ವೈಭವದ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ಸಂಜೆ ನೆರವೇರಿತು

ಶುಕ್ರದೆಸೆ ನ್ಯೂಸ್: ಕಲ್ಲೇದೇವರಪುರದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಂದು ನೆರವೇರಿತು

ಕಲ್ಲೇಶ್ವರ ಸ್ವಾಮಿಯ ರಥೋತ್ಸವಕ್ಕೆ ನಾನಾ ಬಣ್ಣಗಳ ಬಾವುಟ ಹಾಗೂ ನಾನಾ ಬಗೆಯ ಹೂಗಳಿಂದ ಶೃಂಗಾರಗೊಳಿಸಲಾಯಿತು.ಹರಕೆ ಹೊತ್ತ ಭಕ್ತರು ನಾನಾ ಹೂಗಳನ್ನು ಬೃಹತ್ ಹಾರಗಳನ್ನು ವಾದ್ಯಗಳ ಮೂಲಕ ಮೆರವಣೆಗೆಯಲ್ಲಿ ತಂದು ಸ್ವಾಮಿಯ ರಥಕ್ಕೆ ಅರ್ಪಿಸಿದರು..

ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮದ ಶರಣಪ್ಪ 1.ಲಕ್ಷದ1ಸಾವಿರದ ಒಂದು ರೂಪಾಯಿಗೆ ಶ್ರೀ ಕಲ್ಲೇಶ್ವರ ಸ್ವಾಮಿ ಬಾವುಟ ತಮ್ಮದಾಗಿಸಿಕೊಂಡರು.

ನಂತರ ಮೂಲಸ್ಧಾನದಿಂದ ಪಾದಗಟ್ಟಿವರೆಗೆ.ನಂದಿಕೋಲು,
ಕುಣೆತ,ಹಾಗೂ ನಾನಾ ಜನಪದ ವಾದ್ಯಗಳೊಂದಿಗೆ, ಭಕ್ತರು ರಥವನ್ನು ಎಳೆದರು

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಸುತ್ತ ಮುತ್ತಲಿನ ಆಪಾರ ಭಕ್ತರು .ರಥೋತ್ಸವಕ್ಕೆ ತೆಂಗಿನ ಕಾಯಿ.ಬಾಳೆ ಹಣ್ಣು ಎಸೆದು ಭಕ್ತಿಭಾವ ಮೆರೆದರು.
ಹಣ್ಣು.ಸೂರಬೆಲ್ಲ.ಹೂವಿನ ಹಾರಗಳನ್ನು ದೇವರಿಗೆ ಭಕ್ತಿ ಸಮರ್ಪಿಸಿದರು ಮತ್ತು ವೀರಗಾಸೆ.ಜಾನಪದ ವಾದ್ಯಗಳೊಂದಿ
ಗೆ ದೇವರನ್ನು ಪಲ್ಲಕ್ಕಿಯಲ್ಲಿ ಕರೆ ತರಲಾಯಿತು..
ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಸ್ವಾಮಿಯನ್ನು ನೆನೆದು ಬಾಳೆಹಣ್ಣು.ಸೂರಬೆಲ.ಮೆಣಸು. ರಥೋತ್ಸವದ ಗಾಲಿಗೆ ಹಣ್ಣು ಕಾಯಿ ಹೊಡೆಯುವುದರ ಮೂಲಕ ಶ್ರೀ ಕಲ್ಲೇಶ್ವರ ಸ್ವಾಮಿ ಭಕ್ತಿ ಕೃಪೆಗೆ ಪಾತ್ರರಾದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ ಸಂತೋಷಕುಮಾರ್ ಹಾಗೂ.ರಥೋತ್ಸವದಲ್ಲಿ ವಿವಿಧ ರಾಜಕೀಯ ಗಣ್ಯಮಾನ್ಯರಾದ ಮಾಜಿ ಶಾಸಕ ಹೆಚ್ ಪಿ ರಾಜೇಶ್. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ. ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷರಾದ ಕೆ ಪಿ ಪಾಲಯ್ಯ.ನಿವೃತ್ತ ಡಿ ವೈ ಎಸ್ ಪಿ ಕಲ್ಲೇಶಪ್ಪ. ಕಲ್ಲೇಶ್ವರ್ ಸ್ವಾಮಿ ಸಮಿತಿ ಅಧ್ಯಕ್ಷ ಶರಣಪ್ಪ. ಗ್ರಾಮದ ಮುಖಂಡರಾದ ಸಣ್ಣ ಸೂರಜ್ಜ.ಗ್ರಾಪಂ ಅಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

You missed

error: Content is protected !!