ಶೇ.40 ಬಿಡುಗಡೆಗೆ ಕ್ಷಣಗಣನೆ:ಅಧಿಕಾರಿಗಳಿಗೆ ದುಂಬಾಲು ಬಿದ್ದ ಸದಸ್ಯರು,ಪಿಡಿಓಗಳು
ಜಗಳೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿ ಅಂತಿಮ ಬಿಲ್ ಗಳಲ್ಲಿಗೆ ಸಹಿ ಮಾಡಬಿಕಿದ್ದ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿಯೇ ಅಂತಿಮ ಕಡತಗಳ ಬಿಲ್ ಗಳಿಗೆ ಸಹಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಾಲೂಕಿನ ವಿವಿಎಫ್,ಪಂಚಾಯಿತಿ ,ಪಿಡಿಒ, ಅಧ್ಯಕ್ಶ್ಜರು, ತಾಂತ್ರಿಕ ಸಹಾಯಕರನ್ನು, ಹಾಗೂ ಸಂಯೋಜಕರನ್ನು ಕರೆಯಿಸಿ ಚೆಂಬರ್ ನಲ್ಲಿ ಕೂರಿಸಿಕೊಂಡು ಬಿಲ್ ಗಳನ್ನು ಕಡತಗಳಿಗೆ ಸಹಿ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ನರೇಗಾ ಕಾಮಗಾರಿಗಳನ್ನು ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ ಎಂಬಿ ಎನ್ ಎಮ್ ಆರ್ ಮತ್ತು ಅಳತೆ ತಾಳೆ ಮಾಡುವ ನಿಯಮವಿದೆ ಆದರೆ ಎಲ್ಲಿ ಎಲ್ಲಾ ಸಹಾಯಕ ನಿರ್ದೇಶಕರು ನಿಯಮ ಉಲ್ಲಘಂಸಿ ಕಚೇರಿಯೆಲ್ಲಿಯೇ ವಿವಿಧ ಗ್ರಾಮಪಂಚಾಯಿತಿ ಕಡತಗಳನ್ನು ಕಚೇರಿಗೆ ತರಿಸಿಕೊಂಡು ಬೇಕಾಬಿಟ್ಟಿ ಪರಿಶೀಲನೆ ಮಾಡುತ್ತೀರುವುದು ನೋಡಿದರೆ ಬೇಜಾವಾಬ್ದಾರಿ ಹಾಗೂ ಕರ್ತವ್ಯಲೋಪ ಎನ್ನುವುದರಲ್ಲಿ ಬೇರೆನು ಅಲ್ಲ ತಾ.ಪಂ ವರ್ಗಾವಣೆಯಾಗಿದೆ ತರಾತುರಿಯಲ್ಲಿ ಸಹಾಯಕ ನಿರ್ದೇಶಕರು ಬಾಕಿ ಇರುವ ಸಾಮಾಗ್ರಿ ವೆಚ್ಚದ ಕಡತಗಳನ್ನು ತಾರಾತುರಿಯಲ್ಲಿ ವಿಲೇವಾರಿ ಮಾಡಿತ್ತೀರುವುದು ತಾಲೂಕಿನಲ್ಲಿ ದುರಂತ.
ಎಂ ಐ ಎಸ್ ಸಂಯೋಜನಾಧಿಕಾರಿಗಳು ಬಿಲ್ ಪಾವತಿಗೆ ಈತಾನ ಮಾತೇ ವೇದವಾಕ್ಯವಾಗಿದ್ದು, ಈತ ಹೇಳಿದ ಕಡತಗಳನ್ನು ಪರಿಶೀಲನೆ ಮಾಡಿ ಎಂದರೆ ಸಹಾಯಕ ನಿರ್ದೇಶಕರು ಅದೇ ಕಡತಗಳನ್ನು ಪರಿಶೀಲನೆ ಮಾಡಿ ಬಿಲ್ ಮಾಡುತ್ತಾರೆ ಇನ್ನೂಳಿತ ಗ್ರಾ.ಪಂಗಳಿಗೆ ಮಾತ್ರ ಪಂಚಾಯಿತಿ ಗೆ ಬಂದು ಮಾಡುತ್ತೇವೆ ಎಂದು ಹೇಳಿದ್ದರು. ಸಿಸಿ ಕ್ಯಾಮರ ನಿಗಾವಹಿಸುತ್ತಿದ್ದರು ಸಾರ್ವಜನಿಕಕರ ಕೈಯಲ್ಲಿ ಎಂ ಬಿ ಪುಸ್ತಕಗಳು ಹಿಡಿದುಕೊಂಡು ಓಡಾಡುತ್ತಿದ್ದರು ಇದರ ಪರಿವೇ ಅಧಿಕಾರಿಗಳಿಗೆ ಇರಲಿಲ್ಲ.
ನರೇಗಾ ಯೋಜನೆಯ ಸಾಮಾಗ್ರಿ ವೆಚ್ಚ ನಾಳೆ ನಾಡಿದ್ದು ಬಿಡುಗಡೆಯಾಗುವ ಸುದ್ದಿ ತಿಳಿದ ಗ್ರಾ.ಪಂ ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿಗಳು ತಾವು ಮುಂದು ನಾ ಮುಂದೆ ಎನ್ನುವಂತೆ ಸಹಾಯಕ ನಿರ್ದೇಶಕರು ಟೆಬಲ್ ಮೇಲೆ ರಾಶಿ ರಾಶಿ ಕಡತಗಳನ್ನು ಕಂಡುಬಂತು. ಸರ್ ನಮ್ಮ ಗ್ರಾ.ಪಂ ಕಡತಗಳನ್ನು ಮೊದಲು ಪರಿಶೀಲಿಸಿ ಎಂದು ದುಂಬಾಲು ಬಿದ್ದರುವ ದೃಶ್ಯ ಸಾಮಾನ್ಯವಾಗಿತ್ತು.
ಸಾಮಾಗ್ರಿ ವೆಚ್ಚದ ಅನುದಾನ ಬಿಡುಗಡೆಯಾದ ವಿಚಾರ ತಿಳಿದ ಕೂಡಲೆ ಗ್ರಾ.ಪಂ ಗಳನ್ನು ತೊರೆದು ಅಧ್ಯಕ್ಷರು ಪಿಡಿಓ, ಕಾರ್ಯದರ್ಶಿಗಳು ಸೇರಿದ್ದಂತೆ ಗ್ರಾ.ಪಂ ಸದ್ಯಸರು ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸುತ್ತಿದ್ದು, ತಾಲೂಕು ಪಂಚಾಯಿತಿ ಆವರಣದಲ್ಲಿ ಹೆಚ್ಚು ಜನರು ಸೇರಿರುವುದು ನೋಡಿದರೆ ಯಾವುದೋ ಜಾತ್ರೆ ನಡೆದ್ದಂತೆ ಎಂದು ಸಾರ್ವಜನಿಕರಿಗೆ ಕಣ್ಣು ನಿಮ್ಮಿರಿಸಿ ಕಚೇರಿ ಕಡೆ ತೀರುಗಿ ನೋಡುವಂತೆ ಇತ್ತು.
ತಾಂತ್ರಿಕವಾಗಿ ಅನ್ಲೈನ್ ನಲ್ಲಿ ಎಲ್ಲಾವನ್ನು ನಿರ್ವಹಣೆ ಮಾಡುವ ನಿಯಮವಿದೆ. ಗ್ರಾಪಂ ಬಿಲ್ ಪಾಸ್ ಮಾಡಿದರೆ ಟಿಕ್ನಿಕಲ್ ಲಾಗಿನ್ ಗೆ ಪಾರ್ವಡ್ ಆಗುತ್ತದೆ ಅಲ್ಲಿಂದ ಸಹಾಯಕ ತಾಂತ್ರಿಕಾಧಿಕಾರಿಗೆ ನಂತರ ಎಂ ಐ ಎಸ್ ಸಂಯೋಜಕರಿಗೆ ಲಾಗಿನ್ ಗೆ ಬಂದು ಬಿಳುತ್ತದೆ ನಂತರ ತಾಂತ್ರಿಕ ಸಮಸ್ಯೆಇದ್ದರೆ ಪರಿಶೀಲಿಸಿ ಅಂತಿಮವಾಗಿ ಸಹಾಯಕ ನಿರ್ದೇಶಕರು ಒಪ್ಪಿಗೆ ನೀಡಿದರೆ ಬಿಲ್ ಪಾಸ್ ಆಗುತ್ತದೆ ಇದು ತಾಂತ್ರಿಕ ವ್ಯವಸ್ಥೆಯಲ್ಲಿ ನಡೆಯುವ ವಿಧಾನ ಆದರೆ ಗ್ರಾಪಂ ಗಳು ತಯಾರಿಸಿದ ಕಡ್ತಗಳನ್ನುಬ್ತರಿಸಿಕೊಂಡು ಕಡತದಲ್ಲಿ ದಾಖಲೆಗಳನ್ನು ಆಪ್ ಲೈನ್ ಮೂಲಕ ಪರಿಶೋಲನೆಮಾಡುವ ನೆಪಲತದಲ್ಲಿ ವೆಂಡರ್ ಗಳೊಂದಿಗೆ ಚೌಕಸಿ ನಡೆಸುತ್ತೀದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದೆ.
ಸಹಾಯಕ ನಿರ್ದೇಶಕರು ಪ್ರತಿದಿನ ಕರ್ತವ್ಯ ಕ್ಕೆಹಾಜರಾಗುವುದಿಲ್ಲ ಕಚೇರಿಗೆ ಸರಿಯಾಗಿ ಬರುವುದಿಲ್ಲ ಎಂದು ಸಾರ್ವಜನಿಕರು ಪ್ರಶ್ನೆಸಿದ್ದರೆ ಇಲ್ಲ ಕಾಮಗಾರಿ ಪರಿಶೀಲನೆಗೆ ಹೋಗುತ್ತಿದ್ದೇವೆ ಎಂದು ಹೇಳುತ್ತಾರೆ ಆದರೆ ಇಂದು ಒಂದೇ ದಿನದಲ್ಲಿ ಕಚೇರಿಯಲ್ಲಿ ರಾಶಿ ರಾಶಿ ಕಡತಗಳನ್ನು ಸುರಿದುಕೊಂಡು ಪರಿಶೀಲಿಸುವುದು ನೋಡಿದರೆ, ಸ್ಥಳ ಪರಿಶೀಲಿಸಿಲ್ಲ ಎಂಬ ಸಂಶಯ ಕಾಡುವಂತಿದೆ.