filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ವಿಧ್ಯಾರ್ಥಿಗಳು ಟಿವಿ ಮೊಬೈಲ್ ಗೀಳಿಗೆ ಬಲಿಯಾಗದಿರಿ ಡಾ.ಬಿ ಆರ್ ಅಂಬೇಡ್ಕರ್ ರಂತ ಕನಸು ಕಾಣಿ ವಿಧ್ಯಾರ್ಥಿ ಜಿವನ ಬಂಗಾರದಂತ ಜೀವನ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಶಾಸಕ ಬಿ.ದೇವೇಂದ್ರಪ್ಪ ವಿಧ್ಯಾರ್ಥಿಗಳಿಗೆ ಕಿವಿ ಮಾತು.

ಬಡತನದ ನೆಪಯೊಡ್ಡಿ ಉನ್ನತ ಶಿಕ್ಷಣದಿಂದ ವಿಮುಖರಾಗದಿರಿ:ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು.

ಜಗಳೂರು ಸುದ್ದಿ:ಬಡವಿದ್ಯಾರ್ಥಿಗಳು‌ ಬಡತನದ ನೆಪಯೊಡ್ಡಿ ಉನ್ನತ ವ್ಯಾಸಂಗದಿಂದ ವಿಮುಖರಾಗದೆ ಇಂತ ಸಂಘ ಸಂಸ್ಥೆಗಳ‌ ಆರ್ಥಿಕ ನೆರವುನ್ನು ಸದುಪಯೋಗಪಡೆದುಕೊಂಡು ಶೈಕ್ಷಣಿಕ ಗುರಿಸಾಧಿಸಿ ನೆರೆವು ಕೊಟ್ಟ ಸಂಸ್ಥೆಗಳಿಗೆ ಕೀರ್ತಿ ತರುವಂತೆ ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ಪ್ರೇರಣಾ ಟ್ರಸ್ಟ್ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸುಜ್ಞಾನನಿಧಿ ಶಿಷ್ಯವೇತನ ಮತ್ತು ಆರೋಗ್ಯ ರಕ್ಷಾ ವಿಮಾಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಡತನ,ಅಸ್ಪೃಶ್ಯತೆ,ಸಂಕಷ್ಟಗಳನ್ನು ಎದುರಿಸುವ ಮೂಲಕ ಶಾಹುಮಹರಾಜರ ಸಹಕಾರದಿಂದ ವಿದೇಶದಲ್ಲಿ ವ್ಯಾಸಂಗಪೂರ್ಣಗೊಳಿಸಿ‌ ದೇಶಕ್ಕೆ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಂದಿನ ಯುವಪೀಳಿಗೆಗೆ ಸ್ಪೂರ್ತಿಯಾಗಬೇಕು.ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಉಜ್ವಲಭವಿಷ್ಯ ರೂಪಿಸಿಕೊಳ್ಳಬೇಕು’ಎಂದು ಸಲಹೆ ನೀಡಿದರು.

‘ಪ್ರತಿಭೆ ಅರಳುವುದು ಗುಡಿಸಲಿನಲ್ಲಿ,ಅಂತ್ಯವಾಗುವುದು ಅರಮನೆಯಲ್ಲಿ ಎಂಬಂತೆ ಬಡತನದಲ್ಲಿ ಜನಿಸಿ ವಿದ್ಯೆಯೊಂದಿಗೆ‌ ಸಂಸ್ಕಾರ,ಸಂಸ್ಕೃತಿ‌ ಬೆಳೆಸಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು.ಪೋಷಕರು ಮಕ್ಕಳನ್ನು ಮೊಬೈಲ್,ಟಿವಿ‌ ಮಾಧ್ಯಮ ಗೀಳಿನಿಂದ ದೂರವಿಡಬೇಕು’ ಎಂದು ಹೇಳಿದರು.

ಧರ್ಮಸ್ಥಳ‌ ಗ್ರಾಮಾಭಿವೃದ್ದಿ ಸಂಸ್ಥೆ ಜಿಲ್ಲಾ‌ ನಿರ್ದೇಶಕ ಜನಾರ್ಧನ್ ಮಾತನಾಡಿ,’ಪ್ರಸಕ್ತಸಾಲಿನಲ್ಲಿ ಸಂಘದ ಸುಜ್ಞಾನನಿಧಿ ಶಿಷ್ಯವೇತನದಡಿಯಲ್ಲಿ ತಾಲೂಕಿನ ಒಟ್ಟು 176 ವಿದ್ಯಾರ್ಥಿಗಳಿಗೆ ₹16,69,000 ಮೊತ್ತದ ಶಿಷ್ಯವೇತನ‌ ಮಂಜೂರಾಗಿದೆ.ಆರೋಗ್ಯ ರಕ್ಷಾ ವಿಮಾಸೌಲಭ್ಯದಡಿ ಒಟ್ಟು 121 ಜನ ಸಂಘದ ಸದಸ್ಯರುಗಳಾದ ಫಲಾನಭವಿಗಳಿಗೆ ₹10,87,390 ಮೊತ್ತದ ವಿಮಾಯೋಜನೆ‌ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೆಪಿಸಿಸಿ ಎಸ್ ಟಿ ಘಟಕದ ಕೆ.ಪಿ.ಪಾಲಯ್ಯ ಮಾತನಾಡಿದರು ಧರ್ಮಸ್ಥಳ ಗ್ರಾಮಾಅಭಿವೃದ್ದಿ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಗೂ ಬಡವರ್ಗದವರಿಗೆ ವಿಮಾ ಸೌಲಭ್ಯಗಳು ಅತ್ಯಂತ ಸಹಕಾರಿಯಾಗಿವೆ ಎಂದರು.ಬರದನಾಡಿನಲ್ಲಿ ಭಕ್ತಿಗೆ ಬರವಿಲ್ಲ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಭಕ್ತರಾಗಿ ನಿಷ್ಠೆ,ಪ್ರಾಮಾಣಿಕತೆಯಿಂದ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ.ನೀರಾವರಿ ಮೂಲಗಳಿಲ್ಲದ ತಾಲೂಕಿನಲ್ಲಿ ಬಡ ಮಕ್ಕಳಿಗೆ ಶಿಕ್ಷಣವೇ ಆಧಾರವಾಗಿದೆ’ ಎಂದು ತಿಳಿಸಿದರು.

ಸಂದರ್ಭದಲ್ಲಿ ಅಖಿಲಕರ್ನಾಟಕ ಜನಜಾಗೃತಿ ವೇದಿಕೆಯ ವಕೀಲ ಕರಿಬಸಯ್ಯ,ಪಿ.ಎಸ್.ಅರವಿಂದನ್,ತಿಪ್ಪೇಸ್ವಾಮಿ,ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಗಣೇಶ್ ನಾಯ್ಕ,ಫಾದರ್ ಸಿಲ್ವೆಸ್ಟರ್ ಫಿರೇರಾ,ಮುಖಂಡರಾದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಬಿ.ಲೋಕೇಶ್,ಶಾಹಿನಾಬೇಗಂ,ಪದ್ಮ,ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!