ಕ್ರೀಡಾಪಟುಗಳು ಆರೋಗ್ಯಕರ ಸ್ಪರ್ಧೆ ನಡೆಸಲಿ:ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು
ಜಗಳೂರು ಸುದ್ದಿ:’ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಆರೋಗ್ಯಕರ ಸ್ಪರ್ಧೆ ನಡೆಸಬೇಕು’ ಎಂದು ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು
ತಾಲೂಕಿನ ಕಲ್ಲದೇವರಪುರ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರೌಢಶಾಲೆಗಳ ವಲಯಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.ಕ್ರೀಡಾ ಪ್ರತಿಜ್ಞಾವಿಧಿಯನ್ನು ಪರಿಪಾಲಿಸಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು’ಎಂದು ಸಲಹೆ ನೀಡಿದರು.
‘ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದೇ ಮುಖ್ಯ,ತೀರ್ಪುಗಾರರು ತಾರತಮ್ಯವಿಲ್ಲದೆ ಪಾರದರ್ಶಕವಾಗಿ ತೀರ್ಪುನೀಡುವಮೂಲಕ ತಾಲೂಕಿನ ಪ್ರತಿಭೆಯನ್ನು ಗುರುತಿಸಬೇಕು.ರಾಜ್ಯಮಟ್ಟದಲ್ಲಿ ಸಾಧನೆಗೈದು ತಾಲೂಕಿನ ಕೀರ್ತಿಪತಾಕಿ ಹಾರಿಸಿ ಪೋಷಕರಿಗೆ,ಶಿಕ್ಷಕರಿಗೆ ಗೌರವ ಸಲ್ಲಿಸಬೇಕಿದೆ’ಎಂದು ತಿಳಿಸಿದರು.
ವಲಯಮಟ್ಟದಿಂದ ತಾಲೂಕು,ಜಿಲ್ಲಾ,ರಾಜ್ಯಮಟ್ಟಕ್ಕೆ ಆಯ್ಕೆಗೊಳ್ಳುವ ಕ್ರೀಡಾಪಟುಗಳಿಗೆ ವೈಯಕ್ತಿಕವಾಗಿ ಸಮವಸ್ತ್ರ,ಶೂ ವಿತರಿಸುವೆ ಎಂದು ಪ್ರೋತ್ಸಾಹನೀಡಿದರು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಸಂದೀಪ್ ಮಾತನಾಡಿ,’ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಭವ್ಯ ಭಾರತದ ನಿರ್ಮಾತೃಗಳು,ಉನ್ನತ ಶಿಕ್ಷಣ,ಅತ್ಯುನ್ನತ ಮಟ್ಟದ ಕನಸುಗಳೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಶುಭಕೋರಿದರು.
ಇದೇವೇಳೆ ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ತಾಲೂಕಿನಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಶಾಸಕರಿಗೆ ಮನವಿಸಲ್ಲಿಸಲಾಯಿತು.
ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಆಡಳಿತಾಧಿಕಾರಿ ಸಾಗರ್,ಗ್ರಾ.ಪಂ ಅಧ್ಯಕ್ಷೆ ವಸಂತಕುಮಾರಿ ತಿಪ್ಪೇಸ್ವಾಮಿ,ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ವಕೀಲ ಸಂಘದ ತಾಲೂಕು ಘಟಕ ಅಧ್ಯಕ್ಷ ಟಿ. ಬಸವರಾಜ್,ಶಾಸಕ ಡಾ.ಶ್ರೀನಿವಾಸ್ ಸಹೋದರ ತಮ್ಮಣ್ಣ,ತಾ.ಪಂ ಮಾಜಿ ಸದಸ್ಯ ಸಣ್ಣಸೂರಯ್ಯ,ಬಿಇಓ ಹಾಲಮೂರ್ತಿ,ಬಿಆರ್ ಸಿ ಡಿಡಿ ಹಾಲಪ್ಪ,ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸುರೇಶ್ ರೆಡ್ಡಿ,ಮುಖಂಡರಾದ ಬಿ.ಮಹೇಶ್ವರಪ್ಪ,ತಿಪ್ಪೇಸ್ವಾಮಿ,ನಿ.ಶಿಕ್ಷಕ ಕೃಷ್ಣಪ್ಪ,ಬಡಯ್ಯ,ಜಿಂದಾಲ್ ಕಲ್ಲೇಶ್,ಎಂ.ಎಸ್.ಪಾಟೀಲ್,ಮುಖ್ಯಶಿಕ್ಷಕ ರಮೇಶ್ ನಾಯ್ಕ, ಸಿಬ್ಬಂದಿಗಳಾದ ಚಿತ್ತಯ್ಯ,ನಾಗರಾಜ್ ನಾಯ್ಕ,ತಿಪ್ಪೇಸ್ವಾಮಿ,ಚೈತ್ರ,ಚಿನ್ಮಯ್,ಅನಂತ್,ಬಿಂದು,ಆಶಾ,ಗಾಯಿತ್ರಿ,ಇದ್ದರು.