ಹಾಸ್ಟೆಲ್ ಹೊರಗುತ್ತಿಗೆ ಅಡುಗೆ ಮತ್ತು ಅಡುಗೆ ಸಹಾಯಕ ಕಾರ್ಮಿಕರಿಗೆ ಬಾಕಿ ವೇತನ ಗುರುತಿನ ಚೀಟಿ ಸಮವಸ್ತ್ರ ಒದಗಿಸುವಂತೆ ಮನವಿ ಸಲ್ಲಿಸಿ ಒತ್ತಾಯ.
ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ .ಅಲ್ಪಸಂಖ್ಯಾತ .ಪರಿಶಿಷ್ಟ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಹಾಸ್ಟೆಲ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಕೆಲಸಗಾರರರು ಮತ್ತು ಅಡುಗೆ ಸಹಾಯಕರಿಗೆ ಸರಿಯಾದ ರೀತಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಹಾಗೂ ಎ.ಐ.ಯು.ಟಿ.ಯು.ಸಿ .ನೇತೃತ್ವದಲ್ಲಿ ಕಾರ್ಮಿಕರು ಜಗಳೂರು ತಾಪಂ ಇಲಾಖೆಗೆ ಆಗಮಿಸಿ . ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಈ ವೇಳೆ ಎ.ಐ.ಯು.ಟಿ.ಯು.ಸಿ ಜಿಲ್ಲಾಧ್ಯಕ್ಷ ಅಣಬೇರು ತಿಪ್ಪೇಸ್ವಾಮಿ ನೇತೃತ್ವ ವಹಿಸಿಕೊಂಡು ಮಾತನಾಡಿದರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಲ್ಲಿ ಬಿ.ಕೆ ಆರ್ ಸ್ವಾಮಿ ಪ್ರವೇಟ್ ಲಿಮಿಟೆಡ್ ಶಾರ್ಪ್ ವಾಚ್ ಇನ್ವಸ್ಟಿಗೇಷನ್ ಸೆಕ್ಯೂರಿಟಿ ಪ್ರವೇಟ್ ಲಿಮಿಟಡ್ ಮೈಸೂರು ಏಜೆನ್ಸಿಗಳ ಮೂಲಕ ಹಾಸ್ಟೆಲ್ ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆ ಮತ್ತು ಅಡುಗೆ ಸಹಾಯಕರು. ಕಾವಲುಗಾರರು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಬಂಧಿಸಿದ ಏಜೆನ್ಸಿಯವರಾಗಲಿ ಅಥವಾ ಮಾಲಿಕರಾಗಲಿ ಇಲಾಖೆ ಅಧಿಕಾರಿಗಳು ಕೇವಲ ದುಡಿಸಿಕೊಳ್ಳುತ್ತಿದ್ದಾರೆ ಹೊರೆತು ಕಾರ್ಮಿಕರಿಗೆ ಸಿಗಬೇಕಾದ ಶಾಸನಬದ್ದ ಹಕ್ಕುಗಳು ಸಿಗುತ್ತಿಲ್ಲ ನಮಗೆ ಕನಿಷ್ಠ ವೇತನದ ಭದ್ರತೆಯಿಲ್ಲ ಸರಿಯಾದ ರೀತಿಯಾಗಿ ಪ್ರತಿ ತಿಂಗಳು ಸಂಬಳ ನೀಡದೆ ನಮಗೆ ಜೀವನ ನಿರ್ವಹಣೆ ಕಷ್ಠಕರವಾಗಿದೆ.ನಮಗೆ ಸಿಗಬೇಕಾದ ಇ.ಎಸ್ ಐ.ಇ.ಪಿ.ಎಸ್ .ಕಟಾಪಣೆಯ ಮಾಹಿತಿ.ಗುರುತಿನ ಚೀಟಿ ನೀಡದೆ ಕೇವಲವಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು..ತಾವುಗಳು ಸಭೆ ನಡೆಸುವ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕೆಂದರು. ಅದರಲ್ಲೂ ಕಳೆದ ದಿನಗಳಲ್ಲಿ ಜಗಳೂರು ಬಿ ಸಿ ಎಂ ಇಲಾಖೆಯಲ್ಲಿ ಗೋವಿಂದರಾಜ್ ಎಂಬುವ ಅಡುಗೆ ಸಹಾಯಕನನ್ನು ಕಾರಣವಿಲ್ಲದೆ ತೆಗೆದು ಹಾಕಲಾಗಿದೆ . ಕಾರ್ಮಿಕರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಜಿಲ್ಲಾಸಂಘದ ಕಾರ್ಯಧರ್ಶಿ ನಿಂಗರಾಜು ಸಿದ್ದಮ್ಮನಹಳ್ಳಿ. ಅಡುಗೆ ಕಾರ್ಮಿಕಾರಾದ ಎನ್.ಹೇಮಲತಾ.ತಿಪ್ಪಮ್ಮ.ಒಬಮ್ಮ.ವಿಜಯಲಕ್ಷ್ಮಿ. ರೇಖಾ.ನಾಗಮ್ಮ.ಗೌರಮ್ಮ.ಶೋಭಾ.ಶಿವಣ್ಣ.ಶಪಿವುಲ್.ಪ್ರವೀಣ್ ಕುಮಾರ್.ನಾಗರಾಜ್.ಕರಿಬಸಮ್ಮ.ಸುಶಿಲಮ್ಮ.ಟ್ವಿಂಕಲ್.ಸುಮಾ.ನಾಗಮ್ಮ.ಕರಿಬಸಮ್ಮ.ನೂರಜಾನ್ .ಭಾರತಮ್ಮ.ಸರೋಜಮ್ಮ.ನಿರ್ಮಲ ಸೇರಿದಂತೆ ಹಾಜುರಿದ್ದರು.