ಕಸಾಪ ಜಿಲ್ಲಾ ಸಮ್ಮೇಳನ ಕುರಿತು ಪೂರ್ವಭಾವಿ ಸಭೆ.
ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರ ಸಮ್ಮುಖದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಸಮೇಳನ ಕುರಿತು ಪೂರ್ವಭಾವಿ ಸಭೆ ನಡೆಸಲಾಯಿತು.
ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,ಕನ್ನಡಸಾಹಿತ್ಯ ಪರಿಷತ್ತಿನಲ್ಲಿ ಹುದ್ದೆಗಳು ಶಾಶ್ವತವಲ್ಲ.ಕನ್ನಡನಾಡು-ನುಡಿ ,ನೆಲಜಲ ಸಂಸ್ಕೃತಿ,ಸಾಹಿತ್ಯ,ಸಂರಕ್ಷಣೆ ಬಹುಮುಖ್ಯ. ಕೆಲವರು ಆವಕಾಶ ಸಿಗದಿದ್ದಾಗ ಸಂಘಟನೆ ಒಡೆದಾಳುವುದು ಸರಿಯಲ್ಲ. ಅಂತಹವರು ಸಂಘ ಸಂಸ್ಥೆಗಳಲ್ಲಿ ಭಾಗಿಯಾಗಬಾರದು ಎಂದು ಪರೋಕ್ಷವಾಗಿ ಟೀಕಿಸಿದರು . ಪಕ್ಷಾತೀತ,ಜಾತ್ಯಾತಿತ,ಧರ್ಮಾತೀತವಾಗಿ ಕನ್ನಡ ತೇರನ್ನು ಎಳೆಯೋಣ ನವೆಂಬರ್ ನಲ್ಲಿ ಅದ್ದೂರಿಯಾಗಿ ಜಿಲ್ಲಾಸಮ್ಮೇಳನದ ಕನ್ನಡ ಹಬ್ಬವನ್ನಾಗಿ ಸಂಭ್ರಮಿಸೋಣ’ಎಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷರಾದ ವಾಮದೇವಪ್ಪ ಮಾತನಾಡಿ ಜಗಳೂರು ಕ್ಷೇತ್ರದಲ್ಲಿ ಈ ಬಾರಿ ಕನ್ನಡ ತೇರು ಎಳೆಯೋಣ ಜಿಲ್ಲಾ ಸಮ್ಮೇಳನ ನಡೆಸಲು ಕ್ಷೇತ್ರದ ಶಾಸಕರು ಉತ್ಸುಕರಾಗಿದ್ದು ಅವರ ಅಧ್ಯಕ್ಷತೆಯಲ್ಲಿ ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಜರುಗುವುದು ಇದೀಗ ಪೂರ್ವ ತಯಾರಿಯಾಗಿ ಅವರ ಅದ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಇನ್ನು ಎರಡು ಮೂರು ಸಭೆ ಮಾಡುವ ಮೂಲಕ ಸಮ್ಮೇಳನಕ್ಕೆ ಸಿದ್ದತೆ ಆಯೋಜಿಸಲು ಪೂರಕ ಯೋಜನೆ ಹಾಕಿಕೊಳ್ಳಲಾಗುವುದು . . ಸಮ್ಮೇಳನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಇಂದಿನ ಯುವ ಜನಾಂಗಕ್ಕೆ ತಲುಪಿಸಲು ಹತ್ತು ಹಲವಾರು ವಿಶೇಷ, ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯಿದೆ ಎಂದರು .
ಸಂದರ್ಭದಲ್ಲಿ ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ.ಡಿ ಸಿ. ಮಲ್ಲಿಕಾರ್ಜುನಪ್ಪ. .ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿಜಯ್ಯಪ್ಪ.ಜಿಲ್ಲಾ ಕಸಾಪ ಕಾರ್ಯಧರ್ಶಿಗಳಾದ ದಿಳ್ಯಪ್ಪ.ರೇವಣ್ಣ ಸಿದ್ದಪ್ಪ ಅಂಗಡಿ. ಸಂಘಟನೆ ಕಾರ್ಯಧರ್ಶಿ ಸಿ.ಜಿ ಜಗದೀಶ್ ಕೂಲಂಬಿ. ಪದಾಧಿಕಾರಿಗಳಾದ ಜಿಗಳಿ ಪ್ರಕಾಶ್. ಎನ್ ಎಸ್ ರಾಜು. ಷಡಕ್ಷರಪ್ಪ ಎಂ.ಬೇತೂರು.ಪರಿಮಳ ಜಗದೀಶ್., ಜಗಳೂರು ತಾಲೂಕು ಅಧ್ಯಕ್ಷೆ ಸುಜಾತಮ್ಮ, ಪತ್ರಕರ್ತರಾದ ಬಿ ಪಿ ಸುಭಾನ್. , ಪ್ರಾಂಶುಪಾಲ ನಾಗಲಿಂಗಪ್ಪ,ಓಬಣ್ಣ,.ವಕೀಲರಾದ ಒಬಳೇಶ್. ಬಿಳಿಚೋಡು ಕಸಾಪ ಹೊಬಳಿ ಘಟಕದ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ,ಗೀತಾಮಂಜು.ಶಿಕ್ಷಕರಾದ ಮಾರನಾಯ್ಕ್.ಆದಮಣ್ಣ.ಕಸಬಾ ಹೊಬಳಿ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ. ಧನ್ಯಕುಮಾರ್ ಸತೀಶ್. ಸೇರಿದಂತೆ ಇದ್ದರು.