ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡಿ ದುರುದ್ದೇಶದಿಂದ ತೇಜೊವದೆ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರ ನಾನು ಅವರ ಮೇಲೆ ಮಾನನಷ್ಠ ಪ್ರಕರಣ ದಾಖಲು ಮಾಡುವೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚಂಗಿಪುರದ ರೇವಣ್ಣ ಸಿದ್ದಪ್ಪ.
ಸುದ್ದಿ ಜಗಳೂರು
ತಾಲ್ಲೂಕಿನ ಹುಚ್ಚೆಂಗಿಪುರ ಗ್ರಾಮದಲ್ಲಿ ರೈತ ಭವನ ನಿರ್ಮಿಸುವ ಚಿಂತನೆ ರಾಜ್ಯ ರೈತ ಸಂಘ ರೇವಣ್ಣಸಿದ್ದಪ್ಪ ಬಣದ ರಾಜ್ಯಾಧ್ಯಕ್ಷ ರೇವಣ್ಣಸಿದ್ದಪ್ಪ ಸ್ಪಷ್ಟನೆ ನೀಡಿದ್ದಾರೆ.
ನಾನು ನನ್ನ ಸ್ವ ಗ್ರಾಮದಲ್ಲಿ ಯಾರ ಆಸ್ತಿ ಕಬಳಿಸಿರುವುದಿಲ್ಲ ಸಾರ್ವಜನಿಕ ಗ್ರಾಮ ಠಾಣ ಜಾಗದಲ್ಲಿ ಸಾರ್ವಜನಿಕರಿಗಾಗಿ ರೈತರ ಹೆಸರಿನಲ್ಲಿ ರೈತರ ಕುಂದುಕೊರತೆಗಳಿಗಾಗಿ ಸಭೆ ನಡೆಸಲು ಗ್ರಾಮೀಣ ಬಾಗದಲ್ಲಿ ಒಂದು ರೈತ ಭವನ ನಿರ್ಮಿಸುವ ಸದುದ್ದೇಶದಿಂದ ದಿದ್ದಿಗಿ ಗ್ರಾಮ ಪಂಚಾಯತಿಯಲ್ಲಿ 20022 ನೇ ಸಾಲಿನಲ್ಲಿ ನಮ್ಮ ಗ್ರಾಮದ ಬಾಲರಾಜ್ ರವರು ದಿದ್ದಿಗಿ ಗ್ರಾಮ ಪಂಚಾಯತಿ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಮ್ಮುಖದಲ್ಲಿ ಖಾತೆಯಾಗಿ ಇಸ್ವತ್ತು ಮಾಡಿಸಿರುತ್ತೆವೆ ನಮ್ಮ ಸಂಘದ ಪದಾಧಿಕಾರಿಗಳು ಸಹಕಾರದಿಂದ ಇಂತ ಜನೋಪಯೋಗಿ ಕೆಲಸ ಮಾಡಲು ನಾನು ದೂರ ದೃಷ್ಠಿಯಿಂದ ಚಿಂತನೆ ನಡೆಸಿರುವೆ ವಿನ ನಾನು ಯಾರ ಆಸ್ತಿಗೆ ಹೋಗಿರುವುದಿಲ್ಲ ಆದರೆ ಇದೀಗ ನನ್ನ ಮೇಲೆ ಯಾರು ಆರೋಪ ಮಾಡಿದ್ದಾರೆ ಅವರ ಅಧ್ಯಕ್ಷತೆ ಅವಧಿಯಲ್ಲಿಯೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಅನುಮೋದನೆಗೊಂಡು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಆದರೆ ಇದೀಗ ನಮ್ಮ ಗ್ರಾಮದ ಕೆಲ ಮುಖಂಡರು ನನ್ನ ಸಂಘಟನೆಯಲ್ಲಿ ಪ್ರಾರಂಭದಲ್ಲಿ ನನ್ನ ಜೊತೆಗೆಯಿದ್ದವರೆ ಇದೀಗ ನನ್ನ ಮೇಲೆ ಯಾವುದು ಒಂದು ದುರುದ್ದೇಶದಿಂದ ಸುಖಸುಮ್ಮನೆ ರೇವಣ್ಣಸಿದ್ದಪ್ಪ ವಯಕ್ತಿಕ ಹೆಸರಿಗೆ ಸಾರ್ವಜನಿಕ ಜಾಗವನ್ನ ಸ್ವಂತಕ್ಕೆ ಹೆಸರಿಗೆ ಮಾಡಿಕೊಂಡಿರುತ್ತಾನೆ ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಸ್ವಷ್ಟನೆ ನೀಡಿದರು.
. ರೈತ ಸಂಘದ ಹೆಸರಿನಲ್ಲಿ ಖಾತೆಯಾಗಿದೆ ಅಧಿಕಾರಿಗಳು ಪರಿಶೀಲನೆ ನಡೆಸಲಿ ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಸುಖಸುಮ್ಮನೆ ತೇಜೊವದೆ ಮಾಡಿದವರ ವಿರುದ್ದ ಮಾನನಷ್ಟ ಪ್ರಕರಣ ದಾಖಲು ಮಾಡುವೆ ಇಂತ ಅಪಾ ಪ್ರಚಾರಕ್ಕೆ ರೈತ ಸಂಘಟಕರು ನಮ್ಮ ರೈತ ಸಂಘದ ಪದಾಧಿಕಾರಿಗಳು ಇಂತ ಸಾವಿರ ಆಪಾಪ್ರಚಾರ ಆಪಾದನೆಗೆ ಹೆದರುವುದಿಲ್ಲ ನಾನು ಸದಾ ಸಾರ್ವಜನಿಕವಾಗಿ ಸರ್ವರ ಏಳ್ಗಿಗೆಗೆ ಶ್ರಮಿಸುವಂತ ರೈತ ಹೋರಾಟಗಾರ ಆದ್ದರಿಂದ ಇಂತ ಗೊಡ್ಡು ಹೆದರಿಕೆಗೆ ಸೊಪ್ಪು ಹಾಕುವುದಿಲ್ಲ ಎಂದು ಶುಕ್ರದೆಸೆನ್ಯೂಸ್ ಅನ್ ಲೈನ್ ವೆಬ್ ಮೀಡಿಯಾದೊಂದಿಗೆ ಪ್ರತಿಕ್ರಿಯೆಸಿದ್ದಾರೆ..