ಪಟ್ಟಣದ ತರಳಬಾಳು ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ನೂತನ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರಿಗೆ ಹಾಗೂ ವಿಧಾನಸಭಾ ಕ್ಷೇತ್ರದ ಜನತೆಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು
ಚಿಕ್ಕಮ್ಮನಹಟ್ಟಿ ಕೆರೆಗೆ ಸಂಸದೆ ಹಾಗೂ ಶಾಸಕ ಬಾಗೀನ ಅರ್ಪಣೆ.
ಜಗಳೂರು ಸುದ್ದಿ:ತಾಲೂಕಿನ ಚಿಕ್ಕಮ್ಮನಹಟ್ಟಿಯಲ್ಲಿ ₹5ಕೋಟಿ ವೆಚ್ಚದಲ್ಲಿ ಸುಂದರ ವಿನ್ಯಾಸದಲ್ಲಿ ನಿರ್ಮಾಣಗೊಂಡು ನೀರು ಭರ್ತಿಯಾಗುವ ಹಂತದಲ್ಲಿರುವ ಕೆರೆಗೆ ಸಂಸದೆ ಡಾ.ಪ್ರಭಾಮಲ್ಲಿ ಕಾರ್ಜುನ್ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಅವರು ಬಾಗೀನ ಅರ್ಪಿಸಿದರು.
ಗ್ರಾಮಸ್ಥರಿಂದ ವೈಭವದ ಸ್ವಾಗತ:ಅಲಂಕೃತ ಎತ್ತಿನ ಬಂಡಿಯ ಮೇಲೆ,ಡ್ರಮ್ ಸೆಟ್,ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಯ ಮೂಲಕ, ಕೆರೆಯವರೆಗೂ ವೈಭವದ ಮೆರವಣಿಗೆ ಯಾವುದೋ ಒಂದು ಜಾತ್ರೆ ಸಂಭ್ರಮದ ಮನೆಮಾಡಿತ್ತು.ಮಹಿಳೆಯರು,ವಯೋವೃದ್ದರು,ಯುವಕರಲ್ಲಿ ಸಂತಸದ ವಾತಾವರಣ ಕಂಡುಬಂದಿತು.
ನಂತರ ಶಾಸಕ ಬಿ.ದೇವೇಂದ್ರಪ್ಪ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ವರಮಹಾಲಕ್ಷ್ಮಿ,ಪೂಜೆ ಕೈಂಕರ್ಯದಲ್ಲಿ ಭಾಗವಹಿಸಿದರು.
: ತ್ರಿಬಲ್ ಇಂಜಿನ್ ಆಡಳಿತ ಸರಕಾರ ಜಿಲ್ಲೆಯಲ್ಲಿ ಭದ್ರ:
ಶೀಘ್ರದಲ್ಲಿ ಗಾರ್ಮೆಂಟ್ಸ್,ಗುಡಿಕೈಗಾರಿಕೆ ಸ್ಥಾಪನೆ:ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭರವಸೆ.
ಜಗಳೂರು ಸುದ್ದಿ: ೨ ಜಿಲ್ಲೆಯಲ್ಲಿ ತ್ರಿಬಲ್ ಇಂಜಿನ್ ಆಡಳಿತ ಸರಕಾರದ ಬೇಡಿಕೆ ಈಡೇರಿದೆ.ದಾವಣಗೆರೆಯಲ್ಲಿ ಎರಡು ಎಕರೆ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್,ಗುಡಿಕೈಗಾರಿಕೆ ಸ್ಥಾಪಿಸುವ ಮೂಲಕ ಅಭಿವೃದ್ದಿ ಪರ್ವ ಆರಂಭಿಸೋಣ ಎಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭರವಸೆ ನೀಡಿದರು.
ಪಟ್ಟಣದ ತರಳಬಾಳು ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ನೂತನ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರಿಗೆ ಹಾಗೂ ವಿಧಾನಸಭಾ ಕ್ಷೇತ್ರದ ಜನತೆಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಖಾಲಿ ಹಾಳೆಯಂತಿರುವ ಜೀವನದಲ್ಲಿ ಉತ್ತಮ ಕ್ಷೇತ್ರದ ಆಯ್ಕೆ ಬಹುಮುಖ್ಯ,ಅಂತೆಯೇ ನನ್ನ ರಾಜಕೀಯ ಕ್ಷೇತ್ರದ ಆಯ್ಕೆಗೆ ವ್ಯಾಪಕ ಬೆಂಬಲ ನೀಡಿ ಸಂಸದೆಯನ್ನಾಗಿಸಿದ ಕ್ಷೇತ್ರದ ಜನೆತೆಗೆ ಅಭಿನಂದನೆಗಳು,25 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಜಿಲ್ಲೆ ಇದೀಗ ಕಾಂಗ್ರೆಸ್ ಭದ್ರಕೋಟೆಯಾಗಿದೆ.ನನ್ನ ಆಡಳಿತಾವಧಿಯಲ್ಲಿ ಶಿಕ್ಷಣ,ಆರೋಗ್ಯ,ಉದ್ಯೋಗ,ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ, ಜಿಲ್ಲೆಯನ್ನು ರಾಜ್ಯದಲ್ಲಿಯೇ ಸುಂದರ ಚಿತ್ರಣವನ್ನಾಗಿ ಬದಲಿಸುವೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ 8 ಕ್ಷೇತ್ರಗಳು 8 ಮಕ್ಕಳಿದ್ದಂತೆ ಅವುಗಳಲ್ಲಿ ಜಗಳೂರು,ಹರಪನಹಳ್ಳಿ ತಾಲೂಕುಗಳು ವಿಕಲಚೇತನರಿದ್ದಂತೆ ಕೈಹಿಡಿದು ಉಳಿದ ತಾಲೂಕುಗಳ ಸರಿಸಮಾನಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ’ ಎಂದರು.
‘ರಾಜ್ಯದಲ್ಲಿ ಉದ್ಯಮಿ ಅಜೀಂ ಪ್ರೇಮ್ ಜಿ ಅವರ ₹1500ಕೋಟಿ ಸಹಾಯಧನದಲ್ಲಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿಪಡಿಸಲಾಗುತ್ತಿದೆ.ಅಂತೆಯೇ ದೇಶದ ಸಮಗ್ರ ಅಭಿವೃದ್ದಿಗೆ ಬಹುರಾಷ್ಟ್ರೀಯ ಕಂಪನಿ ಉದ್ಯಮಿಗಳಾದ ಅದಾನಿ,ಅಂಬಾನಿ ಕೈಜೋಡಿಸಬೇಕು’ ಎಂದರು.
‘ಭಾರತದೇಶದಲ್ಲಿ ಹೇರಳವಾಗಿರುವ ಮಾನವಸಂಪನ್ಮೂಲ ಉಳಿಸಿಕೊಂಡು ದೇಶದ ಪ್ರಗತಿಗೆ ಸದ್ಬಳಕೆ ಮಾಡಿಕೊಳ್ಳಲು,ಸೂಕ್ತ ಆರೋಗ್ಯ ಸೇವೆ ಅಗತ್ಯವಿದೆ.ಆದ್ದರಿಂದ ಸಂಸತ್ತಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಅನುದಾನವನ್ನು ಚರ್ಚೆ ಮಾಡಿರುವೆ’ಎಂದು ಹೇಳಿದರು.
ಎಂ.ಡಿ.ಕೀರ್ತಿಕುಮಾರ್ ತಂಡಕ್ಕೆ ಪ್ರಶಂಸೆ:’ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚುನಾವಣೆ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿಕೊಳ್ಳದಂತೆ ಮತದಾರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆದು ಕ್ಷೇತ್ರದಲ್ಲಿ ಅಧಿಕ ಮತ ಗಳಿಕೆಗೆ ಕಾರಣೀಕರ್ತರಾದ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ಬಿ.ದೇವೇಂದ್ರಪ್ಪ ಅವರ ಪುತ್ರ ಎಂ.ಡಿ ಕೀರ್ತಿಕುಮಾರ್ ಅವರ ತಂಡವನ್ನು ಪ್ರಶಂಸಿದರು.ಹಾಗೂ ಸಂಸದರಿಗೆ ನೀಡುವ ಪ್ರಮಾಣ ಪತ್ರವನ್ನು ಬೆಳ್ಳಿ ಅಕ್ಷರದಿಂದ ಲೇಪನಗೊಳಿಸಿ ಕಾಣಿಕೆಗೆ ಮೆಚ್ಚುಗೆ’ ವ್ಯಕ್ತಪಡಿಸಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,’ಕಳೆದ ವರ್ಷದ ಶ್ರಾವಣ ಮಾಸದ ವರಮಹಾಲಕ್ಷ್ಮಿ ಪೂಜೆಗೆ ನಮ್ಮಕುಟುಂಬದ ಆಹ್ವಾನಕ್ಕೆ ಗೌರವದಿಂದ ಆಗಮಿಸಿದ್ದ ಡಾ.ಪ್ರಭಾಮಲ್ಲಿಕಾರ್ಜುನ್ ಅವರ ರಾಜಕೀಯ ಭವಿಷ್ಯಕ್ಕೆ ನಾಂದಿಯಾಯಿತು.ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಯಿತು.ಡಾ.ಪ್ರಭಾಮಲ್ಲಿಕಾರ್ಜುನ್ ಅವರು ನೂತನ ಸಂಸದೆಯಾಗಿ ಆಯ್ಕೆಯಾಗಿ ಮೊದಲ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿ ಭದ್ರಾಮೇಲ್ದಂಡೆ ಯೋಜನೆಗೆ ಧ್ವನಿಯಾದರು.ತಾಲೂಕಿನ ಸಮಗ್ರ ಅಭಿವೃದ್ದಿಗೆ ಉಸ್ತುವಾರಿಸಚಿವರು,ಸಂಸದರು,ಸದಾ ಕೈಜೋಡಿಸಲಿ’ಎಂದು ಮನವಿ ಮಾಡಿದರು.
ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ,’ಗೆಲುವಿಗೆ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ನೀಡಿದ ಶಾಮನೂರು ಕುಟುಂಬಕ್ಕೆ ಮೊದಲ ಅಭಿನಂದನೆಗಳು.ಸಂಸದರಾಗಿ ಆಯ್ಕೆಗೊಂಡ ನಂತರ ಅವರ ಕ್ಷೇತ್ರದ ಅಭಿವೃದ್ದಿಪರ ಚಿಂತನೆ ಇತರರಿಗೆ ಮಾದರಿಯಾಗಿವೆ ಎಂದರು.
ಬಂಜಾರ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಮಾತನಾಡಿ,ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಮಾಂಸಾಹೇಬರಂತಹ ಮುತ್ಸದ್ದಿ ರಾಜಕಾರಣಿಯನ್ನು ರಾಜ್ಯಕ್ಕೆನೀಡಿದ ಜಗಳೂರಿಗೆ ರಾಜಕೀಯ ಇತಿಹಾಸವಿದೆ.ಶಾಸಕರು ಪಟ್ಟಣದಲ್ಲಿ ನಿವೇಶನ ನೀಡಿದರೆ ₹2.5ಕೋಟಿ ವೆಚ್ಚದ ಬಂಜಾರ ಸಮುದಾಯಭವನ ನಿರ್ಮಿಸುವೆ.₹5ಕೋಟಿ ವೆಚ್ಚದಲ್ಲಿ ತಾಲೂಕಿನ ತಾಂಡಾಗಳಲ್ಲಿ ಅಭಿವೃದ್ದಿ ಕಾಮಗಾರಿಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್.ಮುಖಂಡ ಸುರೇಶಗೌಡ್ರು,ಎಸ್.ಮಂಜುನಾಥ್,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಸಂಸದರ ಆಪ್ತ ಸಹಾಯಕ ಹರೀಶ್ ಬಸಾಪುರ,ಶಾಸಕರ ಆಪ್ತ ಸಹಾಯಕ ಮಧುಸೂಧನ್,ಮುಖಂಡರಾದ ಸಿ.ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ವಕೀಲ ಕೆ.ಎಂ.ಬಸವರಾಜಪ್ಪ,ಗಿರೀಶ್,ಗುರುಸಿದ್ದನಗೌಡ,ಎಂ.ಎಸ್.ಪಟೇಲ್,ಬಂಗ್ಲೆ ಫರ್ ವೀಜ್,ಕಲ್ಪನಾ,ಪ.ಪಂ ಸದಸ್ಯರಾದ ಮಹಮ್ಮದ್ ಅಲಿ,ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಲುಕ್ಮಾನ್ ಖಾನ್,ನಿರ್ದೇಶಿತ ಸದಸ್ಯರಾದ ತಾನಾಜಿಗೋಸಾಯಿ,ಶಾಂತಕುಮಾರ್,ಕುರಿಜಯ್ಯಣ್ಣ,ಸೇರಿದಂತೆ ಇದ್ದರು.