ಅಧರ್ಮದ ಅವನತಿಗೆ,ಧರ್ಮದರಕ್ಷಣೆಗೆ ಧರೆಗಿಳಿದವನೇ ಶ್ರೀ ಕೃಷ್ಣ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ
ಜಗಳೂರು ಸುದ್ದಿ:’ಸಮಾಜದಲ್ಲಿ ಅಧರ್ಮ ತಾಂಡವಾಡುತ್ತಿರುವಾಗ ಧರ್ಮರಕ್ಷಣೆಗೆ ಧರೆಗಿಳಿದು ಬರುವವನೇ ಅವತಾರಪುರುಷ ಶ್ರೀಕೃಷ್ಣ’ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
‘ತ್ರೇತಾ,ದ್ವಾಪರ,ಕಲಿಯುಗಾಂತರಗಳಲ್ಲಿ ಸನಾತನಧರ್ಮದಲ್ಲಿ,ಯುಗಪುರುಷ,ದಾರ್ಶನಿಕ,ಸಾಧುಸಂತ,ಶರಣರು ಜನ್ಮತಾಳಿದ ಇತಿಹಾಸ ಹೊಂದಿದ ಗತವೈಭದ ದೇಶ ಭಾರತ’ಎಂದು ವ್ಯಾಖ್ಯಾನಿಸಿದರು.
‘ಮಹಭಾರತದ ಶ್ರೀ ಕೃಷ್ಣನು ಕೇವಲಯಾದವ ಸಮಾಜಕ್ಕೆ ಸೀಮಿತವಾಗದೆ ಎಲ್ಲಾವರ್ಗದವರು ಮಹಾಭಾರತ ಗ್ರಂಥವನ್ನು ಅಧ್ಯಯನ ನಡೆಸಬೇಕಿದೆ.ಇದರಿಂದ ಗೀತಾಸಾರ,ಶ್ರೀಕೃಷ್ಣನ ಸಂದೇಶಗಳನ್ನು ಯುವಪೀಳಿಗೆಗೆ ಪಸರಿಸಬೇಕಿದೆ.ತಾಲೂಕಿನಲ್ಲಿ ಯಾದವ ಸಮಾಜದವರು ಒಗ್ಗೂಡಿ ಪಕ್ಷಾತೀತ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಅನ್ಯ ಸಮಾಜಕ್ಕೆ ಮಾದರಿಯಾಗಬೇಕು.ಯಾದವ ಸಮಾಜದ ಶ್ರೇಯೋಭಿವೃದ್ದಿಗೆ ಸದಾ ಬದ್ದನಾಗಿರುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನಡೆಸುತ್ತಿದ್ದು.ಹಿಂದುಳಿದ,ಶೋಷಿತ ಸಮುದಾಯಗಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಕಿವಿಮಾತು ಹೇಳಿದರು.
ಜಯಂತಿಗೆ ಅಧಿಕಾರಿಗಳು ಗೈರು ಶಾಸಕ ಗರಂ:’ಸರ್ಕಾರಿ ಸರಳ ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಗೈರು ಕಂಡು ಶಾಸಕರು ಗರಂ ಆದ ಶಾಸಕರು ತಹಶೀಲ್ದಾರ್ ನ್ನೊಳಗೊಂಡಂತೆ,ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಗೈರಾಗಿರುವುದು ಮಹಾನೀಯರಿಗೆ,ದಾರ್ಶನಿಕರಿಗೆ,ತೊರುವ ಅಗೌರವದ ಪ್ರತಿಬಿಂಬವಾಗಿದೆ.ಗೈರಾದ ಪ್ರತಿಯೊಬ್ಬ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೋಳಿಸಲು’ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ ಅವರಿಗೆ ಸೂಚಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,’ತಾಲೂಕಿನಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ ಯಾದವ ಸಮಾಜದವರು ಸಹೋದರ ಸಮುದಾಯಗಳ ಸಹಯೋಗದಲ್ಲಿ ಅದ್ದೂರಿಯಾಗಿ ಶ್ರೀ ಕೃಷ್ಣ ಜಯಂತ್ಯೋತ್ಸವ ಆಚರಿಸಬೇಕಿದೆ.ಹೆಚ್ಚು ಜನ ಭಾಗವಹಿಸಬೇಕು.ಕಳೆದ ವರ್ಷ ಯಾದವ ಸಮಾಜದ ಶ್ರೀಗಳ ಸಾನಿಧ್ಯದಲ್ಲಿ ಕೃಷ್ಣ ಜಯಂತಿ ಆಚರಿಸಲಾಗಿತ್ತು.ಪ್ರಸಕ್ತವಾಗಿ ಉತ್ತಮ ಮಳೆಬೆಳೆಯಾಗಿದ್ದು ಈ ಬಾರಿಯೂ ಸಂಭ್ರಮದ ಆಚರಣೆಗೆ ಮುಂದಾಗೋಣ’ ಎಂದು ಕರೆನೀಡಿದರು.
ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,’ದಾರ್ಶನಿಕರ ಜಯಂತಿಗಳು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆಸೀಮಿತವಾಗದೆ ಸಾಂಸ್ಕೃತಿಕ ಕಾರ್ಯಕ್ರಮಗಳಾಗಬೇಕಿದೆ.ಶ್ರೀಕೃಷ್ಣನ ಜೀವನ ಚರಿತ್ರೆ,ಅವತಾರಗಳು, ಯುವಪೀಳಿಗೆಗೆ ತಲುಪಬೇಕಿದೆ.ಇಂದಿನ ಯುವಪೀಳಿಗೆ ಉನ್ನತ ಶಿಕ್ಷಣ,ಅಭ್ಯಾಸದಿಂದ ವಿಮುಖಗೊಂಡು ಮೊಬೈಲ್ ಗೀಳಿನಲ್ಲಿ ತಲ್ಲೀನರಾಗಿ ಅಶ್ಲೀಲ ಚಿತ್ರಗಳು,ಅನಗತ್ಯ ಸಂದೇಶ ವಿನಿಮಯದಲ್ಲಿ ನಿರತರಾಗಿ ಉಜ್ವಲಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ,ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್, ಯಾದವ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಪ್ಪ,ಮುಖಂಡರಾದಜೀವಣ್ಣ,ತಿಪ್ಪೇಸ್ವಾಮಿಗೌಡ,ತೋರಣಗಟ್ಟೆ ಬಾಲರಾಜ್,ರಂಗಸ್ವಾಮಿ,ಕಾಟಪ್ಪ,ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಕಾಟಲಿಂಗಪ್ಪ,ಕುಮಾರ್,ಕುಬೇಂದ್ರಪ್ಪ,ಬಿ.ಲೋಕೇಶ್,ಸೇರಿದಂತೆ ಇದ್ದರು.