filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.35092592, 0.57395834);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜಗಳೂರು ಕ್ಷೇತ್ರಕ್ಕೆ ಪ್ಲೊರೈಡ್ ಮುಕ್ತ ನೀರು ತುಂಗಭದ್ರಾ ನದಿಯಿಂದ 365 ದಿನಗಳವರೆಗೂ ಒದಗಿಸುವ ವಿಶಿಷ್ಟ ಯೋಜನೆಯಿಂದ ವರವಾಗಲಿದೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಕಾಮಗಾರಿಗೆ ಚಾಲನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಹಾರಾಜನಹಟ್ಟಿ ಗ್ರಾಮದ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಇಂದು ಚಾಲನೆ ನೀಡಿ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು ಲೋಕಸಭಾ ಚುನಾವಣೆ ಪ್ರಚಾರದ ವೇಳೆ ನಾನು ಹೇಳಿದಂತೆ ಶಿಕ್ಷಣ. ಆರೋಗ್ಯ .ಕುಡಿಯುವ ನೀರು. ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುವೆ ಎಂದು ಪ್ರಚಾರದ ವೇಳೆ ವಾಗ್ದಾನ ಮಾಡಿದಂತೆ ಜಗಳೂರು ಕ್ಷೇತ್ರದ ಮತದಾರರು ನನಗೆ ಹೆಚ್ಚಿನ ಮತ ನೀಡಿ ಅಶಿರ್ವಾದ ಮಾಡಿದರ ಪ್ರತಿಫಲವಾಗಿ ನಾನು ಸಂಸದೆಯಾಗಿ ನಿಮ್ಮಗಳ ಸೇವೆ ಮಾಡಲು ಆವಕಾಶ ಮಾಡಿದ ಜನತೆಗೆ ನಾನು ಕೃತಜ್ಞತಾ ಪೂರ್ವಕವಾಗಿ ಕುಡಿಯುವ ನೀರಿನ ಕಾಮಗಾರಿ ಚಾಲನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೆನೆ.ತಾಲ್ಲೂಕಿನ 165 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಇದೀಗ ಚಾಲನೆ ನೀಡಿದ್ದು ಇಂತ ಯೋಜನೆಗಳಿಂದ ಜಗಳೂರಿನ ಪ್ಲೊರೈಡ್ ನೀರು ಮುಕ್ತವಾಗಿ ಶುದ್ದ ನೀರು ತಮ್ಮ ಮನೆಗಳಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .ಅಂತ ಅಂತವಾಗಿ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳುನ್ನು ಮಾಡುವ ಚಿಂತನೆ ಹೊದಿದ್ದೆವೆ ಶಾಸಕರಾದ ಬಿ.ದೇವೇಂದ್ರಪ್ಪ ರವರ ಸಹಕಾರ ಮತ್ತು ಕ್ಷೇತ್ರದ ಮತದಾರರು ನನಗೆ ಅತಿ ಹೆಚ್ಚಿನ ಮತ ನೀಡಿ ಗೆಲುವು ತಂದು ಕೊಟ್ಟಿರುವುದು ಇದು ನಿಮ್ಮ ಗೆಲವು ಎಂದರು

. ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ನೂತನ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ರವರ ಅಮೃತ ಅಸ್ತದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುವ ಒತ್ತಾಸೆ ನಮ್ಮದಾಗಿತ್ತು ಅವರು ನಮ್ಮ ಕ್ಷೇತ್ರಕ್ಕೆ ಕಾಲಟ್ಟಿರುವ ದಿನಮಾನಗಳಲ್ಲಿ ಸಹ ಸಮೃದ್ದಿ ಮಳೆ ಬೆಳೆ ವರಮಲಕ್ಷ್ಮೀ ದಿನದಂದು ನಮಗೆ ವರವೆ ತಂದುಕೊಡಲಿದ್ದಾರೆ .ಜಗಳೂರು ಕ್ಷೇತ್ರಕ್ಕೆ ಇಂತ ಮಹತ್ವದ ಯೋಜನೆಗಳಿಂದ ಅತ್ಯಂತ ಪ್ರಯೋಜಕಾರಿಯಾಗಲಿವೆ.ಅಪ್ಪರ್ ಭದ್ರಾ.57 ಕೆರೆ ತುಂಬಿಸುವ ಯೋಜನೆ .ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವರವಾಗಲಿವೆ ಎಂದರು.ಸಂಸದರು ನೂತನವಾಗಿ ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಚಿಕ್ಕಮ್ಮನಹಟ್ಟಿ ಗ್ರಾಮದ ನೂತನ ಕೆರೆಗೆ ಭಾಗಿನ ಅರ್ಪಣೆ ವರಮಲಕ್ಷ್ಮೀ ಪೂಜೆ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯನಮ್ಮಗಳಲ್ಲಿ ಭಾಗವಹಿಸಿ ಕ್ಷೇತ್ರದ ಮತದಾರರಿಗೆ ಒಂದು ವರವನ್ನೆ ತಂದಿರುವ ಜಿಲ್ಲಾ ಸಂಸದರು ನಮ್ಮ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿದ್ದಾರೆ . ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯನ್ನು ಗುತ್ತಿಗೆದಾರರು ಗುಣಮಟ್ಟದಿಂದ ನಿರ್ಮಿಸುವಂತೆ ಸೂಚನೆ ನೀಡಿದರು. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸಾಧಿಕವುಲ್ ಮಾತನಾಡಿದರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಒಟ್ಟು ಅಂದಾಜು ಮೊತ್ತ 480 ಕೋಟಿ ರೂ ಜಿ ಎಸ್ ಟಿ ಕಡಿತವಾಗಿ 348 ಕೊಟಿ ರೂಗಳಲ್ಲಿ ಜಗಳೂರು ತಾಲ್ಲೂಕಿನ 166 ಹಳ್ಳಿಗಳಿಗೆ ನೀರು ಸರಬರಾಜು ಆಗಲಿದ್ದು ದಾವಣಗೆರೆ 20 ಗ್ರಾಮಗಳು ಹರಿಹರ 11 ಹಳ್ಳಿಗಳು ಒಟ್ಟು 196 ಗ್ರಾಮಗಳಿಗೆ ಈ ಯೋಜನೆಯಿಂದ ನೀರು ಒದಗಿಸಲಾಗುವುದು.ರಾಜನಹಳ್ಳಿ ಬಳಿಯಿರುವ ತಿಮ್ಮಲಾಪುರ ಬ್ಯಾರೆಜ್ ಮೂಲಕ ತುಂಗಾಭದ್ರಾ ನದಿ ನೀರು ಲಿಪ್ಟು ಮಾಡಿ ಬಾತಿ ಗುಡ್ಡದ ಬ್ಯಾರೆಜ್ ಮೂಲಕ ಶುದ್ದಿಕರಿಸಿ ಹಾಲೆಕಲ್ಲು ಸ್ಟೋರಿಜ್ ಟ್ಯಾಂಕ್ ಮೂಲಕ ಕ್ಷೇತ್ರಕ್ಕೆ ನೀರು ಸರಬರಾಜು ಅಗಲಿದೆ ಎಂದು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ.ಸಿಇಓ ಸುರೇಶ್ ಇಟ್ನಾಳ್ .ಬ್ರಾಹ್ಮಣ ಅಭಿವೃದ್ಧಿ ನಿಗಮದ ಅದ್ಯಕ್ಷರು ಅಸಗೋಡು ಜಯಸಿಂಹ.ಬಂಜಾರ ನಿಗಮದ ಅದ್ಯಕ್ಷರಾದ ಜಯದೇವನಾಯ್ಕ್.. ಮುಖಂಡ ಕಲ್ಲೇಶ್ ರಾಜ್ ಪಟೇಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್.ಮುಖಂಡ ಮಹೇಶ್.,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ‌ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,,ಸಂಸದರ ಆಪ್ತ ಸಹಾಯಕ ಹರೀಶ್ ಬಸಾಪುರ,ಶಾಸಕರ ಆಪ್ತ ಸಹಾಯಕ ಮಧುಸೂಧನ್,ಮುಖಂಡರಾದ ,ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!