ಜಗಳೂರಿಗೆ ಆ.16ರಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭಾಗಿ

ಜಗಳೂರು ಸುದ್ದಿ:ಆಗಸ್ಟ್ 16 ,ಶುಕ್ರವಾರದಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಬಹುಗ್ರಾಮ ಕುಡಿಯವ ನೀರಿನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್ ತಿಳಿಸಿದರು.

ಪಟ್ಟಣದ ಜನಸಂಪರ್ಕ‌ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಆಗಸ್ಟ್ 16‌ರಂದು ₹482ಕೋಟಿ ರೂಗಳಲ್ಲಿ 164ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಸದೆ‌ ಡಾ.ಪ್ರಭಾಮಲ್ಲಿಕಾರ್ಜುನ್ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಅವರು ತಾಲೂಕಿನ ಮಹಾರಾಜನಹಟ್ಟಿ ಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ.ನಂತರ ಪಟ್ಟಣದ ತರಳಬಾಳು ಭವನದಲ್ಲಿ ಮಧ್ಯಾಹ್ನ 12.30ಕ್ಕೆ ಅಭಿನಂದನಾ ಕಾರ್ಯಕ್ರಮ ಜರುಗಲಿದ್ದು.ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು,ಮುಖಂಡರುಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು’ ಕರೆ ನೀಡಿದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,’ಕೇಂದ್ರ ಸರ್ಕಾರದ ಸಂಸತ್ತಿನ ಅಧಿವೇಶನದಲ್ಲಿ ಎರಡು ಮುಖ್ಯ ವಿಷಯಗಳನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚರ್ಚಿಸಿರುವುದು ಮಾಜಿ ಸಂಸದರಿಗೆ ನಾಚಿಸುಂತಿದೆ.ಮಾಜಿ ಸಂಸದರು ಯಾವತ್ತೂ ಅಧಿವೇಶನದಲ್ಲಿ ಕನಿಷ್ಠ ಪಕ್ಷ ಭಾವಚಿತ್ರಕ್ಕೂ ಕಾಣಿಸಿಕೊಂಡಿರಲಿಲ್ಲ.ನೂತನ ಸಂಸದರು ಭದ್ರಾಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರನ್ನು ಭೇಟಿಮಾಡಿರುವುದು ಸಂತಸದ ಸಂಗತಿ ಜಿಲ್ಲೆಯಲ್ಲಿಯೇ ತಾಲೂಕಿನ ಸರ್ವತೋಮುಖ ಅಭಿವೃದ್ದಿಗೊಳ್ಳಲಿದೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಎಸ್ ಟಿ ಘಟಕದ ಪ್ರಧಾನಕಾರ್ಯಧರ್ಶಿ ಕೀರ್ತಿಕುಮಾರ್ ಅರಸೀಕೆರೆ,ಬಿಳಿಚೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್,ಪ.ಪಂ‌ಸದಸ್ಯರಾದ ಮಹ ಅಲಿ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಮಂಜುನಾಥ್,ತಿಪ್ಪೇಸ್ವಾಮಿಗೌಡ್ರು, ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅದ್ಯಕ್ಷ ಮಹೇಶ್ವರಪ್ಪ,.ದಲಿತ ಮುಖಂಡ ಜಿ ಎಚ್ . ಶಂಭುಲಿಂಗಪ್ಪ,ಪುಟ್ಟಣ್ಣ,ಪ್ರಕಾಶ್ ರೆಡ್ಡಿ,ಮಾಳಮ್ಮನಹಳ್ಳಿ ವೆಂಕಟೇಶ್,ಕುರಿಜಯ್ಯಣ್ಣ,ಓಮಣ್ಣ,ತಾನಾಜಿ,ನಿಜಲಿಂಗಪ್ಪ, ವಿಜಯ್ ಕೆಂಚೋಳ್,ಮಹಿಳಾ ಘಟಕದ ಸಾವಿತ್ರಮ್ಮ,ಜಯಲಕ್ಷ್ಮಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!