ಉದ್ಗಟ್ಟ ಗ್ರಾಮದ ನಿರಾಶ್ರಿತರಿಗೆ ಶಾಸಕ ಬಿ.ದೇವೇಂದ್ರಪ್ಪ ಅವರಿಂದ ಸಾಂತ್ವಾನ ಶಾಶ್ವತ ಸೂರಿನ ಭರವಸೆ
ಜಗಳೂರು ಸುದ್ದಿ:ತಾಲೂಕಿನ ಉದ್ಗಟ್ಟ ಗ್ರಾಮದ ನಿರಾಶ್ರಿತ ಸಂತ್ರಸ್ಥರಿಗೆ ಸಾಂತ್ವಾನನೀಡುವ ಮೂಲಕ ಶಾಸಕ ಬಿ.ದೇವೇಂದ್ರಪ್ಪ ಕಂದಾಯ ಇಲಾಖೆ ಭೂಮಿ 5ಎಕರೆ ಸರ್ಕಾರಿ ಜಮೀನಿನಲ್ಲಿ ನಿವೇಶನ,ಶಾಶ್ವತ ಸೂರು ಕಲ್ಪಿಸುವಂತೆ ಭರವಸೆ ನೀಡಿದರು.
‘ತಾಲೂಕಿನ ಭರಮಸಮುದ್ರ ಕೆರೆ ಕೋಡಿ ಬಿದ್ದ ಹಿನ್ನೆಲೆ ಪಕ್ಕದ ಉದ್ಗಟ್ಟ ಗ್ರಾಮದ 20ಕ್ಕೂ ಅಧಿಕ ಕುಟುಂಬಗಳ ಮನೆಗಳಿಗೆ ನೀರು ನುಗ್ಗಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು.ಸೂರಿಗಾಗಿ ಪರಿತಪಿಸುತ್ತಿದ್ದರು.ಇದನ್ನು ಗಮನಿಸಿದ ಶಾಸಕರು ಅಧಿಕಾರಿಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಾಳಜಿಕೇಂದ್ರ ತೆರೆಯಲು ಸೂಚಿಸಿದರು.ಆದರೆ ನಿರಾಶ್ರಿತರು ಕಾಳಜಿಕೇಂದ್ರದ ಬದಲಾಗಿ ಸಹಾಯಕ್ಕಾಗಿ ಅಳಲುತೋಡಿಕೊಂಡ ಹಿನ್ನೆಲೆ ವೈಯಕ್ತಿಕವಾಗಿ ₹20,000 ಸಹಾಯಸ್ತ ಚಾಚಿ ಆಹಾರದಾಸ್ತಾನು ಖರೀದಿಸಲು ನೆರವಾದರು’.
‘ಕಳೆದ 4 ದಶಕಗಳ ನಂತರ ತಾಲೂಕಿನಲ್ಲಿ ಕೆರೆಕೋಡಿಗಳು ಬೀಳುತ್ತಿರುವುದು ಒಂದೆಡೆ ಸಂತಸವಾದರೆ ಮತ್ತೊಂದೆಡೆ ಜಲಾವೃತಕ್ಕೆ ಬಲಿಯಾಗಿ ಅಪಾರ ಖರ್ಚುಭರಿಸಿ ನಿರ್ಮಿಸಿಕೊಂಡ ಸುಸಜ್ಜಿತವಾದ ಮನೆಗಳಿಗೆ ನೀರು ನುಗ್ಗಿ ಮನೆಗಳನ್ನು ಕಳೆದುಕೊಂಡು ಆತಂಕದಲ್ಲಿ ಅಳಲುತೋಡಿಕೊಳ್ಳುತ್ತಿರುವ ಸಂತ್ರಸ್ಥರನ್ನು ಕಂಡು ನನಗೂ ಮರುಕ ವ್ಯಕ್ತವಾಗುತ್ತಿದೆ.ಯಾರೋಬ್ಬರೂ ಭಯಪಡುವುದುಬೇಡ ತಮಗೆ ಸರ್ಕಾರದ ಸೌಲಭ್ಯ,ಹಾಗೂ ಸರ್ಕಾರಿ ಜಮೀನಿನಲ್ಲಿ ನಿವೇಶನ,ಮನೆಗಳನ್ನು ನಿರ್ಮಿಸಿಕೊಡಲಾಗುವುದು.ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಿ ಎಂದು ವಿಶ್ವಾಸ ವ್ಯಕ್ತಪಡಿಸಿದರು’.
‘ಗ್ರಾಮದಲ್ಲಿ ಮಾರಕ ರೋಗಕ್ಕೆ ತುತ್ತಾಗುತ್ತಿರುವ ಎರಡು ಮೇಕೆಗಳನ್ನು ಸಾಕ್ಷಿಯಾಗಿ ತೋರಿಸಿದ ಕುರಿಗಾಹಿಗೆ ನಾನು ಕಂಡು ಬೇಸರವಾಯಿತು. ಪಶುವೈದ್ಯಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುವ ಮೂಲಕ ಮುಂಜಾಗ್ರತಾ ಕ್ರಮದಿಂದ ಲಸಿಕೆನೀಡಲು ಸೂಚಿಸಿರುವೆ’.
ಸಂದರ್ಭದಲ್ಲಿ ತಾ.ಪಂ.ಇಓ ಕೆಂಚಪ್ಪ,ಆರ್ ಐ ಧನಂಜಯ್,ಪಿಡಿಓ ಕೊಟ್ರೇಶ್,ಸೇರಿದಂತೆ ಗ್ರಾಮಸ್ಥರು ಇದ್ದರು.