ಸುದ್ದಿ ಜಗಳೂರು:-
ಹಿರೆಮಲ್ಲನಹೋಳೆ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮಗು ಸಾವನ್ನಪ್ಪಿದ ಘಟನೆ ಜರುಗಿದೆ . ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಗ್ರಾಪಂ ವತಿಯಿಂದ 25 ಸಾವಿರ ಪರಿಹಾರ ಹಾಗೂ ಶಾಸಕರು ವಯಕ್ತಿಕವಾಗಿ 25 ಸಾವಿರ ಧನಸಹಾಯ ನೀಡಿ ಪ್ರಕೃತಿ ವಿಕೋಪದಡಿಯಲ್ಲಿ ಸರ್ಕಾರದಿಂದ 5 ಲಕ್ಷ ಪರಿಹಾರ ಕೋಡಿಸುವ ಭರವಸೆ ನೀಡಿದರು
: ತಾಲ್ಲೂಕಿನ ಹಿರೆಮಲ್ಲನಹೋಳೆ ಗ್ರಾಮದಲ್ಲಿ ಒಂದು ವರೆ ವರ್ಷದ ಮಗು ಆಟವಾಡುತಾ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದೆ.ಮಗುವನ್ನ ಮನೆಯ ಒಳಗಡೆ ಬಿಟ್ಟು ಮನೆಯ ಹೊರಗಡೆ ಎಂದಿನಂತೆ ತಾಯಿಯಾದ ರುಬಿಯಾ ಬಟ್ಟೆ ತೊಳೆಯುತ್ತಿರುವ ಸಂದರ್ಭದಲ್ಲಿ ಮಗು ಆಟವಾಡುತಲೆ ಮನೆ ಮುಂದೆ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದೆ ಇದನ್ನ ಕಂಡ ಗ್ರಾಮಸ್ಥರ ಸಹಕಾರದಿಂದ ಮಗುವಿನ ಶವವನ್ನ ಹೊರತೆಗೆದು ಅತ್ತಿರದ ಜಗಳೂರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಯೇ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ . ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನ ಕಂಡ ತಾಯಿ ಕಿರುಚಾಡಿದ್ದಾಳೆ ಗ್ರಾಮಸ್ಥರ ಸಹಕಾರದಿಂದ ಶವ ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಷ್ಠರಲ್ಲಿಯೆ ಅಷ್ಟೊತ್ತಿಗೆ ಆಗಲೆ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ . ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಮೃತ ಮಗುವಿನ ಪೋಷಕರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಬರುವ ನೆರೆ ಸಂತ್ರಸ್ತರ ಪರಿಹಾರವನ್ನ ಶೀಘ್ರವೆ ಕೋಡಿಸಲಾಗುವುದು
.ತಾಲ್ಲೂಕು ಆಡಳಿತ ವತಿಯಿಂದ ಮಕ್ಕಳ ಬಗ್ಗೆ ಸುರಕ್ಷಿತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಗಾರ ಆರಂಭಿಸಲಾಗುವುದು ಎಂದು ತಿಳಿಸಿದರು. ಮೊನ್ನೆ ಸುರಿದ ಮಳೆಗೆ ಕೆರೆ ತುಂಬಿದ ಹಿನ್ನೆಲೆಯಲ್ಲಿ ಗ್ರಾಮದೋಳಗೆ ನೀರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಮನೆಗಳ ಮುಂದೆ ನೀರು ಹರಿಯುತ್ತಿದ್ದವು ಎನ್ನಲಾಗಿದೆ. ಗಗನ ಎಂಬ ಮಗು ಮೃತ ತಂದೆ ಸುನಿಲ್ ಮತ್ತು ರುಬಿಯಾ ಹಾಗೂ ಸಂಬಂಧಿಕರ ಗೋಳಿನ ರೋಧನ ಮುಗಿಲು ಮುಟ್ಟುವಂತಿತ್ತು .ಆಸ್ಪತ್ರೆ ಶವಗಾರ ಕೊಠಡಿಯಲ್ಲಿ ಮಗುವಿನ ಪೋಸ್ಟ್ ಮಾಟಂ ಮಾಡಿ ಪೋಷಕರಿಗೆ ಅಸ್ತಂತರಿಸಲಾಯಿತು.ಗ್ರಾಮದಲ್ಲಿ ಹಸುಳೆ ಸಾವಿನ ಸುದ್ದಿ ಕೇಳಿ ಎಂತವರಿಗೂ ಕರುಳು ಚುರುಕ್ಕೆನುವಂತಿತ್ತು
ಈ ವೇಳೆ ಶಾಸಕ ಬಿ ದೇವೇಂದ್ರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಕ್ಷಣವೆ ಸಂಬಂಧಿಸಿದ ಗ್ರಾಪಂ ವತಿಯಿಂದ ಮೃತ ಮಗುವಿನ ಪೋಷಕರಿಗೆ 25 ಸಾವಿರ ಪರಿಹಾರದ ಚೆಕ್ ವಿತರಿಸಿ ಹಾಗೂ ವಯಕ್ತಿಕ 25 ಸಾವಿರ ಸಹಾಯಧನ ಸೇರಿದಂತೆ ಒಟ್ಟು 50 ಸಾವಿರ ರೂಗಳನ್ನ ಸಂತ್ರಸ್ತರಿಗೆ ವಿತರಿಸಿ ಇಂತ ಅನಾಹುತಗಳು ನಡೆಯದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಕೆರೆ ಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷಿತೆ ಬಗ್ಗೆ ಜಾಗೃತಿ ಕಾರ್ಯಗಾರ ಮಾಡುವ ಮೂಲಕ ಟಾಂ ಟಾಂ ಹೊಡೆಸಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಆ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ವಾಸಿಸಲು ಶೆಡ್ ನಿರ್ಮಿಸುವಂತೆ ತಹಶೀಲ್ದಾರ ಸೈಯದ್ ಖಲೀಂವುಲಾ ರವರಿಗೆ ಸೂಚನೆ ನೀಡಿದರು ಶೆಡ್ ನಿರ್ಮಿಸುವ ತನಕ ಶೀಘ್ರವೆ ಸಂತ್ರಸ್ತರನ್ನು ಹಿರೆಮಲ್ಲನಹೋಳೆ ಗ್ರಾಮದ ಪಕ್ಕದಲ್ಲಿರುವ ಬಿ ಸಿ ಎಂ ಹಾಸ್ಟೆಲ್ ನಲ್ಲಿ ವ್ಯವಸ್ಥೆ ಕಲ್ಪಿಸಿ ಊಟ ಉಪಚಾರ ಒದಗಿಸುವಂತೆ ತಾಪಂ ಇಓ ಕೆಂಚಪ್ಪರವರಿಗೆ ತಾಕೀತು ಮಾಡಿದರು. ಆರೋಗ್ಯ ಇಲಾಖೆಯವರು ತಾತ್ಕಾಲಿಕವಾಗಿ ಚಿಕಿತ್ಸೆ ಕೇಂದ್ರ ತೆರೆಯುವಂತೆ ತಿಳಿಸಿದರು
ಈ ಸಂದರ್ಭದಲ್ಲಿ .ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ .ಬಿ ಮಹೇಶ್ವರಪ್ಪ.ಆರ್ ಐ ಧನುಂಜಯ್..ಪ್ರಾಂಶುಪಾಲರಾದ ನಾಗಲಿಂಗಪ್ಪ. ಟಿ.ಹೆಚ್ ಓ ವೀಶ್ವನಾಥ.ಡಿ ಎಸ್ ಎಸ್ ಸಂಚಾಲಕ ಸೂರಗೊಂಡನಹಳ್ಳಿ ಕುಬೇರಪ್ಪ.ವಕೀಲ ಹನುಮಂತಪ್ಪ.ಮುಖಂಡ ಮಾಳಮ್ಮನಹಳ್ಳಿ ವೇಂಕಟೇಶ. ಹಟ್ಟಿ ತಿಪ್ಪೇಸ್ವಾಮಿ. ಗ್ರಾಮದ ಮುಖಂಡರಾದ ಬಾಣೇಶ್ .ರಾಜಣ್ಣ. ಸೇರಿದಂತೆ ಹಾಜುರಿದ್ದರು.