ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಳಸಾರೋಹಣ,ಕರಿಗಲ್ಲು ಪ್ರತಿಷ್ಠಾನ ಪೂಜಾಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on August 7
ಜಗಳೂರು ಸುದ್ದಿ:ಕರಿಗಲ್ಲು ಬ್ರಹ್ಮದೇವರ ಪ್ರತೀಕವಾಗಿದ್ದು ಗ್ರಾಮದ ಸುಭೀಕ್ಷೆಗೆ ರಕ್ಷಾಕವಚವಾಗಿದೆ ಎಂದು ಕಣ್ವಕುಪ್ಪೆ ತಪೋಕ್ಷೇತ್ರದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಳಸಾರೋಹಣ ಹಾಗೂ ಕರಿಗಲ್ಲು ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯದಲ್ಲಿ ಆಶೀರ್ವಾಚನ ನೀಡಿದರು.
‘ಜ್ಞಾನ ಮತ್ತು ಸಾಧನೆ ಹೊಂದಿದವರು ನೆಲೆಸಿದ ಗ್ರಾಮದಲ್ಲಿ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ,ಗ್ರಾಮದ ಸುಭೀಕ್ಷೆ,ಸಕಲಜೀವರಾಶಿಗಳ ರಕ್ಷಣೆ,ದುಷ್ಟಶಕ್ತಿಗಳ ನಿಗ್ರಹಿಸುವ ಶಕ್ತಿಯನ್ನು ಪರಮಾತ್ಮ ಅನುಗ್ರಹಿಸುತ್ತಾನೆ.ಜ್ಞಾನ ಮತ್ತು ಸಾಧನೆಯಿಲ್ಲದವರ ಗ್ರಾಮದಲ್ಲಿ ಪುಣ್ಯ ಕಾರ್ಯಗಳು ವಿಸ್ಮಯವಾಗಿರುತ್ತವೆ’ ಎಂದು ಕಿವಿಮಾತು ಹೇಳಿದರು.
‘ಭಾರತ ವಿಶ್ವಪರಂಪರೆಯಲ್ಲಿ ಶ್ರೇಷ್ಠ ಗುರುವಾಗಿದೆ.ಸಂಸ್ಕೃತಿ,ಸಂಸ್ಕಾರ ಹೊಂದಿದ ದೇಶದಲ್ಲಿ ಧಾರ್ಮಿಕ ಕಾರ್ಯಗಳಿಂದಲೇ ಪುಣ್ಯ ಪ್ರಾಪ್ತಿ,ಅಂತೆಯೇ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಕರಿಗಲ್ಲು ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪೂಜಾ ಕೈಂಕರ್ಯಗಳು ಧರ್ಮ ರಕ್ಷಣೆಗೆ ಸಾಕ್ಷಿಯಾಗಿವೆ’ ಎಂದರು.
ರಾಮಘಟ್ಟದ ಪುರವರ್ಗ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ,’ಭೂಮಿ ಮೇಲೆ ಸ್ಥಾಪಿತವಾದ ಗ್ರಾಮದ ಪ್ರಥಮದ ಸಂಕೇತ ಕರಿಗಲ್ಲು,ಅಂತಿಮವಾಗಿರುವ ಆಕಾಶದ ಸಂಕೇತವಾಗಿ ದೇವಸ್ಥಾನದ ಕಳಸ,ಇವುಗಳ ಮಧ್ಯೆ ಅಗ್ನಿ,ಜಲ,ಗಾಳಿ ಲಭ್ಯವಾಗುತ್ತವೆ.ದಾಂಪತ್ಯಲೋಕಕ್ಕೆ ಕಾಲಿಡುವ ಕನ್ಯೆಗೆ ಹಸಿರು ಬಳೆ,ಕುಂಕುಮ,ಕರಿಮಣಿ,ದಾರಗಳಿಗೆ ಹೋಲಿಸಿ ಪಂಚಪೀಠಗಳ ಹಿನ್ನೆಲೆಯ ಮಹತ್ವವನ್ನು ತಿಳಿಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,’ದೇವಸ್ಥಾನಗಳು ಗ್ರಾಮದ ಶಾಂತಿ ಸಾಮರಸ್ಯತೆಗೆ ನೆಮ್ಮದಿಯ ಕೇಂದ್ರಗಳು.ಎಲ್ಲಾ ವರ್ಗದವರೂ ಧಾರ್ಮಿಕ ಕಾರ್ಯಗಳಲ್ಲಿ ಜಾತ್ಯಾತೀತವಾಗಿ ಭಾಗವಹಿಸುವುದರಿಂದ ಭಕ್ತಿಪರ್ವ ಮೆರೆದಂತೆ’ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ,ಎಚ್.ಪಿ.ರಾಜೇಶ್,ಅವರು ಭಾಗವಹಿಸಿ ಮಾತನಾಡಿದರು.
ಸಂದರ್ಭದಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷ ಬಿಸ್ತುವಳ್ಳಿಬಾಬು,ದಲಿತ ಮುಖಂಡ ಜಿ ಎಚ್ .ಶಂಭುಲಿಂಗಪ್ಪ, ಮಾಚಿಕೆರೆ ಚೌಡಪ್ಪ,ಬಗ್ಗೇನಹಳ್ಳಿ ಶಶಿ.ಗ್ರಾ.ಪಂ ಸದಸ್ಯರಾದ ಕೃಷ್ಣಪ್ಪ,ನಾಗರಾಜ್, ಗ್ರಾಮಸ್ಥರಾದ ಮೋಟೆಗೌಡ್ರು, ರಾಮಣ್ಣ, ಕಂಪಳೇಶ್,ಎಸ್ ಡಿ ಎಂ ಸಿ ಅದ್ಯಕ್ಷ ಚೌಡೇಶಿ,ರಂಗಣ್ಣ,ಲಕ್ಷ್ಮಣ,ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ,ಬಾಬಣ್ಣ ,ನಿವೃತ್ತ ಶಿಕ್ಷಕಿ ಶಶಿಕಲಾ ಸೇರಿದಂತೆ ಇದ್ದರು.
ಗ್ರಾಮದಲ್ಲಿ ಅನ್ನದಾಸೋಹ ಕಾರ್ಯಕ್ರಮ ಮತ್ತು ಸ್ವಾಮೀಜಿಗಳಿಂದ ವೇದಘೋಷ ಪಠಣೆ ಸೇರಿದಂತೆ ಭಜನಾ ಕಾರ್ಯಕ್ರಮಗಳು ವಿವಿಧ ಗಣ್ಯರಿಗೆ ಸನ್ಮಾನ ಕಾರ್ಯಗಳು ವಿವಿಧ ಭಕ್ತಾದಿಗಳು ನೆರೆದಿದ್ದರು.