ಜಗಳೂರು ಪಟ್ಟಣದಲ್ಲಿ‌ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಪಡೆಯಲು ಸರ್ವರ್‌ ಸಮಸ್ಯೆಯಿಂದ ಬೇಸತ್ತ ಫಲಾನುಭವಿಗಳು

ಸುದ್ದಿ ಜಗಳೂರು:

ಪಡಿತರ ಫಲಾನುಭವಿಗಳು ಅಕ್ಕಿ ಪಡೆಯಲು ಸರ್ವರ್‌ ಸಮಸ್ಯೆ ನೀಗಿಸುವಂತೆ ಪಡಿತರ ಕಾರ್ಡದಾರರು ಜಗಳೂರು ತಾಲ್ಲೂಕು ಕಛೇರಿಗೆ ತೆರಳಿ ಉಪತಹಶೀಲ್ದಾರ್ ಮಂಜಾನಂದರವರಿಗೆ ಮನವಿ ಸಲ್ಲಿಸಿದರು
:
ಜಗಳೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ದಾರರು ಹೆಬ್ಬೆರಳು ಗುರುತು ನೀಡಿ ಅಕ್ಕಿ ಪಡೆಯುವುದೆ ಒಂದು ದುಸ್ತರವಾಗಿದೆ.
ಪಡಿತರದಾರರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ಹಿಡಿ ದಿನ ನಿಂತರು ದಿನಕ್ಕೆ ಒಬ್ಬರು ಇಬ್ಬರದು ಮಾತ್ರ ಹೆಬ್ಬೆರಳು ಗುರುತು ತೆಗೆದುಕೊಂಡು ಪಡಿತರ ದವಸಗಳನ್ನು ನೀಡುತ್ತಾರೆ ಹೊರೆತು ಇನ್ನುಳಿದ ಸಾರ್ವಜನಿಕರು ಕಂಪ್ಯೂಟರ್ ಮುಂದೆ ಕಾದು ಕುಳಿತರು ಸರ್ವರ್‌ ಬರುತ್ತಿಲ್ಲ ಸರ್ವರ್ ಬರದೆ ನ್ಯಾಯಬೆಲೆ ಅಂಗಡಿ ಮಾಲಿಕ ಅಕ್ಕಿ ವಿತರಿಸುವುದಿಲ್ಲ ಎಂದು ಫಲಾನುಭವಿ ರಜಿಯಾಬೇಗಂ ಬೇಸರ ವ್ಯಕ್ತಪಡಿಸಿದರು.
ನಾವು ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುವಂತವರು ಅಕ್ಕಿ ಪಡೆಯಲು ಹಿಡಿ ದಿನ ಕಾದರು ಬರವುದಿಲ್ಲ ಎಂದು ದೂರಿದರು ಪಟ್ಟಣದ ಇಂದಿರಾ ಬಡಾವಣೆಯಲ್ಲಿರುವ ಪರವಾನಿಗೆದಾರರಾದ ಜೆ.ಪಿ ರವಿ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಗಾಗಿ ಜನರು ಕಾದು ಕಾದು ಕುಳಿತು ಸಾಕಾಗಿ ದಿಢೀರನೆ ತಾಲ್ಲೂಕು ಕಛೇರಿಗೆ ತೆರಳಿ ಉಪಾತಹಶೀಲ್ದಾರ್ ಮಜಾನಂದರವರಿಗೆ ಮನವಿ ಸಲ್ಲಿಸಿ ಶೀಘ್ರವೆ ಸರಿಪಡಿಸುವಂತೆ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಸರ್ವರ್ ಎಂಬ ಮುಖ್ಯ ಸಮಸ್ಯೆಯನ್ನು ಹೇಳಿ ನುಣುಚಿಕೊಳ್ಳುತ್ತಾರೆಯೆ ವಿನ ಇದಕ್ಕೆ ಪರಿಹಾರ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಶೀಘ್ರವೆ ಪರಿಹರಿಸಬೇಕು.ಮಾನ್ಯ ಜಿಲ್ಲಾಧಿಕಾರಿಗಳು ರಾಜ್ಯಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡುವ ಮೂಲಕ ಶೀಘ್ರವೆ ಸಮಸ್ಯೆ ನೀಗಿಸಲು ಮುಂದಾಗುವಂತೆ ಆಗ್ರಹಿಸಿದರು.


ನ್ಯಾಯಬೆಲೆ ಅಂಗಡಿ ಮಾಲಿಕರನ್ನು ಹಾಗೂ ಸ್ಥಳೀಯ ತಾಲ್ಲೂಕು ಮಟ್ಟದ ಅಹಾರ ನಾಗರಿಕ ಇಲಾಖೆ ಅಧಿಕಾರಿ ಶಿವಪ್ರಕಾಶ್ ಇವರನ್ನ ಪ್ರಶ್ನೆಸಿದರೆ ನಾವೇನು ಮಾಡಲಿ ಸರ್ವರ್ ಸಮಸ್ಯೆ ಹಿಡಿ ರಾಜ್ಯಕ್ಕೆ ಈ ರೀತಿಯಾಗಿದೆ ಮೇಲ್ಮಟ್ಟದ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಆಹಾರ ನಾಗರಿಕ ಸರಬರಾಜು ಇಲಾಖೆ ಮಂತ್ರಿಗಳಿಗೆ ತಿಳಿಸಿ ಆಯುಕ್ತರಿಗೆ ತಿಳಿಸಿ ಸರಿಪಡಿಸುವಂತೆ ಗಮನಕ್ಕೆ ತನ್ನಿ ಎಂದು ಹೇಳಿ ನುಣುಚಿಕೊಳ್ಳುತ್ತಾರೆ ಎಂದು ಹೇಳುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ .


ಪಡಿತರದಾರ ನರಸಿಂಹಮೂರ್ತಿ ಮಾತನಾಡಿ ಈಗಾಗಲೇ ದಿನಾಂಕ 10 ರಿಂದ 20 ನೇ ತಾರೀಖನವರೆಗೂ ಪಡಿತರ ದವಸ ನೀಡುತ್ತಾರೆ ಈ ಸಮಸ್ಯೆಯಿಂದ ವೇಳೆ ಮೀರುತಾ ಬಂದರು ನಮಗೆ ಅಕ್ಕಿ ನೀಡುತ್ತಿಲ್ಲ ಈ ಸಮಸ್ಯೆಗಳಿಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ ಎಂದರು
ಈ ಸಂದರ್ಭದಲ್ಲಿ ಪಡಿತರ ಫಲಾನುಭವಿಗಳಾದ ರಜೀಯಾಬೇಗಂ.ಲಕ್ಷ್ಮಿದೇವಿ.ಕಮಲಮ್ಮ.ರುದ್ರಮುನಿ.ನಾಗಮ್ಮ ನರಸಿಂಹಮೂರ್ತಿ.ಮಾರಮ್ಮ.ಪವಿತ್ರ.ರಂಗಮ್ಮ.ತಿಮ್ಮಕ್ಕ.ಸಣ್ಣಮ್ಮ.ಮಾರಕ್ಕ.ಗೀತಮ್ಮ.ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!