ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಬಿ ದೇವೇಂದ್ರಪ್ಪ ಕರೆ ನೀಡಿದರು
ಜಗಳೂರು ಪಟ್ಟಣದ ಬಯಲು ರಂಗಮಂದಿರ ವೇದಿಕೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ನಾಡ ಧ್ವಜಾವಂದನೆ ಸ್ವೀಕರಿಸಿ ವೇದಿಕೆ ದಿವ್ಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು
ಕನ್ನಡ ರಾಜ್ಯೋತ್ಸವ ಒಂದು ದಿನದ ರಾಜ್ಯೋತ್ಸವವಾಗಿ ರಾರಾಜಿಸಿದರೆ ಸಾಲದು ಇದು ನಿತ್ಯತ್ಸೋವವಾಗಬೇಕು .ನಮ್ಮ ನಾಡು ನುಡಿ. ನೆಲ. ಜಲ .ಭಾಷೆ
ಪ್ರತಿಯೊಬ್ಬ ಕನ್ನಡಿಗನ ಉಸಿರು ಪ್ರತಿ ವರ್ಷ ನವೆಂಬರ್ 1 ರಂದು ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು .
ಅಂದು ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಕರ್ನಾಟಕ ಹರಿದು ಹಂಚಿಹೋಗಿತ್ತು ತದ ನಂತರ 391 ವರ್ಷಗಳ ನಂತರ ಕರ್ನಾಟಕ ಏಕಿಕರಣವಾಗಿ ಏಕೀಕೃತ ರಾಜ್ಯವಾದ ನವೆಂಬರ್ 1, , ಕರ್ನಾಟಕ ರಾಜ್ಯವೆಂದು ಮರುನಾಮಕರಣಗೊಂಡ ನವೆಂಬರ್ 1 ರ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ಸಂಭ್ರಮದ ದಿನವಾಗಿದೆ ಈ ನಾಡಿನಲ್ಲಿ ಪ್ರಸ್ತುತ ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ನಾಯಕರಲ್ಲ ಜನನಾಯಕರಾಗಿ ಜನರಪರ ಆಡಳಿತದ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಆಡಳಿತಕ್ಕೆ ಸಾಕ್ಷಿಯಾಗಿದ್ದಾರೆ.ಕನ್ನಡ ನಾಡಿನ ಕಲೆ ಸಾಂಸ್ಕೃತಿಕವಾಗಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ರಾಜ್ಯೋತ್ಸವ ಪ್ರಶಸ್ತಿ ಅರ್ಪಿಸಿ ಗೌರವಿಸಿದಂತೆ ನಾವುಗಳ ಸಹ ಇಲ್ಲಿನ ಸಾಧಕರುನ್ನ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ .ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕನ್ನಡ ಹಾಡಿಗೆ ನೃತ್ಯದ ಮೂಲಕ ಕನ್ನಡ ನಾಡಿನ ಸಂದೇಶ ಸಾರಿದ್ದಾರೆ.ಆದರೆ ಕನ್ನಡ ನಾಡು ನುಡಿ ಸಂದೇಶಗಳನ್ನು ತಿಳಿಯಬೇಕಾದ ನಾವುಗಳು ಇತ್ತೀಚಿಗೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗು ತಹಶೀಲ್ದಾರ ಸೈಯದ್ ಖಲೀಂ ಉಲಾ ಮಾತನಾಡಿದರು ಕನ್ನಡ ನಾಡಿನಲ್ಲಿ ಅನೇಕ ಜನಪದರು.ರೈತರು.ಜನಸಾಮಾನ್ಯರು .ಸಾಹಿತಿಗಳು. ಕವಿಗಳು .ಋಷಿಮುನಿಗಳು .ರಾಜಕೀಯ ಪರಿಣಿತರು ಕಟ್ಟಿ ಬೆಳೆಸಿದ ನಾಡು ಅಂದು ಮೈಸೂರು ಸಂಸ್ಥಾನ .ಹೈದರಾಬಾದ್. ಮುಂಬಯಿ .ಮಾದ್ರಸ್ ಕರ್ನಾಟಕ ಎಂದು ಹರಿದು ಹಂಚಿಹೋಗಿದ್ದ ಕರ್ನಾಟಕದಲ್ಲಿ ವಾಸಿಸುವಂತ ನಾವುಗಳು ಜಾತಿ ಮತ ಪಂಥ.ಧರ್ಮ ಎಲ್ಲಾವನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣವಾಗಿ ಉದಯವಾದ ಈ ಚಲುವ ಕನ್ನಡ ನಾಡಿನ ಇತಿಹಾಸ ಭವ್ಯ ಪರಂಪರೆ ಸಮೃದ್ದ ಹಾಸುಹೊಕ್ಕಾಗಿದೆ ನಮ್ಮ ಭಾಷೆಯನ್ನ ಪ್ರತಿಯೊಬ್ಬ ಗೌರವಿಸೋಣ ಎಂದರು.
ಪ್ರಾಸ್ತಾವಿಕವಾಗಿ ನಿವೃತ್ತ ಉಪನ್ಯಾಸಕ ಡಿ.ಸಿ ಮಲ್ಲಿಕಾರ್ಜುನ ಮಾತನಾಡಿದರು ಕನ್ನಡಿಗರಾದ ನಾವು ವಿಶಾಲ ಹೃದಯದಿಂದ ಅನ್ಯಭಾಷೆಗರನ್ನು ಅಪ್ಪಿಕೊಂಡು ಒಪ್ಪಿಕೊಂಡು ನಮ್ಮ ರಾಜ್ಯಧಾನಿಯಾದ ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡಿಗರು ಕ್ಷೀಣಿಸುವಂತಾಗಿದೆ . ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು ಎಂದರು ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಆಹಮದ್ ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ. ತಾಪಂ ಇಓ ಕೆಂಚಪ್ಪ. ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸರಾವ್.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಬಿ.ಇ.ಓ ಹಾಲಮೂರ್ತಿ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ. ಬಾವಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ…ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಇಇ ಸಾಧಿಕ್ ಉಲ್.ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ.ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ . ಪಪಂ ನಾಮನಿರ್ದೇಶನ ಸದಸ್ಯರಾದ ಕುರಿಜಯ್ಯಣ್ಣ. ಶಾಂತಣ್ಣ. ಸಣ್ಣತಾನಾಜಿ ಗೋಸಾಯಿ.ಕಸಾಪ ಅದ್ಯಕ್ಷೆ ಸುಜಾತ. ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಮಲೆಮಾಚಿಕೆರೆ ಸತೀಶ್ .ಸನ್ಮಾನಿತರಾದ ಕೃಷ್ಣಮೂರ್ತಿ. ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್. ಸಿ ಆರ್.ಪಿ ಆಂಜನೇಯ . ಕಸಾಪ.ಬಿಳಿಚೋಡು ಹೊಬಳಿ ಘಟಕದ ಅದ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ .ಸೇರಿದಂತೆ ಕನ್ನಡಪರ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ತಾಲ್ಲೂಕು ಮಟ್ಟದ ಅಧಿಕಾರಿಗಳು .ವಿವಿಧ ಶಾಲಾ ಮಕ್ಕಳು ಹಾಜುರಿದ್ದರು.