ಕಾಂಗ್ರೆಸ್ ಎಸ್.ಟಿ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿ.
ಜಗಳೂರು: ಸವಾಲುಗಳ ನಡುವೆ ಕಷ್ಟದಿಂದ ವಿದ್ಯಾಭ್ಯಾಸ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ
ಹಲವಾರು ವರ್ಷಗಳ ಕಾಲ ಬಡ ರೋಗಿಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡು ನಂತರ ರಾಜಕಾರಣಕ್ಕೆ ಧುಮುಕಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಜಗಳೂರಿನಿಂದ
ಕಾಂಗ್ರೆಸ್ ಪಕ್ಷದಲ್ಲಿ ಎಸ್.ಟಿ.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಬ್ದಾರಿ ನಿರ್ವಹಿಸುತ್ತಿರುವ ಶಾಸಕ ಬಿ.ದೇವೇಂದ್ರಪ್ಪನವರ ಪುತ್ರ ಎಂ.ಡಿ.ಕೀರ್ತಿ ಕುಮಾರ್ ರವರು ಯುವ ಶಕ್ತಿಯ ಹಿತೈಷಿಯಾಗಿದ್ದಾರೆ.
ತಾಲ್ಲೂಕಿನಾದ್ಯಂತ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಿ ಯುವ ಪ್ರತಿಭೆಗಳಿಗೆ ಸಹಾಯ ಮಾಡಿರುವ ಅವರ ಸೇವೆಯನ್ನು ಗುರುತಿಸಿ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ,ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ
ಕೆಪಿಸಿಸಿ ಎಸ್.ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಕಾಂಗ್ರೆಸ್ ಎಸ್.ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ.ಮಹೇಶ್ವರಪ್ಪ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಕೆ.ರಾಮ ರೆಡ್ಡಿ ಕಾಂಗ್ರೆಸ್ ಮುಖಂಡ ಪ್ರಕಾಶ್ ರೆಡ್ಡಿ ಸೇರಿದಂತೆ ಪತ್ರಕರ್ತರುಗಳಾದ, ಹೆಚ್.ಆರ್ ಬಸವರಾಜ್ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ರವಿಕುಮಾರ್. ಮಂಜು ಮಾದಿಹಳ್ಳಿ ಸಂದೀಪ್ ಸತೀಶ್ ಮಲೆಮಾಚಿಕೆರೆ ಸೇರಿದಂತೆ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.