ಇ.ಓ ರವರಿಗೆ ಪತ್ರ ಬರೆದಿರುವ ಮಾಹಿತಿ ಲಭ್ಯವಾಗಿದೆ ಎಂದು ಜಗಳೂರು ಪೊಲೀಸ್ ಇಲಾಖೆ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್ ತಿಳಿಸಿದ್ದಾರೆ.