ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ಸ್ ಸ್ಥಾಪನೆಗೆ ಕ್ರಮ:ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್
ಜಗಳೂರು ಸುದ್ದಿ:
ಸ್ಥಳೀಯ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೇಂಟ್ಸ್ ಫ್ಯಾಕ್ಟರಿ ಸ್ಥಾಪಿಸಲಾಗುವುದು.ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಹರಪನಹಳ್ಳಿ,ಜಗಳೂರು ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಹಂತಹಂತವಾಗಿ ಅಭಿವೃದ್ದಿಗೊಳಿಸುವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಐತಿಹಾಸಿಕ ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಎಸ್ ಸಿ ಕಾಲೋನಿಯ ಐತಿಹಾಸಿಕ ವಡ್ಡನಹಳ್ಳಿ ಮಾರಮ್ಮ ದೇವಸ್ಥಾನ ಪುನರ್ ಸ್ಥಾಪನೆ ಮತ್ತು,ಸಮುದಾಯ ಭವನ, ಮತ್ತು ಎಸ್ ಟಿ ಕಾಲೋನಿಯಲ್ಲಿ ಕೊಲ್ಲಾರಮ್ಮ ದೇವಸ್ಥಾನ ಜೀರ್ಣೋದ್ದಾರಕ್ಕೆ ಗುದ್ದಲಿಪೂಜೆ ನೆರವೇರಿಸಿ ನಂತರ ಸಂಗೇನಹಳ್ಳಿ ಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಕೆರೆ ಬಾಗೀನ ಅರ್ಪಿಸಿ ನಂತರ ಅವರು ಉದ್ದೇಶಿಸಿ ಮಾತನಾಡಿದರು.
ತಮ್ಮ ಬೇಡಿಕೆಯಂತೆ ಶೀಘ್ರದಲ್ಲಿ ಈ ಭಾಗದ ಗ್ರಾಮಸ್ಥರು ಹಾಗೂ ಕೆರೆ ಸಮಿತಿ ಪದಾಧಿಕಾರಿಗಳು, ಶಾಸಕರೊಡನೆ ಒಂದು ದಿನ ಸುದೀರ್ಘವಾಗಿ ಚರ್ಚಿಸಿ ಪ್ರವಾಸಿ ತಾಣ,ಸಿರಿಧಾನ್ಯ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಭಿವೃದ್ದಿ ಕಾಮಗಾರಿ ಕುರಿತು ಕೇಂದ್ರ ನಿತಿನ್ ಗಡ್ಕರಿ ಬಳಿ ನಿಯೋಗ ತೆರಳಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಸಂಗೇನಹಳ್ಳಿ ಕೆರೆ ತುಂಬಿರುವುದರಿಂದ ಗ್ರಾಮಕ್ಕೆ ತೆರಳು ಅತ್ಯವಶ್ಯಕವಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಂದಾಯ ಸಚಿವರಿಗೆ ಸಲ್ಲಿಸಲಾಗಿದೆ.ಶೀಘ್ರದಲ್ಲಿ ಅನುಮೋದನೆ ಸಿಗಲಿದೆ.ತಾಲೂಕಿನ ಬಹುತೇಕ ಕೆರೆಗಳು ಕಳೆದ ಅರ್ಧ ಶತಕಗಳಿಂದ ಕೆರೆ ಕೋಡಿಗಳು ಬಿದ್ದಿಲ್ಲ.ಆದ್ದರಿಂದ ರೈತರು,ಕೆಲವರು ವಸತಿಗಾಗಿ ಕೆರೆ ಒತ್ತುವರಿಯಾಗಿದ್ದವು.ಇದೀಗ ಕೆರೆ ಕೋಡಿ ಬಿದ್ದ ಪರಿಣಾಮ ಕೆರೆಗಳ ನಿರ್ಧಿಷ್ಟ ವಿಸ್ತೀರ್ಣ ಗೋಚರಿಸುತ್ತವೆ.ಸಿರಿಗೆರೆ ಶ್ರೀಗಳ ಆಶಯದಂತೆ ಬರದನಾಡು ಬಂಗಾರದ ನಾಡಾಗಲಿದೆ.ಕೆರೆಗಳ ಸಂರಕ್ಷಣೆ
ಪ್ರತಿಯೊಬ್ಬರ ಹೊಣೆಯಾಗಬೇಕಿದೆ ಜೊತೆಗೆ ಪೋಷಕರು ಮಕ್ಕಳನ್ನು ನೀರಿನಿಂದ ಸುರಕ್ಷಿತವಾಗಿಡಬೇಕು’.ಎಂದು ಸಲಹೆ ನೀಡಿದರು.
‘ಕುದುರೆ ಲಾಳಾಕೃತಿ ಕೋಡಿಯ ಐತಿಹಾಸಿಕ ಸಂಗೇನಹಳ್ಳಿ ಕೆರೆ ಕಳೆದ 15 ವರ್ಷಗಳಿಂದ ಸತತ ಮೂರು ಬಾರಿ ಕೆರೆ ಕೋಡಿ ಬಿದ್ದರೂ ಕೆಲ ಅವೈಜ್ಞಾನಿಕ ಕಾಮಗಾರಿಗಳಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ.ಗ್ರಾಮಕ್ಕೆ ಸೂಕ್ತ ರಸ್ತೆ ಸಂಚಾರ ಸಂಪರ್ಕಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗಬೇಕಿದೆ.ಕೆರೆ ಏರಿಯ ಸುತ್ತಲೂ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿರಿಧಾನ್ಯಗಳ ಬೆಳೆಯುವ ಹಬ್ ಮತ್ತು ಪ್ರವಾಸಿ ತಾಣವಾಗಬೇಕಿದೆ .
—— ಡಾ.ಅಶೋಕ ಕುಮಾರ್ ಸಂಗೇನಹಳ್ಳಿ ,ಸಾಹಿತಿ
ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಸಂತಕುಮಾರಿ,ಉಪಾಧ್ಯಕ್ಷೆ ಅನ್ನಪೂರ್ಣಮ್ಮ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮುಖಂಡರಾದ ಸಣ್ಣಸೂರಯ್ಯ,ಕೆ.ಟಿ.ಬಡಯ್ಯ,ಕೊಟ್ಟಿಗೆ ತಿಪ್ಪೇಸ್ವಾಮಿ,ಶಿವನಗೌಡ,ಡಿಎಸ್ ಕಲ್ಲಪ್ಪ,ಬಿ.ಮಹೇಶ್ವರಪ್ಪ,ವಕೀಲ ಆರ್.ಓಬಳೇಶ್,ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜ್. ಸಾಹಿತಿ ಅಶೋಕ ಸಂಗೇನಹಳ್ಳಿ,ಅಜ್ಜಣ್ಣ,ದುಬೈ ಕಲ್ಲೇಶ್,
ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ನೆರೆಹೊರೆ ಗ್ರಾಮಸ್ಥರು ಭಾಗವಹಿಸಿದ್ದರು.
.