ಬಿಡ್ಜ್ ಕಂ ಬ್ಯಾರೆಜ್ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಟೀಕಾಕಾರರಿಗೆ ಶಾಶ್ವತ ಕಾಮಗಾರಿ ಉತ್ತರವಾಗಲಿದೆ.
ಸುದ್ದಿ ಜಗಳೂರು
ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ಸಿದ್ದಿಹಳ್ಳಿ ನಡುವೆ ಜಿನಿಗಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುವ ಬಿಡ್ಜ್ ಕಂ ಬ್ಯಾರೆಜ್ ನಡೆಯುವ ಕಾಮಗಾರಿ ಸ್ಥಳಕ್ಕೆ ಶಾಸಕ ಬಿ ದೇವೇಂದ್ರಪ್ಪ ಇತ್ತೀಚಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ನಡೆಸಿದರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೃಹತ್ತಾದ ಹಳ್ಳಕ್ಕೆ ಬಿಡ್ಜ್ ನಿರ್ಮಾಣದಿಂದ ಈ ಬಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಜನಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಅತ್ಯಂತ ಸಹಕಾರಿಯಾಗಲಿದೆ 5 ಕೋಟಿ ರೂಗಳಲ್ಲಿ ಕಾಮಗಾರಿ ಚುರುಕಿನಿಂದ ನಡೆಯುತ್ತಿದ್ದು ಈ ಬಾಗದ ರೈತರು ಬ್ಯಾರೆಜ್ ನ್ನು ಇನ್ನೆರಡು ಅಡಿ ಎತ್ತರಪಡಿಸುವಂತೆ ಬೇಡಿಕೆಯಿದೆ .ಈಗಾಗಲೇ ಇಂಜಿನಿಯರ್ ತಾಂತ್ರಿಕ ಯೋಜನೆಯಂತೆ 9 ಅಡಿ ನಿರ್ಮಾಣಗೊಂಡಿದ್ದು ವಿಶೇಷ ವಿನ್ಯಾಸದಲ್ಲಿ ಕಾಮಗಾರಿ ನಿರ್ಮಿಸುತ್ತಿದ್ದು ಪೂರ್ಣಗೊಳ್ಳುವ ಅಂತಕ್ಕೆ ತಲುಪಿದೆ ರೈತರ ಬೇಡಿಕೆಯಂತೆ ಸಂಬಂಧಿಸಿದ ನುರಿತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು .ಒಟ್ಟಾರೆ ನಾವು ನಿರ್ಮಿಸುವಂತ ಕಾಮಗಾರಿಗಳು ನಮ್ಮನ್ನ ಟೀಕಿಸುವ ಟೀಕಾಕಾರರಿಗೆ ಉತ್ತರವಾಗಲಿವೆ .ಶಾಸಕರು ಕ್ಷೇತ್ರದಲ್ಲಿ ಯಾವುದೇ ಶಾಶ್ವತವಾದ ಕಾಮಗಾರಿ ಮಾಡುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ ಅಂತೆ ಅವರಿಗೆ ಇಂತ ಕಾಮಗಾರಿ ಮಾಡುವ ಮೂಲಕ ಉತ್ತರ ನೀಡುವೆ ವಿನ ನಾನು ಯಾರ ಬಗ್ಗೆ ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ಉತ್ತರಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡ ಪ್ರಕಾಶ್ ರೆಡ್ಡಿ.ಮುಖಂಡ ಸಣ್ಣಸೂರಜ್ಜ.ಕಾಂಗ್ರೆಸ್ ಮುಖಂಡ ಮಹೇಶ್ವರಪ್ಪ.ಮಂಜುನಾಥ .ಹಟ್ಟಿ ತಿಪ್ಪೇಸ್ವಾಮಿ.ಪಲ್ಲಾಗಟೆ ಶೇಖರಪ್ಪ ಗೂಳೇಶ್.ಮಾಳಮ್ಮನಹಳ್ಳಿ ವೆಂಕಟೇಶ್.ಎಂ.ಎಸ್ ಪಾಟೀಲ್.ಕಾಂತರಾಜ್ .ಸೇರಿದಂತೆ ಹಾಜುರಿದ್ದರು.