ಏಷ್ಯಾ ಖಂಡದಲ್ಲೇಯೆ ಕೊಂಡುಕುರಿ ವಾಸಸ್ಥಳ ರಂಗಯ್ಯದುರ್ಗದ ಅಭಯಾರಣ್ಯದಿಂದ ಜಗಳೂರಿನ ಹಿರಿಮೆ ಗರಿಮೆ ಹೆಚ್ಚಾಗಿದೆ ಕಾಡು ಮತ್ತು ವನ್ಯಜೀವಿ ಸಂರಕ್ಷಣೆ ಮನುಷ್ಯನ ಅವಿಭಾಜ್ಯ ಅಂಗ ವಿಶೇಷ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ

ಸುದ್ದಿ ಜಗಳೂರು.
ಜಗಳೂರು ಪಟ್ಟಣದ ಎನ್. ಎಂ. ಕೆ ಶಾಲಾಂಗಳದಲ್ಲಿ ದಾವಣಗೆರೆ ಪ್ರಾದೇಶಿಕ ಅರಣ್ಯ ಹಾಗೂ ಜಗಳೂರು ಪ್ರಾದೇಶಿಕ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ 70 ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ವೇದಿಕೆ ಕಾರ್ಯಕ್ರಮವನ್ನ ಉದ್ಗಾಟಿಸಿ ಅವರು ಮಾತನಾಡಿದರು.ಕಾಡು ಮತ್ತು ಕಾಡಿನ ವನ್ಯಜೀವಿಗಳುನ್ನು ಸಂರಕ್ಷಣೆ ಮಾಡುವುದು ನಮ್ಮಲ್ಲರ ಹೊಣೆಯಾಗಿದೆ ಜಗಳೂರು ಪ್ರದೇಶದಲ್ಲಿ ವಿಶೇಷ ವನ್ಯಜೀವಿ ಕೊಂಡುಕುರಿ ಪ್ರಾಣಿ ಸಂತತಿ ವಾಸಸ್ಥಳದಿಂದ ನಮ್ಮ ಜಗಳೂರಿನ ಹಿರಿಮೆ ಮತ್ತು ಗರಿಮೆ ಹೆಚ್ಚಾಗಿದೆ .ನಾವು ಚಿಕ್ಕವರಿದ್ದಾಗ ಈ‌ ಬಾಗದಲ್ಲಿ ವಿಶೇಷ ಪ್ರಾಣಿ ಕೊಂಡುಕುರಿಯನ್ನ ಅಂದೇ ನೋಡಿದ್ದುಂಟು ಆದರೆ ಈ ಬಾಗದಲ್ಲಿ ವೈಶಿಷ್ಟ್ಯತೆ ಪ್ರಾಣಿ ಸಂಕುಲ ಅವಸಾನ ವಾಸಸ್ಥಳ ರಂಗಯ್ಯನ ದುರ್ಗ ಆಭಯಾರಣ್ಯ ವಿಶಿಷ್ಟ ವನ್ಯಧಾಮ ಎಂದು ಗರುತಿಸಿದ ನಂತರ ಈ ಭಾಗದ ಭೂಪ್ರದೇಶ ಹಿಡಿ ಜಗತ್ತಿಗೆ ಹೆಸರುವಾಸಿಯಾಗಿ ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಸಾಕ್ಷಿಯಾಗಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇಲಾಖೆ ಅಧಿಕಾರಿಗಳು ಜಗಳೂರು ಪಟ್ಟಣದ ಪ್ರವೇಶ ದ್ವಾರದಲ್ಲಿ ನಾಲ್ಕು ದಿಕ್ಕಿನಲ್ಲಿ ಕೊಂಡುಕುರಿ ಭಾವಚಿತ್ರವುಳ್ಳ ನಾಮಫಲಕ ಆಳವಡಿಸುವಂತೆ ತಿಳಿಸಿದರು .

ಶೀಘ್ರದಲ್ಲಿಯೇ ಕೊಂಡುಕುರಿ ಪ್ರತಿಮೆ ನಿರ್ಮಿಸಿ ಅನಾವರಣ ಮಾಡುವ ಚಿಂತನೆಯಿದೆ .ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಗಳ ಜೊತೆಗೆ ಪಠ್ಯತೇರ ವಿಷಗಳುನ್ನು ತಿಳಿದುಕೊಂಡು ತನ್ನ ಜ್ಞಾನ ಸಂಪತ್ತುನ್ನು ಹೆಚ್ಚಿಸಿಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೇ ನೀಡಿದರು. ಈ ಬಾಗದಲ್ಲಿ ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿರವರು ಭೇಟಿ ನೀಡಿ ವಿಶೇಷ ಪ್ರಾಣಿಯ ವಾಸವಿರುವ ಕುರುಹುಗಳನ್ನು ಪತ್ತೆ ಹಚ್ಚಿ ಗುರುತಿಸಿ 20011 ರಲ್ಲಿ ವಿಶೇಷ ವನ್ಯಜೀವಿ ತಾಣವಾಗಲು ಅವರ ಪರಿಶ್ರಮ ಕೊಡುಗೆ ಆಪಾರ ಎಂದು ಶಾಸಕರು ಬಣ್ಣಿಸಿದರು.

ವಿಶೇಷ ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಮಾತನಾಡಿದರು ಪ್ರಾಣಿಗಳು ಸಹ ಮನುಷ್ಯರಂತೆ ಬದುಕುವ ಹಕ್ಕಿದೆ ನಾನು ಈ ಬಾಗದ ರಂಗಯ್ಯದುರ್ಗ ಅರಣ್ಯದಲ್ಲಿ ಸಂಚಾರಿಸಿ ಕೊಂಡುಕುರಿ ಪತ್ತೆಹಚ್ಚಲು ಬಂದಾಗ ಈ ಬಾಗದ ಕುರುಚಲು ಕಾಡು ಕಂಡು ನಮಗೆ ಬಹಳ ಇಷ್ಟವಾಯಿತು. ಇಲ್ಲಿನ ಪ್ರದೇಶದಲ್ಲಿ ವಿಶಿಷ್ಟ ಪ್ರಾಣಿ ವನ್ಯಧಾಮ ಸ್ಥಾಪನೆಯಿಂದ ಇತರೆ ಪ್ರಾಣಿ ಜೀವಸಂಕುಲ ಸಂತತಿ ಹೆಚ್ಚಾಗಲು ಅತ್ಯಂತ ಸಹಕಾರಿಯಾಗಿದೆ.ಏಷ್ಯಾದಲ್ಲಿಯೇ ಅಪರೂಪದ ಕೊಂಡುಕುರಿ ಪ್ರಾಣಿ ಸಂಕುಲವನ್ನ ಉಳಿಸಿ ಬೆಳೆಸಲು ಇಲಾಖೆ ಅಧಿಕಾರಿಗಳೊಂದಿಗೆ ನಾಗರೀಕರ ಸಹಕಾರ ಅತ್ಯಗತ್ಯ ಎಂದರು .ನಾನ ಈ ಹಿಂದೆ ಆಕಸ್ಮಿಕವಾಗಿ ಬೆಂಗಳೂರಿನ ಒಂದು ಪ್ರದೇಶದಲ್ಲಿ ಚಿರತೆ ಶಾಲೆಯೊಂದಕ್ಕೆ ಪ್ರವೇಶಿಸಿದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ನನಗೆ ಕರೆ ಮಾಡಿದಾಗ ನಾನು ಅವರ ಜೊತೆ ಚಿರತೆ ಸೆರೆಹಿಡಿಯಲು ತೆರಳಿ ಪ್ರಯತ್ನಿಸಿದಾಗ ನನಗೆ ಚಿರತೆಯಿಂದ ದಾಳಿಯಾಗಿ ನನ್ನ ಕಾಲುಗಳು ಕಳೆದಕೊಂಡಿರುವೆ ನನಗೆ ಪ್ಲಾಸ್ಟಿಕ್ ಕಾಲುಗಳ ಆಳವಡಿಕೆಯಿಂದ ನಡೆದಾಡುವೆ ನಾನು ಮರುಹುಟ್ಟಿ ಬಂದಿರುವೆ ನಾನು ವನ್ಯಜೀವಿ ಪ್ರಾಣಿಗಳ ಸಂರಕ್ಷಕನಾಗಿರುವುದರಿಂದ. ನನಗೆ ದೇವರು ಮರುಜನ್ಮ ನೀಡಿ ದೆವರು ಕಾಪಾಡಿದ್ದಾನೆ ಎಂದು ವಿಶ್ಲೆಸಿದರು.ವಿಧ್ಯಾರ್ಥಿಗಳು ಸ್ಪೂರ್ತಿದಾಯಕವಾಗಿ ತಮ್ಮ ಗುರಿ ಮತ್ತು ಸಾಧನೆ ಮಾಡಿ. ಸಾವಿನಿಂದ ಗೆದ್ದು ಬಂದಾಗ ಮತ್ತೆ ಗೆಲ್ಲಬಹುದು ಎಂದು ಅನಿಸಿದ ಉದಾಹರಣೆಗೆ ನಾನೇ ಸಾಕ್ಷಿ ಎಂದರು.

ಆರೈಕೆ ಆಸ್ಪತ್ರೆ ಸಂಸ್ಥಾಪಕರಾದ ಡಾ.ರವಿಕುಮಾರ್ ಮಾತನಾಡಿದರು ಅಂದು ನಾವು ನಮ್ಮ ಗೆಳೆಯರೊಂದಿಗೆ ಕೊಂಡು ಕುರಿ ಪತ್ತೆ ಹಚ್ಚಲು ಕಾಡಿಗೆ ಹೊರಟಾಗ ಅನೇಕ ಸವಾಲುಗಳು ಎದುರಿಸಿದ್ದುಂಟು ಕೆಲವರು ನಮ್ಮ ಮೇಲೆ ಆಪಪ್ರಚಾರ ನಡೆಸಿ ನಮ್ಮನ್ನ ಹತ್ತಿಕ್ಕಲು ಷಡ್ಯಂತ್ರ ನಡೆಸಿದ್ದುಂಟು ನಾವು ಸವಾಲಾಗಿ ಸ್ವೀಕರಿಸಿ ಸಂಜಯ್ ಗುಬ್ಬಿರವರನ್ನ ಮೊದಲನೆದಾಗಿ ಭೇಟಿ ನೀಡಿ ನಮ್ಮಲ್ಲಿ ವೀಶೇಷ ಪ್ರಾಣಿ ಇಕ್ಕೆಯಿದೆ ಎಂದು ಅವರಿಗೆ ತಿಳಿಸಿದಾಗ ಆ ಪ್ರಾಣಿಯ ಇಕ್ಕೆಯನ್ನು ಕಳುಹಿಸಿ ಕೋಡಿ ಎಂದು ತಿಳಿಸಿದರು ನಾವು ಕೋರಿಯರ್ ಮೂಲಕ ಪ್ರಾಣಿ ಇಕ್ಕೆಯನ್ನ ರವಾನಿಸಿದಾಗ ಅವರು ಪರೀಕ್ಷೆಗೊಳಪಡಿಸಿ ಈ ಭೂಬಾಗದಲ್ಲಿ ವಿಶೇಷ ಪ್ರಾಣಿ ಸಂಕುಲ ವಾಸವಾಗಿದೆ ಅದೇ ಕೊಂಡುಕುರಿ ಸಂತತಿ ಕುರುಚಲ ಪ್ರದೇಶದಲ್ಲಿ ವಾಸವಾಗಿದೆ ಎಂದು ಗುರುತಿಸಿ ವಿಶೇಷ ವನ್ಯಧಾಮವಾಗಿ ಇದೀಗ ನಮಗೆ ಅಭೂತಪೂರ್ವ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಸಂತೋವುಂಟು ಮಾಡಿದೆ ಎಂದು ಸ್ಮರಿಸಿದರು..

ಸಾಮಾಜಿಕ ಅರಣ್ಯ ವಿಭಾಗದ ಉಪಾ ಅರಣ್ಯ ಸಂರಕ್ಷಣ ಅಧಿಕಾರಿ ಗೋಪ್ಯಾನಾಯ್ಕ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು. ಮನುಷ್ಯನ ಸ್ವಾರ್ಥದಿಂದ ಕಾಡು ಕ್ಷೀಣಿಸುತ್ತಿದೆ ಕಾಡು ಮತ್ತು ವನ್ಯಜೀವಿಗಳ ವಾಸ ಸ್ಥಳಕ್ಕೆ ಮನುಷ್ಯರ ಪ್ರವೇಶದಿಂದ ಕಾಡಿನ ಸಂಪತ್ತು ವನ್ಯಜೀವಿಗಳ ಸಂತತಿಗೆ ಹಿನ್ನಡೆಯಾಗುತ್ತಿದೆ.1970 ರಲ್ಲಿ ಜಾರಿಗೆ ತಂದ ಅರಣ್ಯ ಕಾಯ್ದೆಯಂತೆ ನಿಷೇಧಿಸಲ್ಪಟ್ಟ ಸೂಕ್ಷ್ಮ ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವಂತಿಲ್ಲ ಕಾಡಿನ ಯಾವುದೆ ಮರ ಕಡಿಯುವುದು ಪ್ರಾಣಿಗಳನ್ನು ಬೇಟೆಯಾಡುವುದು ಆಪಾರಧವಾಗಿದೆ .ನಮ್ಮ ಇಲಾಖೆ ಅರಣ್ಯ ನೀತಿ ನೀಯಮಗಳುನ್ನು ಸಾರ್ವಜನಿಕರು ಪಾಲನೆ ಮಾಡಿ ಕಾಡು ಸಂತತಿ ಜೀವಸಂಕುಲಗಳ ಉಳಿವಿಗೆ ಕೈಜೋಡಿಸುವಂತೆ ಸಲಹೇ ನೀಡಿದರು .ಸಂವಿಧಾನದಲ್ಲಿ ಪ್ರತಿ ಜೀವಸಂಕುಲಗಳಿಗೆ ಬದುಕುವ ಹಕ್ಕಿದೆ ಕಾಡಂಚಿನ ಗ್ರಾಮದ ಅರಣ್ಯ ಸಮಿತಿಗಳ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಸರ್ಕಾರ ಆರ್ಹ ಫಲಾನುಭವಿಗಳಿಗೆ ಒದಗಿಸುತಾ ಬಂದಿದ್ದೆವೆ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಪ್ರಾದೇಶಿಕ ಅರಣ್ಯ ವಿಭಾಗದ ಉಪಾ ಅರಣ್ಯ ಸಂರಕ್ಷಾಣ ಅಧಿಕಾರಿ ಜಿ ಅರ್ ಶಶಿಧರ ಮಾತನಾಡಿದರು ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದು ಅನೇಕ ಗೆಳೆಯರನ್ನು ಹೊಂದಿರುವೆ ನಾನು ದಾವಣಗೆರೆ ವಿಭಾಗಕ್ಕೆ ವರ್ಗಾವಣೆಗೊಂಡು ಬಂದಾಗ ಇಂತ ಅಭೂತಪೂರ್ವ ಕಾರ್ಯಕ್ರಮ ಮಾಡಲು ಒತ್ತಾಸೆಯಂತೆ ಜಗಳೂರು ಪಟ್ಟಣದ ಮಾರಿಕಾಂಬ ದೇವಾಸ್ಥಾನದಿಂದ ಇಂದು ಎನ್ ಎಂ.ಕೆ ಶಾಲೆಯವರೆಗೂ ಕೊಂಡುಕುರಿ ಸ್ಥಬ್ದಚಿತ್ರದೊಂದಿಗೆ ಮೆರವಣಿಗೆ ಮೂಲಕ ಕಾಡು ಮತ್ತು ನಾಡು ಈ ಬಾಗದ ವಿಶಿಷ್ಟ ಪ್ರಾಣಿ ಸಂಕುಲದ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಶಾಸಕರ ಸ್ಥಳಿಯರ ಸಹಕಾರದಿಂದ ಯಶಸ್ವಿ ಕಾರ್ಯಕ್ರಮಕ್ಜೆ ಸಾಕ್ಷೆಯಾಗಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಕೊಂಡುಕುರಿ ಪತ್ತೆಗೆ ಶ್ರಮಿಸಿದಂತ ಸಂಜಯ್ ಗುಬ್ಬಿ ಹಾಗೂ ಡಾ.ರವಿಕುಮಾರ್ ರವರಿಗೆ ಮತ್ತು ಪತ್ರಕರ್ತ ಡಿ ಶ್ರೀನಿವಾಸರವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆಪಾರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್.ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ. ಪಪಂ ಅಧ್ಯಕ್ಷ ನವೀನ್ ಕುಮಾರ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಗ್ಯಲಕ್ಷ್ಮಿ.ತಹಶೀಲ್ದಾರ ಸೈಯದ್ ಕಲೀಂ ಉಲಾ. ಎನ್ .ಎಂ.ಕೆ ಶಾಲಾ ಸಂಸ್ಥಾಕ ಅಧ್ಯಕ್ಷ ಹಾಲಸ್ವಾನಿ.ಕಾರ್ಯಧರ್ಶಿ ಎನ್ ಎಂ.ಲೋಕೇಶ್.ಪತ್ರಕರ್ತ ಡಿ ಶ್ರೀನಿವಾಸ.ವಕೀಲರ ಸಂಘದ ಅಧ್ಯಕ್ಷ ಮರೆನಹಳ್ಳಿ ಬಸವರಾಜ್.ಕುಡಿಯುವ ನೀರು ನೈರ್ಮಲ್ಯ ಎಇಇ ಸಾಧಿಕ್ ಉಲ್.ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್. ಪಪಂ ನಾಮನಿರ್ದೇಶನ ಸದಸ್ಯರಾದ ಕುರಿಜಯ್ಯಣ್ಣ.ಸಣ್ಣತಾನಾಜಿ ಗೊಸಾಯಿ.ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ .ಕೊಂಡುಕುರಿ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ.ದಿನೇಶ್.ಚಂದ್ರಶೇಖರ ಸೇರಿದಂತೆ ‌ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!