ಸಮಾಜಕಲ್ಯಾಣ ಇಲಾಖೆಯಲ್ಲಿ ದೇವರಾಜ್ ಅರಸ್ ಜಯಂತಿ ವಿಳಂಬ :- ಅಗೌರವ.
ಜಗಳೂರು ಸುದ್ದಿ:- ಪಟ್ಟಣದ ಸಮಾಜಕಲ್ಯಾಣ ಇಲಾಖೆ ಕಛೇರಿ ಯಲ್ಲಿ ದೇವರಾಜ್ ಅರಸು ಅವರ ಜಯಂತ್ಯೋತ್ಸವ ಕಾರ್ಯ ಕ್ರಮ ಆಚರಣೆಯನ್ನು ತಡವಾಗಿ ಆಚರಿಸಲಾಯಿತು.ಇದರಿಂದ ಮಹಾನೀಯರಿಗೆ ಅಗೌರವ ತೋರಿಸಿದ್ದಾರೆ.
ಬೆಳಿಗ್ಗೆ 12 ಗಂಟೆಯಾದರೂ ಕಛೇರಿ ಸಮಯದಲ್ಲಿ ಆಚರಿಸದೆ ನಿರ್ಲಕ್ಷ್ಯವಹಿಸಿದ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದಲ್ಲಿ ಜಯಂತಿ ಆಚರಿಸದೆ ಇರುವ ಭಾವಚಿತ್ರಗಳು ಹರಿದಾಡುತ್ತಿದ್ದಂತೆ ವೈರಲ್ ಆಗಿದ್ದವು. ನಂತರ ಮಧ್ಯಾಹ್ನ 11-30 ಗಂಟೆ ವೇಳೆಗೆ ತಹಶೀಲ್ದಾರ್ ಅವರು ಖಡಕ್ ಎಚ್ಚರಿಕೆ ನೀಡಿದ ನಂತರ ಸಿಬ್ಬಂದಿಗಳು12 ಗಂಟೆಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೇವರಾಜ್ ಅರಸ್ ಅವರ ಜಯಂತಿ ಆಚರಿಸದ್ದಾರೆ.
ಅದರೆ ನೂತನವಾಗಿ ಅಧಿಕಾರ ವಹಿಸಿಕೊಂಡ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಪರಮೇಶ್ವರಪ್ಪ ಅವರು ಜಯಂತಿಗೆ ಗೈರಾಗಿರುವುದು ಹಿಂದುಳಿದ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸ್ ಅವರ ಬಗ್ಗೆ ಮಹಾನೀಯರ ಬಗ್ಗೆ ತಾತ್ಸಾರ ಸಲ್ಲದು.ಇದು ಸಾರ್ವಜನಿಕ ಆಕ್ರೊಶಕ್ಕೆ ಕಾರಣವಾಗಿದೆ.
ಕಛೇರಿ ಭಾವಚಿತ್ರಗಳ,ಕಡತಗಳ ಕಸದ ಗೂಡು :- ಮಹಾನೀಯರ ಭಾವಚಿತ್ರಗಳು ಕಸದ ಮೂಲೆಯಲ್ಲಿ ರಾಸುಬಿದ್ದಿರುವುದು.ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಕಡತಗಳು,ದಾಖಲೆಗಳು ಎಲ್ಲೆಂದರಲ್ಲಿ ಬಟ್ಟೆಯಲ್ಲಿ ಕಟ್ಟಿ ಎಸೆದಿರುವುದು ದುರಂತವಾಗಿದೆ. ಸಿಬ್ಬಂದಿಗಳು,ಅಧಿಕಾರಿಗಳನಿರ್ಲಕ್ಷ್ಯ ಎತ್ತಿ ತೋರಿತ್ತಿದೆ.ಕಛೇರಿಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
‘ಕಳೆದ ತಿಂಗಳ ವಚನಕಾರ ಫ.ಗು.ಹಳಕಟ್ಟೆ ಜಯಂತಿ ಆಚರಿಸದ ಹಿನ್ನೆಲೆ ಶೋಕಾಷ್ ನೋಟೀಸ್ ನೀಡಲಾಗಿದೆ.ದೇವರಾಜ್ ಅರಸ್ ಅವರ ಜಯಂತಿ ಆಚರಿಸದ ಕಾರಣ ಸಾರ್ವಜನಿಕರಿಂದ ದೂರು ಕೇಳಿಬಂದ ತಕ್ಷಣ ಕೂಡಲೇ ಆಚರಿಸುವಂತೆ ಸೂಚಿಸಲಾಗಿದೆ ಸಂಬಂಧಪಟ್ಟ ಅಧಿಕಾರಿಗೆ ಕಾರಣ ಕೇಳಿ ಶೋಕಾಷ್ ನೋಟಿಸ್ ನೀಡುತ್ತೇನೆ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು.
—— ಸಯ್ಯದ್ ಕಲೀಂಉಲ್ಲಾ ,ತಹಶೀಲ್ದಾರ್