ದಿನಾಂಕ ಅ 21 ರಂದು ಒಳಮೀಸಲಾತಿ ಜಾರಿ ಮಾಡುವಂತೆ ಬೃಹತ್ ತಮಟೆ ಚಳುವಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು ಎಂದು ಹೊಲೆಯ ಮತ್ತು ಮಾದಿಗ ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.
ಪಟ್ಟಣದ ಆದಿಜಾಂಬವ ಮಾದಿಗ ಸಮುದಾಯದ ವಸತಿ ನಿಲಯದಲ್ಲಿ ಕರೆಯಲಾಗಿದ್ದ ಹೊಲೆಯ ಮತ್ತು ಮಾದಿಗ ಸಮುದಾಯದ ಜಂಟಿ ಸಭೆಯಲ್ಲಿ ನಿರ್ಣಯಿಸಲಾದ ತಿರ್ಮಾನದಂತೆ ದಿನಾಂಕ 21_10_20024 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮುದಾಯದ ಮುಖಂಡ ಜಿ ಎಚ್ ಶಂಭುಲಿಂಗಪ್ಪ ಮನವಿ ಮಾಡಿಕೊಂಡಿದ್ದಾರೆ. ನಾಳೆ ಬೆಳಿಗ್ಗೆ ಜಗಳೂರು ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮಟೆ ಮತ್ತು ಹುರುಮೆ ಚಳುವಳಿ ಯಶಸ್ವಿಗೋಳಿಸುವಂತೆ ಕರೆ ನೀಡಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟ್ ಆದೇಶವನ್ನು ಹರಿಯಾಣದ ಸರ್ಕಾರ ಯಥಾವತ್ತಾಗಿ ಜಾರಿ ಮಾಡಿದೆ ಅದರ ಮಾದರಿಯಲ್ಲಿ ರಾಜ್ಯ ಸರ್ಕಾರ ಶೀಘ್ರವೆ ಜಾರಿ ಮಾಡುವಂತೆ ಸೋಮವಾರ ಬೆಳ್ಳಿಗ್ಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಮನವಿ ಸಲ್ಲಿಸಲಾಗುವುದು.
ಹೋರಾಟಕ್ಕೆ ಹೊಲೆಯ ಮತ್ತು ಮಾದಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹೊಲೆಯ ಸಮುದಾಯದ ವೀರಸ್ವಾಮಿ ಮಾತನಾಡಿ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರ ಮಿನಾಮೇಷ ಎಣಿಸುತ್ತಿದ್ದು ಸರ್ಕಾರಕ್ಕೆ ತಮಟೆ ಚಳುವಳಿ ಮೂಲಕ ಎಚ್ಚರಿಸಿ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಲಾಗುವುದು ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯರಾದ ಸಿ ಲಕ್ಷ್ಮಣ. ಸಮಾಜದ ಮುಖಂಡರಾದ ಗ್ಯಾಸ್ ಒಬಣ್ಣ. ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ. ಹನುಮಂತಾಪುರ ಸತೀಶ. ಹನುಮಂತಪ್ಪ ಮೆದಗಿನಕೆರೆ .ಮುನಿಯಪ್ಪ ನಿಬಗೂರು.ಚಂದ್ರಪ್ಪ ತುಪ್ಪದಹಳ್ಳಿ.ಸಿದ್ದೇಶ್.ನಿವೃತ್ತ ಶಿಕ್ಷಕರ ಶಿವಣ್ಣ.ಮುಖಂಡರಾದ ನಾಗಲಿಂಗಪ್ಪ.ಧನ್ಯಕುಮಾರ್.ಮಲೆ ಮಾಚಿಕೆರೆ ಸತೀಶ್ .ದಸಂಸ ಸಂಚಾಲಕ ಕುಬೇರಪ್ಪ ಸೇರಿದಂತೆ ಮುಂತಾದವರು ಸಮಾಜದ ಮುಖಂಡರು ಹಾಜುರಿದ್ದರು.