ಸುದ್ದಿ ಜಗಳೂರು

ಮೈಸೂರು ದಸರ ಮಹೋತ್ಸವಕ್ಕೂ ಜಗಳೂರಿನ ದಸರ ಮಹೋತ್ಸವಕ್ಕೂ ಅವಿನಭಾವ ಸಂಬಂಧವಿದೆ. ಅರಸರ ಆಡಳಿತಾವಧಿಯಲ್ಲಿ ಆಡಳಿತ ಮಂತ್ರಿಯಾಗಿದ್ದ ಇಮಾಂ ಸಾಹೇಬರವರಿಂದ ಜಗಳೂರಿನಲ್ಲಿ ರಾಮ ದೇವರ ಬನ್ನಿಮುಡಿಯುವ ಕಾರ್ಯಕ್ರಮ ಮತ್ತು ಹಂಬು ಮುಡಿಯುವ ಪೂಜಾ ಕಾರ್ಯಕ್ಕೆ ಚಾಲನೆ ನೀಡಿರುವುದು ಅವಿಸ್ಮರಣೀಯವಾಗಿದೆ ‌. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾಗುತಾ ಬಂದಿರುವುದು ಸಂತೋಷದ ಸಂಗತಿ ಎಂದು ಶಾಸಕ ಬಿ.ದೇವೇಂದ್ರಪ್ಪ ಬನ್ನಿ ಮುಡಿಯುವ ಕಾರ್ಯದಲ್ಲಿ ಪಾಲ್ಗೊಂಡು ಉದ್ದೇಶಿಸಿ ಮಾತನಾಡಿದರು.

ಜಗಳೂರು ಪಟ್ಟಣದ ಹೊರವಲಯದ ಶಾಂತವೀರ ಸನ್ನಿಧಾನ ಪಕ್ಕದಲ್ಲಿ ದಸರಮೋಹತ್ಸವದ ಅಂಗವಾಗಿ ಬನ್ನಿ ಮರಕ್ಕೆ ಬನ್ನಿ ಮುಡಿಯವ ಪೂಜಾ ಕಾರ್ಯ ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಸೈಯದ್ ಖಲಿಂ ಉಲಾರವರಿಂದ ಬಾಳೆದಿಂಡಿಗೆ ಮಹಾರಾಜ ಪ್ರತಿರೂಪವಾಗಿ ಹಂಬು ಚೇಧಿಸಿದರು ಪ್ರತಿ ವರ್ಷದಂತೆ ಈ ಬಾರಿಯು ಕೂಡ ದಸರ ಮಹೋತ್ಸ ಅದ್ದೂರಿಯಾಗಿ ಜರುಗಿತು.ಅನೇಕ ಭಕ್ತರು ದೇವರ ಭಕ್ತಿಗೆ ಪಾತ್ರರಾದರು ಅನೇಕ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಒಬ್ಬರಿಗೊಬ್ಬರು ಆತ್ಮೀಯವಾಗಿ ಆಲಂಗಿಸಿಕೊಂಡು ಬನ್ನಿ ಮುಡಿ ನೀಡಿ ಭಕ್ತಿ ಭಾವ ಮೆರೆಯಲಾಯಿತು

.ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಭಾಗವಹಿಸಿ ಮಾತನಾಡಿದರು. ಜಗಳೂರಿನ ವಿಜಯ ದಶಮಿ ಸಂಭ್ರಮ ಪ್ರತಿ ವರ್ಷದಂತೆ ರಾಮದೇವರ ಸನ್ನಿಧಾನದಲ್ಲಿ ನಿರಂತರವಾಗಿ ಸಾಗುತಾ ಬಂದಿದೆ ಅಂದಿನ ಮೈಸೂರು ಅರಸರ ಕಾಲದಲ್ಲಿ ಜಗಳೂರು ಇಮಾಂ ಸಾಹೇಬರು ಆಡಳಿತ ಮಂತ್ರಿಯಾದ ಸವಿನೆನಪಿನ ಅಂಗವಾಗಿ ಜಗಳೂರು ಕ್ಷೇತ್ರದ ಪಟ್ಟಣದಲ್ಲಿ ಅಂದಿನ ಹಿರಿಯರು ನಿರಂತರವಾಗಿ ದಸರ ಮಹೋತ್ಸವ ಮತ್ತು ಬನ್ನಿಮರಕ್ಕೆ ಬನ್ನಿ ಮುಡಿದು ತಾಲ್ಲೂಕು ತಹಶೀಲ್ದಾರವರಿಂದ ಬಾಳೆ ದಿಂಡಗೆ ಛೇದಿಸಿ ಶಿಷ್ಟರನ್ನ ರಕ್ಷಿಸಿ ದುಷ್ಟರನ್ನ ಶಿಕ್ಷಿಸುವ ಸಂಖೇತವಾಗಿ ಜಗಳೂರಿನ ಜನತೆ ಸಾಂಕೇತಿಕವಾಗಿ ಆಚರಿಸಿಕೊಂಡು ಬಂದಿರುವ ವಿಶಿಷ್ಟ ಹಬ್ಬವೆ ವಿಜಯ ದಶಮಿ ಎಂದರು.ಶಾಸಕ ಬಿ ದೇವೇಂದ್ರಪ್ಪ ಪೂಜಾ ಕಾರ್ಯದಲ್ಲಿ ಭಕ್ತರಿಗೆ ಶುಭಾ ಹಾರೈಸಿದರು.ಈ ಬಾರಿ ಸಮೃದ್ದ ಮಳೆ ಬೆಳೆ .57 ಕೆರೆ ತುಂಬಿಸುವ ಯೋಜನೆಯಿಂದ ಕ್ಷೇತ್ರದ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ. ಇಂತ ಸಂಭ್ರಮದ ಹೊಸ್ತಿಲಲ್ಲಿ ನಾವೇಲ್ಲರು ದಸರ ಹಬ್ಬ ಆಚರಿಸುತ್ತಿದ್ದೆವೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಧ ಕೃಷ್ಣ ಜೋಯಿಸರು. ಭಕ್ತಾಧಿಗಳಾದ ವಿಠಲ್ ಶೇಟ್ಟಿ. ಜಿಲ್ಲಾ ಸಹಕಾರ ಬ್ಯಾಂಕ್ ಅದ್ಯಕ್ಷರು ವೇಣುಗೋಪಾಲ್ ರೆಡ್ಡಿ.ಪಪಂ ಸದಸ್ಯ ರಮೇಶ್ ರೆಡ್ಡಿ.ಅರ್ ಐ ಧನುಂಜಯ್.ಪೊಲೀಸ್ ಇಲಾಖೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ನಟರಾಜ್. ಸೇರಿದಂತೆ ಅನೇಕ ಭಕ್ತಾಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!