ನಿರಾಶ್ರಿತರ ತಾತ್ಕಾಲಿಕ ವಸತಿಗೆ ಪ್ರೌಢಶಾಲೆ ಅವರಣದಲ್ಲಿ ಶೆಡ್ ನಿರ್ಮಾಣ:ಶಾಸಕ.ಬಿ.ದೇವೇಂದ್ರಪ್ಪ.
ಜಗಳೂರು ಸುದ್ದಿ:ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ 35ಕುಟುಂಬಗಳ ನಿರಾಶ್ರಿತರಿಗೆ ವಸತಿಗೆ ಪ್ರೌಢಶಾಲೆ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡಲಾಗುವುದು.ಸದ್ಯಕ್ಕೆ ಇಂದಿನಿಂದ ಬಿಸಿಎಂ ಹಾಸ್ಟೆಲ್ ನಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಶಾಸಕ.ಬಿ.ದೇವೇಂದ್ರಪ್ಪ ತಿಳಿಸಿದರು.
ಸುದ್ದಿ.ಜಗಳೂರು
ತಾಲೂಕಿನ ಹಿರೇಮಲ್ಲನಹೊಳೆ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಮೊತ್ತದ ಚೆಕ್ ವಿತರಿಸಿ ನಂತರ ಜಲಾವೃತ ಪ್ರದೇಶ,ಕೆರೆ ಅಂಗಳ,ಸಂಗೇನಹಳ್ಳಿ ಕೆರೆ ಕೋಡಿ ವೀಕ್ಷಿಸಿ ನಂತರ ಮಾತನಾಡಿದರು.
ಸರ್ಕಾರಿ ಜಮೀನಿನಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಲಾಗುವುದು.ಕಾಳಜಿಕೇಂದ್ರ ತೊರೆದು ಯಾವುದೇ ಕಾರಣಕ್ಕೂ ಕೆರೆಅಂಗಳದ ತಮ್ಮ ಮೂಲವಸತಿಮನೆಗಳಿಗೆ ತೆರಳಬೇಡಿ.ಪೋಷಕರು ಅಧಿಕಾರಿಗಳ ಕರೆಗೆ ಸ್ಪಂದಿಸಬೇಕು.ನೆರೆ ಹಾವಳಿ ಮುಕ್ತಾಯವಾಗುವತನಕ ಗುಣಮಟ್ಟದ ಊಟ,ವಸತಿ ನೀಡಲಾಗುವುದು.ಆತಂಕಬೇಡ ಪೋಷಕರು ಮಕ್ಕಳನ್ನು ನೀರಿನಿಂದ ದೂರವಿಡಿ ಎಂದು ಹೇಳಿದರು.
ಭರಮಸಮುದ್ರ ಕೆರೆಕೋಡಿ ಬಿದ್ದ ಪರಿಣಾಮ ಉದ್ಗಟ್ಟದಲ್ಲಿ 25ಕುಟುಂಬಗಳು ಬೀದಿಗೆ ಬಿದ್ದಿವೆ.ಅವರಿಗೂ ಸ.ನಂ.53ರಲ್ಲಿ 5ಎಕರೆ ವ್ಯಾಪ್ತಿ ಸರ್ಕಾರಿ ಜಮೀನಿನಲ್ಲಿ ಸೂರು ಕಲ್ಪಿಸಲಾಗುವುದು ಎಂದರು.
ಸಿಇಓ ಸುರೇಶ್ ಇಟ್ನಾಳ್ ಮಾತನಾಡಿ’,ಕೆರೆ ಅಂಗಳದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳದೆ ಸುರಕ್ಷಿತ ಜಾಗದಲ್ಲಿ ವಾಸಮಾಡಬೇಕು.ಮನರೇಗಾದಡಿ ಕೆರೆಕೋಡಿಗಳ ಸುತ್ತ ಸ್ವಚ್ಛತಾ ಕಾರ್ಯ,ಜಂಗಲ್ ಕಟ್ಟಿಂಗ್ ಕಾಮಗಾರಿ ನಡೆಸಲಾಗುವುದು.ನೀರಿಲ್ಲದ ಕೆರೆಗಳಲ್ಲಿ ಸಂಬಂಧಿಸಿದ ಜಿ.ಪಂ,ಎಂಐ,ಗ್ರಾ.ಪಂ.ವ್ಯಾಪ್ತಿಯಲ್ಲಿ ಹೂಳೆತ್ತಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್,ಉಪವಿಭಾಗ ಅಧಿಕಾರಿ ಸಂತೋಷ್ ಕುಮಾರ್,ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,ತಾ.ಪಂ ಇಓ ಕೆಂಚಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್,ಮುಖಂಡರಾದ ಗೌಸ್ ಅಹಮ್ಮದ್,ಕುಬೇಂದ್ರಪ್ಪ,ಪೂಜಾರ ಸಿದ್ದಪ್ಪ,ಧನ್ಯಕುಮಾರ್,ಬಿಇಓ ಹಾಲಮೂರ್ತಿ,ಪಿಡಬ್ಲೂಡಿ ಎಇಇ ನಾಗರಾಜ್,ಜಿ.ಪಂ.ಎಇಇ ಶಿವಮೂರ್ತಿ,ಆರ್ ಐ ಧನಂಜಯ್,ಸಿಡಿಪಿಓ ಬೀರೇಂದ್ರಕುಮಾರ್,ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.