ಪಟ್ಟಣದ ಹೃದಯ ಭಾಗದಲ್ಲಿ ಭೀಕರ ರಸ್ತೆ ಅಪಘಾತ:ಇಬ್ಬರು ಸಾವು.
ಜಗಳೂರು ಸುದ್ದಿ:ಪಟ್ಟಣದ ಹೃದಯಭಾಗದ ಮಹಾತ್ಮಗಾಂಧಿ ವೃತ್ತದ ಎನ್.ಎಂ.ಸಿ ಹೋಟೆಲ್ ಬಳಿ ಖಾಸಗಿ ಬಸ್ಸು ಮುಂಬಾಗ ಚಲಿಸುತ್ತಿದ್ದ ಬೈಕ್ ಗೆ ಗುದ್ದಿದ ಪರಿಣಾಮ ಭೀಕರ ಅಪಘಾತದಿಂದ ಬೈಕ್ ನಲ್ಲಿದ್ದ ಇಬ್ಬರೂ ಬೈಕ್ ಸಮೇತ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯ ವಿವರ:ಮಲ್ಪೆ-ಮೊಳಕಾಲ್ಮೂರು ಹೆದ್ದಾರಿಯ ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಖಾಸಗಿ ಬಸ್ ಎಸ್ ಆರ್ ಇ ಚಾಲಕನ ನಿಯಂತ್ರಣ ತಪ್ಪಿ.ಮುಂದೆ ಚಲಿಸುತ್ತಿದ್ದ ಬೈಕ್ ಗೆ ಬಲವಾಗಿ ಗುದ್ದಿದ್ದು.ತಾಲೂಕಿನ ತಮಲೇಹಳ್ಳಿ ಗ್ರಾಮದ ರಾಜು (42),ಓಬಣ್ಣ(60),ಅವರು ಬೈಕ್ ನಲ್ಲಿ ಚಲಿಸುತ್ತಿದ್ದ ಮೃತಪಟ್ಟ ನತದೃಷ್ಟ ದುರ್ದೈವಿಗಳು.
ಸಾರ್ವಜನಿಕರು ಆಕ್ರೋಶ: ಘಟನೆ ನಡೆಯುತ್ತಿದ್ದಂತೆ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಮೃತರನ್ನು ಕಂಡು ಕಲ್ಲುತೂರಾಟನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಘಟನಾ ಸ್ಥಳಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್ ಮತ್ತು ಪೋಲೀಸರು ದಿಢೀರ್ ಆಗಮಿಸಿ ಘಟನೆ ತಿಳಿಗೊಳಿಸಿ ಬಿಗಿಬಂದೋಬಸ್ತ್ ನೊಂದಿಗೆ ಸಾರ್ವಜನಿಕರನ್ನು ನಿಯಂತ್ರಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಸಕ ಬಿ.ದೇವೇಂದ್ರಪ್ಪ ಘಟನಾಸ್ಥಳಕ್ಕೆ ದಿಢೀರ್ ಭೇಟಿ:ರಸ್ತೆಯಲ್ಲಿ ಅಪಘಾತ ನಡೆಯುತ್ತಿದ್ದಂತೆ ವಿಷಯ ತಿಳಿದ ಶಾಸಕ ಬಿ.ದೇವೇಂದ್ರಪ್ಪ ಅಪಘಾತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶೋಕ ವ್ಯಕ್ತಪಡಿಸಿ ಮೃತಕುಟುಂಬಕ್ಕೆ ಸಾಂತ್ವಾನ ಹೇಳಿದರು.ಈ ಹಿಂದೆ ರಸ್ತೆ ವಿಸ್ತರಣೆಗೊಂಡಿದ್ದರೆ ಇಂತಹ ಅಪಘಾತಗಳು ಸಂಭವಿಸುತ್ತಿರಲಿಲ್ಲ.ಶೀಘ್ರದಲ್ಲಿಯೇ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.