ಅನಾಥ ವೃದ್ದೆಗೆ ಅಸರೆಯಾದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅಧ್ಯಕ್ಷ ಬಿ ಮಹೇಶ್ವರಪ್ಪರವರ ಕಾರ್ಯಕ್ಕೆ ಜನಮೆಚ್ಚುಗೆ

ಜಗಳೂರು ಪಟ್ಟಣದಲ್ಲಿ ಎಲ್ಲೆಂದರಲ್ಲಿಯೆ ತಿರುಗಾಡುತ್ತಿದ್ದ ಅನಾಥ ವೃದ್ದೆಯನ್ನ ಸ್ವಗ್ರಾಮಕ್ಕೆ ತಲುಪಿಸಿ ಆಸರೆಯಾದ ಜಗಳೂರು ಕೊಡುಗೈ ದಾನಿ ಅನಾಥ ರಕ್ಷಕ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಹಾಲಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ . ಘಟಕದ ಅಧ್ಯಕ್ಷರು ಬಿ.ಮಹೇಶ್ವರಪ್ಪರವರು ಮಾನವೀಯತೆ ಮೆರೆದಿದ್ದಾರೆ. ಕಳೆದ ದಿನಗಳಿಂದ ಜಗಳೂರು ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ‌ ತಾಲ್ಲೂಕಿನ ಪಲ್ಲಾಗಟೆ ಗ್ರಾಮದ ಚೌಡಮ್ಮ ಎಂಬ ವೃದ್ದೆಯೊಬ್ಬಳು
ಅನಾಥವಾಗಿ ತಿರುಗಾಡುತ್ತಿದ್ದ ನಿರ್ಗತಿಕ ವೃದ್ದೆಯನ್ನ ಕಂಡ ಇವರು ಮಾನವೀಯತೆ ಮೆರೆದು ಅವರ ಸ್ವಂತ ಗ್ರಾಮವಾದ ಪಲ್ಲಾಗಟೆ ಗ್ರಾಮದಲ್ಲಿರುವ ಕುಟುಂಬದವರೊಂದಿಗೆ ಬಿಟ್ಟು ಸಂತ್ರಸ್ತೆಗೆ ನೆರವು ನೀಡಿ ಹೆಚ್ಚಿನ ಹಾರೈಕೆ ಗೆ ಹಣದ ವ್ಯವಸ್ತೆ ಮಾಡಲು ತಿಳಿಸಿದರು.

ಸುರಕ್ಷಿತವಾಗಿ ತಲುಪಿಸಿ ಅವರ ಚಿಕಿತ್ಸೆಗೆ ಸಹಾಯಧನ ನೀಡಿ ಹಿರಿಯ ಜೀವಿಯ ಅರೋಗ್ಯವನ್ನು ನೋಡಿಕೊಳ್ಳುವಂತೆ ಸಂಬಂಧಿಕರಿಗೆ ತಿಳಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ .


ಈ ಸಂದರ್ಭದಲ್ಲಿ ಬಿ.ಮಹೇಶ್ವರಪ್ಪ ವೃದ್ದೆ ಅಜ್ಜಿಯ ಕುರಿತು ಮಾತನಾಡಿದರು ಸಮಾಜದಲ್ಲಿ ಮನುಷ್ಯರಾದ ನಾವು ಮತ್ತೊಂದು ಮನಷ್ಯ ಜೀವಿಯನ್ನ ಗೌರವ ಭಾವನೆಯಿಂದ ಕಾಣಬೇಕು ಸಾಂದರ್ಭಿಕವಾಗಿ ಮಾನಸಿಕವಾಗಿ ಅಸ್ತವ್ಯಸ್ತತೆರಾಗಿ ಊಟ.ಬಟ್ಟೆಯಿಲ್ಲದೆ ಬೀದಿ ಬದಿಯಲ್ಲಿ ವಾಸಿಸುತಾ ಮನೆ ಮಠ ಬಿಟ್ಟು ತಿರುಗಾಡುವುದರಿಂದ ಆಪಾಯಕ್ಕೆ ತುತ್ತಾಗುವರು ಈ ರೀತಿ ತಿರುಗಾಡಲು ಕುಟುಂಬದವರ ನಿರ್ಲಕ್ಷ್ಯವೆ ಕಾರಣ ಆದ್ದರಿಂದ ಕುಟುಂಬದವರು ಹಿರಿಯ ಜೀವಿಯನ್ನ ಗೌರವ‌ಭಾವನೆಯಿಂದ ಕಂಡು ಹಾರೈಕೆ ಮಾಡುವುದು ಬಿಟ್ಟು ಅವರು ಗಳಿಸಿದ ಆಸ್ತಿ ಅಂತಸ್ತುನ್ನು ಉಪಯೋಗಿಸಿಕೊಂಡು ಅವರುನ್ನು ಎಲ್ಲೆಂದರಲ್ಲಿಯೆ ಬಿಡುವುದು ಕೆಲ ಆಶ್ರಮಕ್ಕೆ ಬಿಡುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೊಪರ್ ವೈಜರ್ ಶಾಂತಮ್ಮ.ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ . ಪಪಂ ಸದಸ್ಯರ ಪತಿ ಗೌರಿಪುರದ ಶಿವಣ್ಣ .ಮುಖಂಡ ಬಿಳಿಚೋಡು ರಂಗಣ್ಣ.ಗೀರಿಶ್ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!