filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಅ.18‌ರಿಂದ 25 ರವರೆಗೆ ವಿವಿಧ ಸ್ಪರ್ಧೆ,ಕಾರ್ಯಕ್ರಮಗಳ ಆಯೋಜನೆ

ಜಗಳೂರು ಸುದ್ದಿ:ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ವಿವಿಧ ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಗಳು,ಕಾರ್ಯಕ್ರಮಗಳು ಜರುಗಲಿದ್ದು ಸಾರ್ವಜನಿಕರು ಭಾಗವಹಿಸುವಂತೆ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಸಮಿತಿ ಜಿಲ್ಲಾಕಾರ್ಯದರ್ಶಿ ರಾಜನಹಟ್ಟಿ ರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

‘ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಅ.18ರಂದು ರಾಜನಹಳ್ಳಿ ಪುಣ್ಯಾನಂದ ಪುರಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ವಾಲ್ಮೀಕಿ ಮಹಿಳಾ ಸಮಾವೇಶ,ಅ.19 ರಂದು ಗುಂಡಿ ಮಹಾದೇವಪ್ಪ ಮಂಟಪದಲ್ಲಿ ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ,ಅ.20ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಗ್ಗಜಗ್ಗಾಟ,ವಾಲಿಬಾಲ್,ಇತರೆ ಕ್ರೀಡೆಗಳು,ಅ.22ರಂದು ರೈತಭವನದಲ್ಲಿ ಭಜನಾ,ಸೋಬಾನೆ ಸ್ಪರ್ಧೆ,ಅ.23 ರಂದು ಜಯದೇವ ಸರ್ಕಲ್ ನಲ್ಲಿ ರಾಜ್ಯಮಟ್ಟದ ಕೋಲಾಟ ಸ್ಪರ್ಧೆ,ಅ.24ರಂದು ರೋಟರಿ ಕ್ಲಬ್ ನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ,ಅ.25 ರಂದು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು’ ಎಂದು ಮನವಿಮಾಡಿದರು.

ಸಂದರ್ಭದಲ್ಲಿ ಮುಖಂಡರಾದ ಸಹದೇವರೆಡ್ಡಿ,ರಂಗಪ್ಪ,ನಾಗರಾಜ್,ಬಸಣ್ಣ,ರಮೇಶ್,ವೀರೇಶ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!