ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ.
: ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಮಹನೀಯರ ಆದರ್ಶಗಳನ್ನು ಯುವಪೀಳಿಗೆ ಉಳಿಸಿ ಬೆಳೆಸಲು ಮುಂದಾಗಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು
,
ಪಟ್ಟಣದ ಗುರುಭವನದ ಆವರಣದಲ್ಲಿ ಬಯಲು ರಂಗಮಂದಿರ ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಸಕ ಬಿ.ದೇವೇಂದ್ರಪ್ಪ ಧ್ವಜಾರೋಹಣ ನೇರವೇರಿಸಿ ನಂತರ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
- ದೇಶದಲ್ಲಿ ಅಂದು ಆಗಸ್ಟ್ 15 .1947ರಂದು ಲಭಿಸಿದ ಸ್ವಾತಂತ್ರ್ಯ ಇದೀಗ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವೆ. ಸ್ವಾತಂತ್ರ್ಯ ಹೋರಾಟಗಾರರು ನೆತ್ತರವ ಸುರಿಸಿ ತ್ಯಾಗ,ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯವನ್ನು ನಾವೆಲ್ಲರೂ ಅನುಭವಿಸುತಾ ಬಂದಿದ್ದೆವೆ ಆದರೂ ದೇಶದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಕಲುಷಿತ ವಾತವರಣದಲ್ಲಿ ನಾವು ಬದುಕುತ್ತಿದ್ದೆವೆ ಪರಕೀಯರ ಆಡಳಿತದಿಂದ ಮುಕ್ತಿ ಹೊಂದಿದ ದೇಶದಲ್ಲಿ ಇದೀಗ ಕೆಲ ಬಾಗಗಳಲ್ಲಿ ಶೋಷಣೆ ದೇಶ ಪ್ರೇಮವಿಲ್ಲದ ಕೆಲ ದುಷ್ಟಶಕ್ತಿಗಳ ಪಿತೂರಿಯಿಂದ ಅಸಹಕಾರ ಸೃಷ್ಠಿಯಾಗಲಿದೆ ನಾವೆಲ್ಲರು ಎಚ್ಚೆತ್ತುಕೊಳ್ಳದೆ ಹೋದರೆ ಬಹುಸಂಸ್ಕ್ರತಿಯ ಭವ್ಯಭಾರತಕ್ಕೆ ಗಂಡಾಂತರ ಎದುರಗಾಲಿದೆ ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಆಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ‘ಬ್ರಿಟೀಷರ ದಾಸ್ಯ ಸಂಕೋಲೆಯಿಂದ ಮುಕ್ತಿಗಾಗಿ ಜಲಿಯನ್ ವಾಲ್ ವಾಗ್ ಹತ್ಯಾಕಂಡ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಮನಗಾಣಬೇಕಿದೆ.ಇಂದಿನ ಯುವಪೀಳಿಗೆಗೆ ದೇಶಪ್ರೇಮ,ಸಂಸ್ಕಾರಯುತ ಶಿಕ್ಷಣ ಕೊಡಿಸುವಲ್ಲಿ ಪೋಷಕರು,ಶಿಕ್ಷಕರು ಮುಂದಾಗಬೇಕು’ ಎಂದು ಸಲಹೆ ನೀಡಿದರು.
- ನಾನು ಕ್ಷೇತ್ರದ ಶಾಸಕನಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಪ್ರಯತ್ನಿಸುವೆ.ಜಗಳೂರು ತಾಲ್ಲೂಕು ನಂಜುಂಡಪ್ಪ ವರದಿ ಪ್ರಕಾರ ಅಇತಿ ಹಿಂದೂಳಿದ ಪ್ರದೇಶವಾಗಿದ್ದು ಇದೀಗ ಕ್ಷೇತ್ರದ
- ಮಹತ್ವದ ಯೋಜನೆಗಳಾದ 57 ಕೆರೆ ತುಂಬಿಸುವ ಯೋಜನೆ ಸಿರಿಗೆರೆ ಶ್ರೀಗಳ ಅಶಿರ್ವಾದಿಂದ ಈಗಾಗಲೇ 34 ಕೆರೆಗಳಿಗೆ ನೀರು ಬಂದಿವೆ. ಹಾಗೂ ಅಪ್ಪರ್ ಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. 434 ಕೊಟಿ ರೂಗಳಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕ್ಷೇತ್ರಕ್ಕೆ ಅತ್ಯಂತ ಪ್ರಯೋಜನಕಾರಿಯಾಗಲಿದ್ದು .ನಾಳೆ ಬೆಳಿಗ್ಗೆ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಆಗಮಿಸುವರು ಅವರ ಅಮೃತ ಹಸ್ತದಿಂದ 430 ಕೊಟಿ ರೂಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಿದ್ದಾರೆ.
- ಶಾಸಕನಾಗಿ ಕ್ಷೇತ್ರವನ್ನ ಅಭಿವೃದ್ಧಿ ಪಥದ ಕೊಂಡೊಯ್ಯವುದೆ ನನ್ನ ಅಚಲವಾದ ನಿರ್ಧಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು
- .
- ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ ಸೈಯದ್ ಖಲೀಂ ಉಲಾರವರು ಧ್ವಜಾವಂದನೆ ಸ್ವೀಕರಿಸಿ ಮಾತನಾಡಿದರು . ಜಗಳೂರು ಬರಪೀಡಿತ ಪ್ರದೇಶವಾದರು ಸಹ ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳ ಸಹಕಾರದಿಂದ ವಿಜೃಂಭಣೆಯಿಂದ ಸ್ವಾತಂತ್ರ್ಯ ಸಂಭ್ರಮವನ್ನ ಆಚರಿಸುತಾ ಬಂದಿದ್ದೆವೆ ಭಾರತಾಂಭೆಯ ಅಶಿರ್ವಾದಿಂದ ಶಾಸಕರ ಪ್ರಯತ್ನದಿಂದ ಕ್ಷೇತ್ರದ ಕೆರೆಗಳಿಗೆ ನೀರು ಬಂದಿವೆ.ತಾಲ್ಲೂಕಿನ ರೈತರ ಮತ್ತು ಜನಸಾಮಾನ್ಯರ ಮೋಗದಲ್ಲಿ ಮಂದಹಾಸ ಮೂಡಿಸಿರುವ ವರುಣನ ಕೃಪೆಯಿಂದ ಮತ್ತಷ್ಟು ಕೆರೆಕಟ್ಟೆಗಳು ಭರ್ತಿಯಾಗಿವೆ ಇದೀಗ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವಂತ ದಿಟ್ಟತನದ ಶಾಸಕರ ಆಡಳಿತವೆ ಸಾಕ್ಷಿಯಾಗಿದೆ ಎಂದರು.
- ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್ ಮಾತನಾಡಿ ನಾವೆಲ್ಲರೂ ಇತಿಹಾಸವನ್ನ ಓದುವ ಮೂಲಕ ಸ್ವಾತಂತ್ರ್ಯ ಪಡೆಯಲು ನಮ್ಮ ಮಹನೀಯರು ಪಟ್ಟ ಕಷ್ಟದ ಫಲವೆ ಸ್ವಾತಂತ್ರ್ಯವಾಗಿದೆ. ಅಂದಿನ ದಿನಮಾನಗಳಲ್ಲಿ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಪಡೆಯಲು ಯುದ್ದವೆಂಬ ರಣರಂಗದಲ್ಲಿ ಹೋರಾಡಿದವರನ್ನ ಸ್ಮರಿಸಿ ಅವರ ಆದರ್ಶಗಳನ್ನ ಅನುಸರಿಸುವಂತ ದಿನವೆ ಸ್ವಾತಂತ್ರ್ಯ ನಮಗೆ ಹೆಮ್ಮೆಯಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಶಾಲಾಮಕ್ಕಳಿಂದ ಪಥಸಂಚಲ,ಸಾಂಸ್ಕೃತಿಕ,ಧ್ವಜವಂದನೆ ಕಾರ್ಯಕ್ರಮಗಳು ನೆರವೇರಿದವು.ಇದೇ ವೇಳೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ 6ಜನ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು
ಸಂದರ್ಭದಲ್ಲಿ ಪ.ಪಂ.ಮಾಜಿ ಅಧ್ಯಕ್ಷರಾದ ಆರ್.ತಿಪ್ಪೇಸ್ವಾಮಿ,ಸಿದ್ದಪ್ಪ,ಮಾಜಿ ಉಪಾಧ್ಯಕ್ಷರಾದ ಲಲಿತಮ್ಮ,ನಿರ್ಮಲ,ಮಂಜಮ್ಮ,ಸೇರಿದಂತೆ ಪ.ಪಂ ಸದಸ್ಯರುಗಳು,ನಾಮನಿರ್ದೇಶಿತ ಸದಸ್ಯರಾದ ಶಾಂತಕುಮಾರ್,ಕುರಿಜಯ್ಯಣ್ಣ,ತಾನಾಜಿಗೋಸಾಯಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಮಹೇಶ್ವರಪ್ಪ,ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಬಿ.ನಾಗರಾಜ್, ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್,ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ತಾ.ಪಂ ಇಓ ಕೆಂಚಪ್ಪ,ಬಿಇಓ ಹಾಲಮೂರ್ತಿ,ಪ್ರಾಂಶುಪಾಲ ಎ.ಎಲ್.ತಿಪ್ಪೇಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.