filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

7 ನೇ ವೇತನದ ಪರಿಷ್ಕೃತ ವೇತನಶ್ರೇಣಿಯಲ್ಲಿ ನಿವೃತ್ತ ನೌಕರರಿಗೂ ಸೌಲಭ್ಯ ಒದಗಿಸಲು ಶಾಸಕ.ಬಿ.ದೇವೇಂದ್ರಪ್ಪ ಗೆ ಮನವಿ.

ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ‘7 ನೇ ವೇತನ ಆಯೋಗದ ಅನುಷ್ಠಾನದಲ್ಲಿ ದಿನಾಂಕ:1-7-2022 ರಿಂದ ದಿ:31-07-2024 ರ ಅವಧಿಯಲ್ಲಿ ನಿವೃತ್ತಿಹೊಂದಿದ ನೌಕರರಿಗೆ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲೂಕು ಸಮಿತಿವತಿಯಿಂದ ಶಾಸಕ.ಬಿ.ದೇವೇಂದ್ರಪ್ಪ’ಅವರಿಗೆ ಮನವಿಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಪಿ.ಗುರಪ್ಪ ಮಾತನಾಡಿ,’ರಾಜ್ಯದ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಸರಕಾರವು ಪರಿಷ್ಕೃತ 7 ನೇ ವೇತನವನ್ನು ಅನುಷ್ಠಾನಗೊಳಿಸಿರುವುದು ಸ್ವಾಗತರ್ಹ.2022 ಜುಲೈ 1ರಿಂದ 2024 ಜುಲೈ 31 ರ ಅವಧಿಯಲ್ಲಿ ಸೇವೆಯಿಂದ ನಿವೃತ್ತಿಹೊಂದಿದ ಅಥವಾ ಸೇವೆಯಲ್ಲಿರುವಾಗ ಮರಣಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕಹಾಕುವ ಉದ್ದೇಶಿಗಳಿಗಾಗಿ ಪರಿಗಣಿಸತಕ್ಕದ್ದು.ಸದರಿ ಕಾಲ್ಪನಿಕ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಮತ್ತು ಮರಣಹೊಂದಿದ ಸರ್ಕಾರಿ ನೌಕರನ ಫಲಾನುಭವಿಗಳಿಗೆ ಸಂದರ್ಭಾನುಸಾರ ದಿ:01-08-2024 ರಿಂದ‌ ಪ್ರಾಪ್ತವಾಗತಕ್ಕದ್ದು’ಎಂದು ಮನವಿಮಾಡಿದರು.

ಸಂಘದ ಕಾರ್ಯದರ್ಶಿ ಜಗನ್ನಾಥರೆಡ್ಡಿ ಮಾತನಾಡಿ,’7 ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ‌ ಸೌಲಭ್ಯಗಳಾದ ಡಿಸಿಆರ್ ಜಿ,ಆಪ್ಷನ್,ಇಎಲ್ ಎನ್ ಕಾಸ್ಟಮೆಂಟ್,ಸೌಲಭ್ಯಗಳನ್ನು ಲೆಕ್ಕಾಚಾರದೊಂದಿಗೆ ನ್ಯಾಯಯೋಚಿತವಾಗಿ ಲಭ್ಯವಾಗುವ ಆರ್ಥಿಕ ಸೌಲಭ್ಯ ದೊರಕಿಸಿಕೊಡಲು ಸರ್ಕಾರದ ಗಮನಕ್ಕೆ ತರಬೇಕು’ಎಂದು ವಿನಂತಿಸಿಕೊಂಡರು.

ಶಾಸಕ.ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ‌ಮಾತನಾಡಿ,’ತಮ್ಮ‌ಮನವಿಯನ್ನು ಸರ್ಕಾರಕ್ಕೆ ಶಿಫಾರಸ್ಸುಮಾಡಲಾಗುವುದು.ತಾತ್ಕಾಲಿಕವಾಗಿ ಮೂಡಾ,ವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ಗೊಂದಲ‌ ಸೃಷ್ಠಿಯಲ್ಲಿ ಮುಖ್ಯಮಂತ್ರಿ,ಹಾಗೂ ಸಚಿವರುಗಳು ನಿರತರಾಗಿದ್ದಾರೆ.ನಂತರ ತಮ್ಮ ಬೇಡಿಕೆಯನ್ನು ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ಇದೇ ವೇಳೆ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರಿಗೂ ಲಿಖಿತ ಮನವಿಸಲ್ಲಿಸಿದರು.

ಸಂದರ್ಭದಲ್ಲಿ ಕರ್ನಾಟಕ‌ ನಿವೃತ್ತ ನೌಕರರ ವೇದಿಕೆಯ ತಾಲೂಕು ಗೌರವ ಅಧ್ಯಕ್ಷ ಡಿ.ತಿಪ್ಪೇಸ್ವಾಮಿ,ಪದಾಧಿಕಾರಿಗಳಾದ ಬಿ.ಮಹೇಶ್ವರಪ್ಪ, ಜಯ್ಯಣ್ಣ,ಜಯ್ಯಮ್ಮ,ಅರ್ಜುನಪ್ಪ,ಸಾವಿತ್ರಮ್ಮ,ಶಕುಂತಲಮ್ಮ,ನಾಗಪ್ಪ,ಚಿತ್ರಲಿಂಗಪ್ಪ,ಶೊಭಾ,ವೆಂಕಟೇಶ್ ನೇಮಿಚಂದ್ರ,ಚಂದ್ರಶೇಖರಯ್ಯ,ಧನಂಜಯರೆಡ್ಡಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!