ಕಳುವಾಗಿದ್ದ 9 ಮೊಬೈಲ್ ಗಳನ್ನು ವಾರಸುದಾರರಿಗೆ ಹಸ್ತಾಂತರ.
ಜಗಳೂರು ಸುದ್ದಿ:ಪಟ್ಟಣದ ಪೋಲೀಸ್ ಠಾಣೆ ವ್ಯಾಪ್ತಿ ಕಳುವಾಗಿದ್ದ ₹1.37 ಲಕ್ಷ ಮೌಲ್ಯದ 9ಮೊಬೈಲ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ತಲುಪಿಸಲಾಯಿತು.
ಡಿವೈಎಸ್ ಪಿ ಬಸವರಾಜ್ ಮಾತನಾಡಿ,’ಮೊಬೈಲ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು.ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ,ಬಸ್ ಗಳಲ್ಲಿ ಸಂಚರಿಸುವಾಗ,ದೇವಸ್ಥಾನಗಳಲ್ಲಿ ಜಾಗರೂಕರಾಗಿರಬೇಕು.ಮೊಬೈಲ್ ಗಳನ್ನು ಕಳೆದುಕೊಂಡರೆ ಸಮೀಪದ ಪೊಲೀಸ್ ಠಾಣೆಗೆ ದೂರುಕೊಡಿ,ಸಿಇಐಆರ್ ಪೋರ್ಟಲ್ ಮೂಲಕ ತಂತ್ರಾಂಶ ಬಳಕೆಮಾಡಿ ಶೀಘ್ರ ಪತ್ತೆಹಚ್ಚಲಾಗುವುದು’ ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್,ಪಿಎಸ್ ಐ ಸಾಗರ್ ಸೇರಿದಂತೆ ಸಿಬ್ಬಂದಿಗಳು ಇದ್ದರು.