ಹೊಲೆಮಾದಿಗರ ಒಳ ಮೀಸಲಾತಿ ಜಾರಿಗೊಳಿಸುವಂತೆ ಜಗಳೂರು ಪಟ್ಟಣದಲ್ಲಿ ಬೃಹತ್ ತಮಟೆ ಚಳುವಳಿ ಪ್ರತಿಭಟನಾ ಮೆರವಣಿಗೆ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ
ಸುದ್ದಿ:ಜಗಳೂರು
ಜಗಳೂರು ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಹೊಲೆಮಾದಿಗರ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾಕಾರರು ಬೃಹತ್ ತಮಟೆ ಮತ್ತು ಹುರಿಮೆ ಚಳುವಳಿ ಮೂಲಕ ಕೆಲಹೊತ್ತು ಪ್ರತಿಭಟನೆ ನಡೆಸಿ ಶೀಘ್ರವೆ ಒಳಮೀಸಲಾತಿ ಜಾರಿ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿ ಕಾನೂನಿಗೆ ಗೌರವ ಸಲ್ಲಿಸಿ ಎಂದು ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಆಗ್ರಹಿಸಿದರು.
ಪ್ರತಿಭನಕಾರರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಸಂವಿಧಾನಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕು ತಹಶೀಲ್ದಾರ ಕಛೇರಿವರಗೆ ಕಾಲ್ನಡಿಗೆ ಮೂಲಕ ತೆರಳಿ ತಮಟೆ ಚಳುವಳಿ ನಡೆಸಿದರು.
ಪರಿಶಿಷ್ಟ ಜಾತಿ ಮಾದಿಗ ಸಂಬಂಧಿತ ಜಾತಿಗಳು ಸುಮಾರು ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸುತಾ ಬಂದಿದ್ದರು ಸಹ ಅಸ್ಪೃಶ್ಯರ ನೆರಳಿನ ಹಕ್ಕಿನ ಹೋರಾಟವನ್ನ ಹತ್ತಿಕ್ಕುವ ಹುನ್ನಾರದ ಷಡ್ಯಂತ್ರ ಸರಿಯಲ್ಲ ಸುಪ್ರೀಂಕೋರ್ಟ್ ಆದೇಶವನ್ನ ಪಾಲನೆ ಮಾಡದ ಸರ್ಕಾರವನ್ನ ಎಚ್ಚರಿಸಲು ಇದೀಗ ತಮಟೆ .ಮತ್ತು ಹುರುಮೆ ಚಳುವಳಿ ಮೂಲಕ ಎಚ್ಚರಿಕೆ ನೀಡಲು ಬಂದಿದ್ದೆವೆ .
ಅಹಿಂದ ಹೆಸರಿನಲ್ಲಿ ಅಧಿಕಾರ ಗದ್ದುಗೆ ಹಿಡಿದ ಮಾನ್ಯ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್ ಆದೇಶವನ್ನ ಹರಿಯಾಣ ಸರ್ಕಾರ ಚಾಚುತಪ್ಪದೆ ಈಗಾಗಲೇ ಜಾರಿಗೋಳಿಸಿದಂತೆ ತಾವುಗಳು ಒಳಮೀಸಲಾತಿ ಶೀಘ್ರವಾಗಿ ಜಾರಿ ಮಾಡಿ ಎಂದು ಜಗಳೂರು ತಾಲ್ಲೂಕು ಮಾದಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಜಿ ಎಚ್ ಶಂಭುಲಿಂಗಪ್ಪ ಪ್ರತಿಭಟನೆ ನೇತೃತ್ವ ವಹಿಸಿಕೊಂಡು ಒತ್ತಾಯಿಸಿದರು .
, ಚಲವಾದಿ ಸೇವಾ ಸಮಾಜದ ಹಿರಿಯ ಮುಖಂಡ ವೀರಸ್ವಾಮಿ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಒಳಮೀಸಲಾತಿ ನಮ್ಮ ಜನ್ಮಸಿದ್ದ ಹಕ್ಕು ಶೀಘ್ರವೆ ಜಾರಿ ಮಾಡಿ ನಮ್ಮ ಮೀಸಲಾತಿ ವಿರೋಧಿಸುವ ಮನಸ್ಥಿತಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಸರಿಯಾದ ರೀತಿ ಪಾಠ ಕಲಿಸಬೇಕಾಗುತ್ತದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ದಂಡೋರ ಸಮಿತಿ ಜಿಲ್ಲಾದ್ಯಕ್ಷ ಗೌರಿಪುರದ ಕುಬೇರಪ್ಪ ಮಾತನಾಡಿ , ‘ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪಾಲನೆ ಮಾಡದೆ ಇರುವುದು ಮೇಲ್ನೋಟಕ್ಕೆ ಕಂಡು ಬರಲಿದೆ .ತೀರ್ಪು ಬಂದು ಎರಡು ತಿಂಗಳು ಕಳೆದರೂ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸದಿರುವುದು ಅಸ್ಪೃಶ್ಯ ಸಮುದಾಯವನ್ನ ತುಳಿಯುವ ಹುನ್ನಾರ ಎಂದು ದೂರಿದರು.
‘ಈ ಬಗ್ಗೆ ಅನೇಕ ವರ್ಷದಿಂದ ಹೋರಾಟ ನಡೆಯುತ್ತಿದ್ದು, ಆ ವೇಳೆ ತೊಡಕುಗಳನ್ನು ಮುಂದಿಡುತ್ತಿದ್ದರು. ಈಗ ಕಾನೂನು ಮೂಲಕವೇ ಸ್ಪಷ್ಟನೆ ದೊರಕಿದೆ. ಆದರೆ, ಅದರಲ್ಲಿನ ಕೆಲವು ಸಣ್ಣ ಅಂಶವನ್ನು ನೆಪವಾಗಿಟ್ಟು ಮೀಸಲಾತಿ ಜಾರಿಗೊಳಿಸುವುದನ್ನು ತಡೆಯುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಯೊಳಗಡೆ ಯಾವುದೇ ಸೌಲಭ್ಯ ದೊರೆಯದೆ ಅನ್ಯಾಯಕ್ಕೊಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿಯು ಸಾಮಾಜಿಕ ನ್ಯಾಯ ದೊರಕಿಸಿಕೊಡಲಿದ್ದು, ಶೀಘ್ರ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
ಮಾದಿಗ ಸಮಾಜದ ಯುವಮುಖಂಡ ಹನಮಂತಾಪುರ ಸತೀಶ್ ಮಾತನಾಡಿ , ರಾಜ್ಯದ ಜನರಿಗೆ ಸಾಮಾಜಿಕ ಭದ್ರತೆ ನೀಡುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ದಸಂಸ ಸಂಚಾಲಕ ಸತೀಶ್ ಮಲೆ ಮಾಚಿಕೆರೆ ಮಾತನಾಡಿ ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕ್‌ಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ಹಾಗೂ ಪದೋನ್ನತಿ ಮಾಡಬಾರದು. ಜನಗಣತಿ ವಿಚಾರ ಮುನ್ನೆಲೆಗೆ ತಂದು ಎಸ್.ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಬಾರದು. ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರ ಮುಂದುವರಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
.
ಈ ಸಂದರ್ಭದಲ್ಲಿ ತಹಶೀಲ್ದಾರ ಕಛೇರಿ ಉಪಾತಹಶೀಲ್ರಾರ ಮಂಜಾನಂದರವರಿಗೆ ಮನವಿ ಸಲ್ಲಿಸಲಾಯಿತು. ಹೊಲೆ ಮಾದಿಗರ ಒಳಮೀಸಲಾತಿ ಒಕ್ಕೂಟದ ಪದಾಧಿಕಾರಿಗಳಾದ ಗ್ಯಾಸ್ ಒಬಣ್ಣ. ಚಲವಾದಿ ಸಮಾಜದ ಮುಖಂಡ ನಿಜಲಿಂಗಪ್ಪ.ಗುತ್ತಿದುರ್ಗ ರುದ್ರೇಶ್. ಮಾಜಿ ಗ್ರಾಪಂ ಸದಸ್ಯರಾದ ನಿಬಗೂರು ಮುನಿಯಪ್ಪ.ಮರೆನಹಳ್ಳಿ ಹೊನ್ನುರಪ್ಪ.ಗೋಡೆ ದುರುಗಣ್ಣ. ಅಣಬೂರು ರಾಜಶೇಖರ .ರೇಣುಕೇಶ್ ತುಪ್ಪದಹಳ್ಳಿ ಸಿದ್ದೇಶ್ .ರಾಜನಹಟ್ಟಿ ಚಂದ್ರಪ್ಪ.ಪಲ್ಲಾಗಟೆ ರಂಗಪ್ಪ…ಗೌರಿಪುರದ ಸತ್ಯಮೂರ್ತಿ ಮಾಕುಂಟೆ ನಾಗರಾಜ್. ಮಾಚಿಕೆರೆ ಯಲ್ಲಪ್ಪ.ದಸಂಸ ಸಂಚಾಲಕ ಕುಬೇರಪ್ಪ.ಹುನಮಂತಪ್ಪ ಪಾಂಡು .ತಿಮ್ಮಣ್ಣ.ಶಾಂತಕುಮಾರ್.ಮಾರುತಿ ಬಸವನಕೋಟೆ.ಭರಮಸಮುದ್ರ ಮಲ್ಲೇಶ್.ವೆಂಕಟೇಶ್ .ನಾಗರಾಜ್.ಕ್ಯಾಸೆನಹಳ್ಳಿ ಹನುಮಂತಪ್ಪ..ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನು ಮುಂತಾದವರು ಹಾಜುರಿದ್ದರು.