ಶುಕ್ರದೆಸೆ ನ್ಯೂಸ್ : ಜಗಳೂರು ತಾಲೂಕಿನ ಬಿದರಕೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪವಿತ್ರ ವೀರೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಘೋಷಿಸಿದ್ದಾರೆ.
ತಾಲೂಕಿನ ಬಿದರಕೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪವಿತ್ರ ವೀರೇಶ್ ಅವಿರೋಧ ಆಯ್ಕೆಯಾಗಿದ್ದಾರೆ
-ಬಿದರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿದರಕೆರೆ ಗೊಲ್ಲರಹಟ್ಟಿ ಪವಿತ್ರ ವೀರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಹಿಂದೆ ಅದ್ಯಕ್ಷರಾಗಿದ್ದ ಪ್ರೇಮಲೀಲಾರವರು ಅಧ್ಯಕ್ಷರ ಸ್ಥಾನಕ್ಕೆ ಕಾರಣಂತರದಿಂದ ರಾಜಿನಾಮೆ ಸಲ್ಲಿಸಿದ್ದರಿಂದ ತೆರವಾದ ಹಿನ್ನಲೆಯಲ್ಲಿ ಇಂದು ನಡೆದ ಸಾಮಾನ್ಯ ಮಹಿಳಾ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು ಇವರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಸದಸ್ಯರ ಬಹುಮತದೊಂದಿಗೆ ಅವಿರೋಧವಾಗಿ ಆದ್ಯಕ್ಷರಾಗಿ ಪವಿತ್ರ ವೀರೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ಘೋಷಣೆ ಮಾಡಿದರು.
ಗ್ರಾಪಂ ನಲ್ಲಿ ಒಟ್ಟು 16 ಜನ ಸದಸ್ಯರಿದ್ದು.ಸರ್ವ ಸದಸ್ಯರ ಸರ್ವಾನುಮತ ದಿಂದ ಅವಿರೋಧವಾಗಿ ನನ್ನನ್ನು ಆಯ್ಕೆಯಾಗಲು ಸಹಕರಿಸಿ ಎಲ್ಲಾ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳುನ್ನು ನೂತನ ಅಧ್ಯಕ್ಷೆ ಪವಿತ್ರ ವೀರೇಶ್ ತಿಳಿಸಿದರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಸಹ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ ಸಾರ್ವಜನಿಕರ ಅಹವಾಲುಗಳಿಗೆ ಸದಾ ಸ್ಪಂದಿಸಿ ಸೇವೆ ಮಾಡುವ ಮೂಲಕ ಗ್ರಾಮಪಂಚಾಯಿತಿ ಅನುದಾನ ಸಮರ್ಪಕ ಅನು ಷ್ಠಾನಗೊಳಿಸಲು ಸದಾ ಬದ್ದವಾಗಿದ್ದೆನೆ ನನಗೆ ಸರ್ವ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರುಳಸಿದ್ದಪ್ಪ .ಉಪಾಧ್ಯಕ್ಷರಾದ ಪ್ರೇಮ ಕೆಂಚಪ್ಪ.ಮಾಜಿ ಅಧ್ಯಕ್ಷರಾದ ಪ್ರೇಮಲೀಲಾ. ಸದಸ್ಯರಾದ ನಾಗರಾಜ್.ಶಿವಲಿಂಗಮ್ಮ. ರತ್ನಮ್ಮ. ಮಹಾಂತೇಶ್. ಚಂದ್ರಶೇಖರಪ್ಪ. ಗೌರಮ್ಮ. ತಿಪ್ಪೇಶ. ರಾಧಾಕೃಷ್ಣ. ಶಿವರುದ್ರಪ್ಪ. ಪ್ರಸನ್ನಕುಮಾರ. ಮಂಗಳಮ್ಮ. ಮುನಿಯಪ್ಪ. ಗಿರಿಜಮ್ಮ ಬಿಜೆಪಿ ಮುಖಂಡರಾದ ರವಿಕುಮಾರ್ ಬಿದರಕೆರೆ. ತಾ.ಪಂ ಮಾಜಿ ಸದಸ್ಯ ಇ ಪ್ರಕಾಶ್ .ಬಸವರಾಜ್. ಗುತ್ತಿಗೆದಾರರಾದ ಬಾಲರಾಜ್. ವೀರೇಶ್. ಸೇರಿದಂತೆ ಸಿಬ್ಬಂದಿಗಳು ಸಾರ್ವಜನಿಕರು ಹಾಜರಿದ್ದರು