ಜಗಳೂರು ನಾಡು ಬರದನಾಡು ಆಲ್ಲ ಶಾಶ್ವತವಾಗಿ ಬಂಗಾರದ ನಾಡು ಆಗಲಿದೆ ಎಂದು ಸಿರಿಗೆರೆ ಶ್ರೀಗಳು ಬಣ್ಣಿಸಿದರು.
ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online ದಿ.13_10_20024
ಅಂದಿನ ರಾಜ ಜಗಳೂರು ಪಟ್ಟಣದ ಕೆರೆ ಕಟ್ಟಿಸಿದ ಮತ್ತಿ ತಿಮ್ಮಣ್ಣ ನಾಯಕನ ಕಾರ್ಯ ಶ್ಲಾಘನೀಯವಾಗಿದೆ ಅವರು ಅಂದು ಕೆರೆ ನಿರ್ಮಾಣ ಮಾಡದೆ ಹೋಗಿದ್ದರೆ ಈ ಕೆರೆ ತುಂಬಲು ಸಾದ್ಯವಿರಲಿಲ್ಲ ಅಂದು ಸಾರ್ಥಕತೆ ಮೆರೆದ ನಾಯಕರುಗಳು ಅವಿಸ್ಮರಣೀಯವಾಗಿದ್ದಾರೆ .
ಕೆರೆ ವೀಕ್ಷಣೆ ಹಾಗೂ ಜಗಳೂರು ಪಟ್ಟಣದ ಐತಿಹಾಸಿಕ ಕೆರೆಗೆ ಬಾಗಿನ ಅರ್ಪಣೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಿರಿಗೆರೆ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು ಕೆರೆ ನೀರು ತುಂಬಿಸಲು ಸಹಕಾರಿಯಾದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತರಳಬಾಳು ಕಾರ್ಯಕ್ರಮದಲ್ಲಿ ನಾವು ಸಂಕಲ್ಪ ಮಾಡಿದಂತೆ ನೀರಾವರಿ ಯೋಜನೆಗೆ ಭದ್ರಾಬುನಾದಿ ಹಾಕಿದರು ನಂತರ ಬಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ. ಕುಮಾರಸ್ವಾಮಿ.ಅಂದಿನ ನೀರಾವರಿ ಸಚಿವರುಗಳು ಕ್ಷೇತ್ರದ ಹಾಲಿ ಶಾಸಕ ಬಿ.ದೇವೇಂದ್ರಪ್ಪ. ಮಾಜಿ ಶಾಸಕ ಹೆಚ್ ಪಿ ರಾಜೇಶ್.ಎಸ್ ವಿ ರಾಮಚಂದ್ರಪ್ಪರವರ ಸತತ ಪ್ರಯತ್ನದ ಫಲವಿದೆ . ಧರ್ಮ ಮತ್ತು ಕಾನೂನು ಕೈಜೋಡಿಸಿದರೆ ಇಂತ ಕಾರ್ಯಗಳು ಯಶಸ್ವಿಯಾಗುವುವು ಎನ್ನುವುದಕ್ಕೆ ದಸರಮಹೋತ್ಸವದ ಹಂಬು ಹೊಡೆಯುವುದು ಹೇಗೆ ಅದೆ ರೀತಿ ತುಂಗಾಭದ್ರಾ ನದಿಯಿಂದ ಗ್ರಾವೇಟೇಷನ್ ಮೂಲಕ 9 ಪಂಪ್ ಗಳ ಮೂಲಕ ದೀಟೂರು ಜಾಕವಾಲ್ ನಿಂದ ಚಟ್ನಹಳ್ಳಿ ಗುಡ್ಡದ ಮೂಲಕ ಜಗಳೂರು ಕ್ಷೇತ್ರದ ಕೆರೆಗಳಿಗೆ ನೀರು ಹೊಡೆಯುವ ಸುಸಂದರ್ಭ ದಸರಮಹೋತ್ಸವದ ಹಬ್ಬದ ದಿನ ಅವಿಸ್ಮರಣೀಯ ದಿನವಾಗಿದೆ .ಈ ಯೋಜನೆಯಲ್ಲಿ ಇನ್ನು ಕೂಡ ತಾಂತ್ರಿಕ ತೊಡುಕುಗಳು ಸಹ ಇವೆ 8 ಪಂಪ್ ಗಳು ಕಾರ್ಯನಿರ್ವಹಿಸುವ ಬದಲು ಕೇವಲ . ನಾಲ್ಕು ಪಂಪ್ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನು ಮುಂದಿನ ಕೆರೆಗಳಿಗೆ ನೀರು ಹರಿಸಲು ಉಳಿದ ಕೆರೆಗಳಿಗೆ ಪೈಪ್ ಮೂಲಕ ಸಂಪರ್ಕ ತಲುಪಲು ಕಾಮಗಾರಿ ಪೂರ್ಣಗೊಂಡಿಲ್ಲ 8 ಪಂಪ್ ಸೆಟ್ ಗಳು ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು.ಸರ್ಕಾರದ ಶಾಸಕರಿಗೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಲಹೇ ನೀಡಿದರು.
.57 ಕೆರೆ ತುಂಬಿಸುವ ಯೋಜನೆಡಿ ಜಗಳೂರಿನ 7 ಕೆರೆಗಳು ತುಂಬಿ ಕೋಡಿ ಬಿದ್ದಿರುವುದು ಈ ಬಾಗದ ರೈತರ ಜನಸಾಮಾನ್ಯರಲ್ಲಿ ಕುಷಿ ತಂದಿದೆ . ಜಗಳೂರು ನಾಡು ಬರದನಾಡು ಆಲ್ಲ ಬಂಗಾರದ ನಾಡು ಆಗಲಿದೆ ಎಂದು ಸಿರಿಗೆರೆ ಶ್ರೀಗಳು ಬಣ್ಣಿಸಿದರು
ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಅಂದು ಶ್ರೀಕೃಷ್ಣ ಗೋವುಗಳ ಹಾಲನ್ನು ಕರೆದು ಶ್ರೇಷ್ಠ ಪಂಡಿತರಿಗೆ ನೀಡಿದಂತೆ ಇದೀಗ ಸಿರಿಗೆರೆ ಶ್ರೀಗಳು ನಮಗೆಲ್ಲ ಇಂದು ಅವರ ಪರಿಶ್ರಮದಿಂದ ಜಲ ಅಮೃತ ನೀಡಿದ್ದಾರೆ ಎಂದು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಬಣ್ಣಿಸಿದರು.. ಕೇವಲ ಜಲವಲ್ಲ ಜೀವಜಲ ಪಾವನ ಗಂಗೆ ಈ ಯೋಜನೆ ಕಾರ್ಯಗತವಾಗಿ ನೀರು ಬರಲು ಶ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೂ ಮಾಜಿ ಸಿ.ಎಂ ಯಡಿಯೂರಪ್ಪ. ಕುಮಾರಸ್ವಾಮಿ. ಮಾಜಿ ಸಚಿವ ಎಚ್ ಆಂಜನೇಯ .ಮತ್ತು ಮಾಜಿ ಶಾಸಕರುಗಳಾದ ಎಸ್ ವಿ.ರಾಮಚಂದ್ರಪ್ಪ ಮತ್ತು ಹೆಚ್ ಪಿ ರಾಜೇಶ್ ರವರಿಗೂ ಎಲ್ಲಾ ಅಧಿಕಾರಿಗಳಿಗೂ ಈ ಬಾಗದ ಜನತೆ ಪರವಾಗಿ ಕೃತಜ್ಞತೆಪೂರ್ವಕವಾಗಿ ಬರುವ ಮುಂದಿನ ದಿನಗಳಲ್ಲಿ ಜಗಳೂರು ಉತ್ಸವ ಜಾತ್ರೆ ಮಾಡುವ ಚಿಂತನೆಯಿದೆ ಎಲ್ಲಾರ ಸಹಕಾರ ಬಹುಮುಖ್ಯ ಎಂದರು.ಜಗಳೂರು ಮಹತ್ವದ ಯೋಜನೆ ಅಪ್ಪರ್ ಭದ್ರಾ ನೀರಾವರಿ ಯೋಜನೆಗೆ ಅನುದಾನ ಕಲ್ಪಿಸಿ ಕಾಮಗಾರಿ ಚುರುಕುಗೋಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಸಂಸದೆ ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರ ಪ್ರತಿಫಲವಾಗಿ ಕಾಮಗಾರಿ ಚುರುಕುಗೊಂಡಿದೆ.ಇಂತ ಬೃಹತ್ ಕೆರೆಯನ್ನು ನಾವೆಲ್ಲರೂ ಸಂರಕ್ಷಿಸೊಣ ಎಂದರು.
ಮಾಜಿ ಶಾಸಕ ಹೆಚ್ ಪಿ ರಾಜೇಶ್ . ಪ್ರಾಸ್ತಾವಿಕವಾಗಿ ಮಾತನಾಡಿದರು ಜಗಳೂರು ಪಟ್ಟಣ ಸೇರಿದಂತೆ ಕ್ಷೇತ್ರಾದ್ಯಂತ ಸಂಭ್ರಮ ಮನೆ ಮಾಡಿದೆ
ಅಂದು ಕೆರೆ ತುಂಬಿಸುವ ಯೋಜನೆಗೆ ಭದ್ರಬುನಾದಿ ಹಾಕಿದ ಕೀರ್ತಿ ಮುಖ್ಯಮಂತ್ರಿ. ಸಿದ್ದರಾಮಯ್ಯ ರವರು 20018 ರಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ವಾಗ್ದಾನ ಮಾಡಿದಂತೆ 250 ಕೋಟಿ ಅನುದಾನ ಕಲ್ಪಿಸಿದ್ದರು ಆದರೆ ಅನುದಾನ ಸಾಕಾಗುವುದಿಲ್ಲ ಎಂದು ಶ್ರೀಗಳ ಆದೇಶದ ಮೇರೆಗೆ ಅಂದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಕುಮಾರಸ್ವಾಮಿಯವರು 650 ಕೋಟಿ ರೂಗಳಿಗೆ ಹೆಚ್ಚಿಸಿ 20019 ರಲ್ಲಿ ಅನುದಾನ ನೀಡಿದ ಪ್ರತಿಫಲವಾಗಿ ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಒಟ್ಟಾರೆ ಎಲ್ಲಾ ನೀರಾವರಿ ಮಂತ್ರಿಗಳ ಪರಿಶ್ರಮದಿಂದ 57 ಕೆರೆ ತುಂಬಿಸಲು ಅತ್ಯಂತ ಸಹಕಾರಿಯಾಗಿದೆ. ಜಗಳೂರು ಕ್ಷೇತ್ರಕ್ಕೆ ಬಹುಮುಖ್ಯವಾಗಿ ಮೂರು ಯೋಜನೆಗಳು ಪ್ರಯೋಜನಕಾರಿಯಾಗಿವೆ. 150 ಹಳ್ಳಿಗಳಿಗೆ 450 ಕೋಟಿ ರೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ .ಅಪ್ಪರ್ ಭದ್ರಾ ನೀರಾವರಿ ಯೋಜನೆ ಕೆರೆ ತುಂಬಿಸುವ ಯೋಜನೆಯಿಂದ ಜಗಳೂರು ಬರದನಾಡು ಅಳಿಸಿ ಹಸಿರು ನಾಡು ಆಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ ಮಾತನಾಡಿ ಅಪ್ಪರ ಭದ್ರಾ ಯೋಜನೆ ನಮ್ಮ ಯಡಿಯೂರಪ್ಪ ರವರ ಪರಿಶ್ರಮವಿದೆ .ನಾವು ಕಂಡ ಕನಸು ನೆನಸು ಆಗಿದೆ ಶ್ರೀಗಳು ಗುಡುಗಿದರೆ ವಿಧಾನಸೌದ ನಡುಗುವುದು ತರಳಬಾಳು ಕಾರ್ಯಕ್ರಮ ನಕಡೆದ ಅವಿಸ್ಮರಣೀಯ ದಿನದಿಂದ ಜಗಳೂರು ಕೆರೆ ತುಂಬಲು ಸಹಕಾರಿಯಾಗಿದೆ .ನನಗೆ ಶ್ರೀಗಳು ಒಂದು ಆದೇಶ ಮಾಡಿದ್ದರು ರಾಜಿನಾಮಿ ಕೊಟ್ಟು ಬಾ ಇಲ್ಲ ಅನುದಾನ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಬಾ ಎಂದು ಮಾರ್ಮಿಕವಾಗಿ ಹೇಳಿದುಂಟು ನಾನು ಸವಾಲಾಗಿ ಸ್ವೀಕರಿಸಿ ಶ್ರೀಗಳು ತಿಳಿಸಿದ ಅಸಮಾಧಾನ ವಿಷಯವನ್ನ ಸರ್ಕಾರದ ಮಂತ್ರಿಗಳಿಗೆ ಮನವಿ ಮಾಡಿಕೊಂಡಂತೆ ಶ್ರೀಗಳ ಅಶಿರ್ವಾದದಿಂದ ಅನುದಾನ 650 ಕೋಟಿ ರೂಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಯಿತು ಎಂದು ಸ್ಮರಿಸಿದರು.
ನೀರಾವರಿ ನಿಗಮದ ನಿವೃತ್ತ ಎಂ.ಡಿ ಮಲ್ಲಿಕಾರ್ಜುನ ಬಿ.ಗುಂಗೆ ಮಾತನಾಡಿದರು ಕೆರೆ ನೀರಾವರಿ ಯೋಜನೆಡಿಯಲ್ಲಿ ಕೆರೆ ತುಂಬಲು ಎಲ್ಲಾ ಸರ್ಕಾರಗಳ ಸಹಕಾರದಿಂದ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ .ಕೆರೆ ತುಂಬಿದರೆ ಒಂದು ಪ್ರದೇಶ ಅಭಿವೃದ್ಧಿಗೆ ಸಹಕಾರಿಯಾಗಲಿದೆ . ಕೆರೆ ಹೊಳು ತೆಗಿಸಿದರೆ ಮತ್ತಷ್ಟು ಕೆರೆ ನೀರು ಹಿಡಿಯಲಿದೆ ಆದ್ದರಿಂದ ಕೆರೆ ಹೂಳು ತೆಗಿಸಲು ಎಲ್ಲಾರ ಸಹಕಾರ ಬಹುಮುಖ್ಯ ಕೆರೆಯನ್ನ ನಾವು ರಕ್ಷಿಸಿದರೆ ಅದು ನಮ್ಮನ್ನ ರಕ್ಷಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿ ಸಂಘದ ಅದ್ಯಕ್ಷ ಶಿವನಗೌಡ್ರು.ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ. ಮಾಜಿ ಜಿಪಂ ಸದಸ್ಯ ಜಿ ಎಸ್ ಮಂಜಣ್ಣ.ಮುಖಂಡರಾದ ಪಿ ಎಸ್ ಸುರೇಶಗೌಡ್ರು. ಆರೈಕೆ ಆಸ್ಪತ್ರೆ ಡಾ.ರವಿಕುಮಾರ್. ಕಾಂಗ್ರೆಸ್ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯಧರ್ಶಿ ಕೀರ್ತಿಕುಮಾರ್ .ತಹಶೀಲ್ದಾರ ಸೈಯದ್ ಕಲೀಂ ಉಲಾ.ಮುಖಂಡರಾದ ಎನ್ ಎಸ್ ರಾಜಣ್ಣ..ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್..ಪಪಂ ಅಧ್ಯಕ್ಷರಾದ ನವೀನ್ ಕುಮಾರ್.ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷೆ ವೀಣಾ. ನೀರಾವರಿ ಇಲಾಖೆ ಅಧಿಕಾರಿಗಳು .ವಕೀಲ .ಡಿ ವಿ ನಾಗಪ್ಪ. ಸೇರಿದಂತೆ ವಿವಿಧ ಗಣ್ಯಮಾನ್ಯರು ಪಾಲ್ಗೊಂಡಿದ್ದರು.